ನವಜೀವನ ಮತ್ತು ಗಣೇಶ ನಗರದಲ್ಲಿ ಸಿಸಿ ರಸ್ತೆ ಲೋಕಾರ್ಪಣೆ

ನವಜೀವನ ಮತ್ತು ಗಣೇಶ ನಗರದಲ್ಲಿ ಸಿಸಿ ರಸ್ತೆ ಲೋಕಾರ್ಪಣೆ
ಕಲಬುರಗಿ: ದಕ್ಷಿಣ ಮತಕ್ಷೇತ್ರದ ವಾರ್ಡ್ ನಂ.54ರ ನವಜೀವನ ನಗರದಲ್ಲಿ **ಶಾಸಕರ ಅನುದಾನದಲ್ಲಿ ರೂ. 54 ಲಕ್ಷ** ವೆಚ್ಚದಲ್ಲಿ ನಿರ್ಮಿಸಿದ ಸಿಸಿ ರಸ್ತೆ ಮತ್ತು ವಾರ್ಡ್ ನಂ.55ರ ಗಣೇಶ ನಗರ ಹಾಗೂ ಶ್ರೀಹರಿ ನಗರದಲ್ಲಿ **ಕೆಕೆಆರ್‌ಡಿಬಿ ಅನುದಾನದಲ್ಲಿ ರೂ. 90 ಲಕ್ಷ** ವೆಚ್ಚದಲ್ಲಿ ನಿರ್ಮಿಸಿದ ಸಿಸಿ ರಸ್ತೆಗಳನ್ನು **ಶಾಸಕ ಅಲ್ಲಮಪ್ರಭು ಪಾಟೀಲ್** ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ **ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ**, ಮುಖಂಡರಾದ **ಅಶೋಕ ಪಾಟೀಲ್, ರವಿಂದ್ರ ವಿಭೂತಿ, ವಿನು ಕುಲಕರ್ಣಿ, ಮಹೇಶ ಸುಲೇಗಾಂಗ, ಅರುಣಕುಮಾರ ಮಹಾಶೇಟ್ಟಿ, ಶರಣ ಮಹಾಶೇಟ್ಟಿ** ಸೇರಿದಂತೆ ಬಡಾವಣೆಯ ಅನೇಕ ಮುಖಂಡರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
- ವರದಿ