‘AI ಗ್ರೀಡ್’ ರಚನೆ ಪ್ರಸ್ತಾಪಿಸಿದ ಸಚಿವ ಶರಣಪ್ರಕಾಶ ಪಾಟೀಲ – ಯುವಕರಿಗೆ ಎಐ ಕೌಶಲ್ಯಾಭಿವೃದ್ಧಿಗೆ ರಾಜ್ಯ ಸರಕಾರ ಗುರಿ

‘AI ಗ್ರೀಡ್’ ರಚನೆ ಪ್ರಸ್ತಾಪಿಸಿದ ಸಚಿವ ಶರಣಪ್ರಕಾಶ ಪಾಟೀಲ – ಯುವಕರಿಗೆ ಎಐ ಕೌಶಲ್ಯಾಭಿವೃದ್ಧಿಗೆ ರಾಜ್ಯ ಸರಕಾರ ಗುರಿ

‘AI ಗ್ರೀಡ್’ ರಚನೆ ಪ್ರಸ್ತಾಪಿಸಿದ ಸಚಿವ ಶರಣಪ್ರಕಾಶ ಪಾಟೀಲ – ಯುವಕರಿಗೆ ಎಐ ಕೌಶಲ್ಯಾಭಿವೃದ್ಧಿಗೆ ರಾಜ್ಯ ಸರಕಾರ ಗುರಿ

ಬೆಂಗಳೂರು, ನವೆಂಬರ್ 21, 2025:ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಇಂದು ನಡೆದ ಮಹತ್ವದ ಸಂವಾದದಲ್ಲಿ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರವನ್ನು ರಾಜ್ಯದ ಕೌಶಲ್ಯಾಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮಹದ್ದೇಶದಿಂದ AI ಗ್ರೀಡ್’ ರಚನೆ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಪ್ರಮುಖ ಪ್ರಸ್ತಾಪ ಮಂಡಿಸಿದರು. ಕಾರ್ಯಪಡೆಯ ವಿಭಾಗೀಯ ಮ್ಯಾಪಿಂಗ್ ಹಾಗೂ ಅಗತ್ಯ ತರಬೇತಿಯನ್ನು ವ್ಯವಸ್ಥಿತವಾಗಿ ಒದಗಿಸುವ ಮೂಲಕ ಯುವಕರಿಗೆ ಎಐ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ನಿರ್ಮಿಸಲು ಈ ಗ್ರೀಡ್ ಸಹಾಯಕವಾಗಲಿದೆ ಎಂದು ಹೇಳಿದರು.

ಸಚಿವರು ಮುಂದುವರಿಸಿ, ಇಂದಿನ ಯುಗದಲ್ಲಿ ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ, ಯುವಜನತೆ ಯಾವುದೇ ಭಯಕ್ಕೆ ಒಳಗಾಗದೆ ಸ್ಪರ್ಧಾತ್ಮಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಉದ್ಯೋಗ ಮಾರುಕಟ್ಟೆಯಲ್ಲಿ ಬಲವಾದ ಸ್ಥಾನ ಗಳಿಸಲು ನಿರಂತರ ಕಲಿಕೆ ಮತ್ತು ತಂತ್ರಜ್ಞಾನಗಳಲ್ಲಿ ಅಪ್‌ಡೇಟ್ ಆಗಿರುವುದು ಅತ್ಯಾವಶ್ಯಕವೆಂದು ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಆರೋಗ್ಯ ಸೇವೆಗಳಲ್ಲಿಯೂ ಎಐ ಬಳಕೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಪ್ರಯೋಗಗಳು ನಡೆಯುತ್ತಿದ್ದು, ಸೂಕ್ಷ್ಮ ವಿಶ್ಲೇಷಣೆಯೊಂದಿಗೆ ಈ ತಂತ್ರಜ್ಞಾನವನ್ನು ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಬಳಸಲಾಗುತ್ತಿದೆ ಎಂದು ವಿವರಿಸಿದರು.

ಸಂವಾದದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಇ.ವಿ. ರಮಣರೆಡ್ಡಿ, ಎಐ ತಂತ್ರಜ್ಞರು ಹಾಗೂ ವಿವಿಧ ತಾಂತ್ರಿಕ ತಜ್ಞರು ಉಪಸ್ಥಿತರಿದ್ದು, ರಾಜ್ಯದ ಎಐ ಕೌಶಲ್ಯಾಭಿವೃದ್ಧಿ ದಕ್ಷಿಣೆಯ ಬಗ್ಗೆ ಚರ್ಚಿಸಿದರು.