ವಿಶ್ವಕರ್ಮದಲ್ಲಿನ ನೈಜ ಕಂಬಾರರಿಗೆ ಮಾತ್ರ ನಿಗಮದ ಸವಲತ್ತು ದೊರೆಯಲಿ: ದೇವೀಂದ್ರ ದೇಸಾಯಿ ಕಲ್ಲೂರ ಒತ್ತಾಯ

ವಿಶ್ವಕರ್ಮದಲ್ಲಿನ ನೈಜ ಕಂಬಾರರಿಗೆ ಮಾತ್ರ ನಿಗಮದ ಸವಲತ್ತು ದೊರೆಯಲಿ: ದೇವೀಂದ್ರ ದೇಸಾಯಿ ಕಲ್ಲೂರ ಒತ್ತಾಯ

ವಿಶ್ವಕರ್ಮದಲ್ಲಿನ ನೈಜ ಕಂಬಾರರಿಗೆ ಮಾತ್ರ ನಿಗಮದ ಸವಲತ್ತು ದೊರೆಯಲಿ: ದೇವೀಂದ್ರ ದೇಸಾಯಿ ಕಲ್ಲೂರ ಒತ್ತಾಯ

ಕಲಬುರಗಿ: ಕುಲಕಸಬುಗಳಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಸಮುದಾಯದೊಳಗೆ ಬರುವ ಪಂಚಮಸಾಲಿಗಳಾಗಿದ್ದಾರೆ. ಆದರೆ ಇತ್ತೀಚಿಗೆ ಕಾಯಕದಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸವಲತ್ತುಗಳು ನೀಡಬೇಕು ಎಂದು ಹೇಳಿದ್ದು, ನಿಗಮದಿಂದ ಯಾವುದೇ ಸವಲತ್ತುಗಳು ನೀಡಬಾರದು ಎಂದು ವಿಶ್ವಕರ್ಮ ಹೋರಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಒತ್ತಾಯಿಸಿದ್ದಾರೆ. 

ಕಾಯಕ ರೂಪದಲ್ಲಿ ಅನೇಕರು ಕಂಬಾರಿಕೆ, ಬಡಗೆತನ, ಅಕ್ಕಸಾಲಿಗ, ಸೇರಿದಂತೆ ಅನೇಕ ಕೆಲಸಗಳಲ್ಲಿ ವಿವಿಧ ಸಮುದಾಯದ ಜನರು ತೊಡಗಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯ ಮತ್ತು ಮುಸ್ಲಿಂ ಧರ್ಮಗಳಲ್ಲಿನ ಅನೇಕರು ಇಂದು ಅಕ್ಕಸಾಲಿಗ ವೃತ್ತಿಯಲ್ಲಿ ಇದ್ದಾರೆ. ಆದರೆ ಅವರಾರು ವಿಶ್ವಕರ್ಮ ಸಮಾಜದಲ್ಲಿ ಬರುವುದಿಲ್ಲ. ಅದರಂತೆ ಕಂಬಾರಿಕೆಯಲ್ಲಿ ಮುಸ್ಲಿಂರು ಸೇರಿದಂತೆ ಲಿಂಗಾಯತ ಅನಿಸಿಕೊಂಡವರು ಕೂಡ ಕಂಬಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವಗುರು ಬಸವೇಶ್ವರ ಕಾಲದಲ್ಲಿ ಕಾಯಕವೇ ಕೈಲಾಸ ಎಂಬ ಪರಿಕಲ್ಪನೆಯಲ್ಲಿ ಅನೇಕರು ತಮಗೆ ಇಷ್ಟಬಂದ ವೃತ್ತಿಯಲ್ಲಿ ತೊಡಗಿಸಿಕೊಂಡು ಬಂದವರಾಗಿದ್ದಾರೆ. ಅದರಂತೆ ಮುಸ್ಲಿಂ ಸಮುದಾಯದಲ್ಲಿ ಇಂದಿಗೂ ಅನೇಕರು ಕಂಬಾರಿಕೆಯ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಅವರು ಗ್ರಾಮಗಳಿಗೆ ಸುತ್ತಾಡಿಕೊಂಡು ಕಂಬಾರಿಕೆಯಿAದ ತಮ್ಮ ವೃತ್ತಿಯನ್ನು ಅವಲಂಭಿಸಿಕೊAಡು ಜೀವನ ನಡೆಸುತ್ತಿದ್ದಾರೆ. ಇದರಿಂದ ಅವರ ಮೂಲ ಜಾತಿಯಲ್ಲಿ ಬದಲಾವಣೆಯಾಗುವುದಿಲ್ಲ. ಕಂಬಾರಿಕೆಯಲ್ಲಿ ತೊಡಗಿಸಿಕೊಂಡ ಮುಸ್ಲಿಂ ಸಮುದಾಯವರು ಆಗಲಿ ಅಥವಾ ಇತರೆ ಸಮುದಾಯದವರಾಗಲಿ ವಿಶ್ವಕರ್ಮ ಅಭಿವೃದ್ದಿ ನಿಗಮದಿಂದ ಸವಲತ್ತು ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆ. 22 ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆರಂಭವಾಗಲಿದೆ. ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮುದಾಯಗಳಲ್ಲಿನ ಕಂಬಾರರು ಹೊರತು ಪಡಿಸಿ , ಕಾಯಕದಲ್ಲಿ ತೊಡಗಿಕೊಂಡವರು ತಮ್ಮ ಮೂಲ ಜಾತಿಯನ್ನು ಮಾತ್ರ ಬರೆಸಬೇಕು, ಕಾಯಕವನ್ನು ಅವಲಂಭಿತರಾದ ಕಂಬಾರಿಕೆ ವೃತ್ತಿಯವರು ತಮ್ಮ ಮೂಲ ಜಾತಿ-ಧರ್ಮ ನಮೂಧಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ಪ್ರಕರಣ ಕಂಡಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಅಧಿಕಾರಿಗಳು ನೈಜ ವಿಶ್ವಕರ್ಮ ಸಮುದಾಯದವರನ್ನು ಸರಿಯಾಗಿ ಗುರುತಿಸಬೇಕು. ಕಂಬಾರರು ಎಂಬ ಜಾತಿ ಪ್ರಮಾಣ ಪತ್ರ ಹಿಡಿದುಕೊಂಡ ಬಂದವರನ್ನು ವಿಶ್ವಕರ್ಮ ಸಮುದಾಯಗಳಲ್ಲಿ ಬರಬಹುದೇ ಎಂದು ಸರಿಯಾಗಿ ಗುರುತಿಸಬೇಕು. ಸುಳ್ಳು ಮಾಹಿತಿ ನೀಡದವರನ್ನು ಕೂಡಲೇ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಸ್ಪಷ್ಟ ಮಾಹಿತಿ ಪಡೆದು ತಪ್ಪಿತಸ್ಥರು ಎಂದು ಕಂಡ ಬಂದಲ್ಲಿ ಅಂತಹವರ ವಿರುದ್ದ ಜಾತಿ ದುರುಪಯೋಗ ಪ್ರಕರಣ ದಾಖಲಿಸಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರು ಒತ್ತಾಯಿಸಿದ್ದಾರೆ.