ಆಳಂದದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ೪೭ನೇ ಜನ್ಮದಿನ: ಅನ್ನಸಂತರ್ಪಣೆ

ಆಳಂದದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ೪೭ನೇ ಜನ್ಮದಿನ: ಅನ್ನಸಂತರ್ಪಣೆ

ಆಳಂದದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ೪೭ನೇ ಜನ್ಮದಿನ: ಅನ್ನಸಂತರ್ಪಣೆ ಕಾರ್ಯಕ್ರಮದೊಂದಿಗೆ ಆಚರಣೆ – ಡಾ. ಅಂಬೇಡ್ಕರ್ ಮತ್ತು ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕಲಬುರ್ಗಿ ಜಿಲ್ಲೆ, ಆಳಂದ ಪಟ್ಟಣ – ನವೆಂಬರ್ ೨೨ : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರೂ ಆದ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆಯವರ ೪೭ನೇ ಜನ್ಮದಿನವನ್ನು ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಸರಳವಾಗಿ ಆದರೆ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕೆ.ಎಮ್.ಎಫ. ಅಧ್ಯಕ್ಷ ಆರ್.ಕೆ.ಪಾಟೀಲರ ಅಪ್ಪಟ ಅಭಿಮಾನಿ ತಥಾಗತ ಮೂಲಭಾರತಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದ ಮೂಲಕ ಸಚಿವರ ಜನ್ಮದಿನವನ್ನು ಸಾರ್ಥಕಗೊಳಿಸಲಾಯಿತು.

ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ತಥಾಗತ ಗೌತಮ ಬುದ್ಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಉದ್ಘಾಟಿಸಲಾಯಿತು. ನಂತರ ಸಾವಿರಾರು ಬಡ ಮತ್ತು ಅಗತ್ಯವಿರುವ ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಲಬುರ್ಗಿ ಜಿಲ್ಲಾ ಕೆ.ಎಂ.ಎಫ್. ಅಧ್ಯಕ್ಷ ಆರ್.ಕೆ. ಪಾಟೀಲ್ ಅವರು ಅನ್ನಸಂತರ್ಪಣೆ ಕಾರ್ಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ ಬಿರಾದಾರ್, ಮಂಟಗಿ ಹಿರಿಯ ದಲಿತ ಮುಖಂಡ ದಯಾನಂದ ಶೇರಿಕಾರ್, ಆರ್.ಪಿ.ಐ. ರಾಜ್ಯಾಧ್ಯಕ್ಷ ಪ್ರಕಾಶ್ ಮೂಲಭಾರತಿ, ವಕೀಲ ಹಾಗೂ ಸಮಾಜಸೇವಕ ದಿಲೀಪ ಕ್ಷೀರಸಾಗರ್, ಬುದ್ಧಪ್ರಿಯಾ, ಅಬ್ದುಲ ಖಾದರ್, ತಥಾಗತ ಮೂಲಭಾರತಿ, ಮಸ್ತಾನಸಾಬ ಮುಲ್ಲಾ, ಸೋಮಣ್ಣ ವಠಾರ, ಮಹೆಬೂಬ ತಂಬೋಳಿ, ಮಲ್ಲಿಕಾರ್ಜುನ ಬೋಳಣಿ, ಆನಂದ ನಡಗೇರಿ, ಧರ್ಮಾ ಬಂಗರಗಿ, ಸುದೀಪ ನಡಗೇರಿ, ತಾನಾಜಿ ಲವಟೆ, ಚಾಂದ ಪಾಷಾ ಜಮಾದಾರ, ರಫೀಕ ಕಿಂಗ್ ಸೇರಿದಂತೆ ಹಲವಾರು ಗಣ್ಯರು, ಸಮಾಜಸೇವಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

“ಸಚಿವ ಪ್ರಿಯಾಂಕ ಖರ್ಗೆ ಅವರು ಯಾವುದೇ ಆಡಂಬರವಿಲ್ಲದೆ, ಬಡವರಿಗೆ ಅನ್ನ ನೀಡುವ ಮೂಲಕ ಜನ್ಮದಿನ ಆಚರಿಸಬೇಕೆಂದು ಸೂಚಿಸಿದ್ದರು. ಅವರ ಆದೇಶದಂತೆ ಈ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು ಎಂದು ಆಯೋಜಕರಾದ ತಥಾಗತ ಮೂಲಭಾರತಿ ತಿಳಿಸಿದರು.

ಅಂಬೇಡ್ಕರ್ ಮತ್ತು ಬುದ್ಧರ ಆಶಯಗಳಿಗೆ ಗೌರವ ಸಲ್ಲಿಸುವ ಈ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಆಳಂದ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಚಿವ ಪ್ರಿಯಾಂಕ ಖರ್ಗೆ ಅವರ ಸಮಾಜಮುಖಿ ಕಾರ್ಯಗಳಿಗೆ ಈ ರೀತಿಯ ಸರಳ ಆಚರಣೆ ಸಾಕ್ಷಿಯಾಯಿತು ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.

ವರದಿ ಡಾ .ಅವಿನಾಶ. S. ದೇವನೂರ