ಕಲಬುರಗಿ: ಕನ್ನಡ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ– ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕೃತಿ ಲೋಕಾರ್ಪಣೆ
ಕಲಬುರಗಿ: ಕನ್ನಡ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ– ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕೃತಿ ಲೋಕಾರ್ಪಣೆ
ಕಲಬುರಗಿ: ನಗರದಲ್ಲಿನ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ವಿಕಾಸ ರಂಗ ಬೆಂಗಳೂರು ಜಿಲ್ಲಾ ಘಟಕ ಕಲಬುರ್ಗಿ ವತಿಯಿಂದ ಕನ್ನಡ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಭವ್ಯವಾಗಿ ನೆರವೇರಿತು. ಈ ಸಂದರ್ಭದಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ಕೃತಿಯ ಲೋಕಾರ್ಪಣೆ ಕಾರ್ಯಕ್ರಮವೂ ಜರುಗಿತು.
ಮಠದ ಸಂಸ್ಕೃತಿಯಲ್ಲಿ ಬೆಳೆಯುತ್ತಾ ಶರಣರ ತತ್ತ್ವಗಳನ್ನು ಮೈಗೂಡಿಸಿಕೊಂಡಿರುವುದು ಚಿ.ಸಿ.ನಿಂಗಣ್ಣ ಈ ಕೃತಿಯನ್ನು ಬರೆಯುವ ಪ್ರೇರಣೆಯಾಗಿದೆ ಎಂದು ಡಾ. ಶಿವರಾಜ ಪಾಟೀಲ ಕುಲಾಲಿ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಹಾರಕೂಡದ ಡಾ ಚನ್ನವೀರ ಶಿವಾಚಾರ್ಯರು ಶ್ರೀಗಳು ಹಾಗೂ ಯರನಾಳ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಇಂತಹ ಸಮಾರಂಭಗಳು ಸಮಾಜಕ್ಕೆ ಪ್ರೇರಣಾದಾಯಕವೆಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಕೃತಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಸುರೇಶ್ ಕೆ. ಅಕ್ಕಣ,ದಿಶ್ ಕಾಲೇಜಿನ ಅಧ್ಯಕ್ಷ ಶಿವಾನಂದ ಖಜುರಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಭವ್ಯತೆ ತಂದರು.ಚಿ.ಸಿ. ನಿಂಗಣ್ಣ ಅವರು ಗೌರವ ಉಪಸ್ಥಿತಿಯಾಗಿ ಹಾಜರಿದ್ದರು.
ಕಾರ್ಯಕ್ರಮದಲ್ಲಿಪ್ರೊ.ಬಿ.ಎಸ್ ಮಾಲಿ ಪಾಟೀಲ, ಚಂದ್ರಶೇಖರ ದೊಡ್ಡಮನಿ, ಶರಣಗೌಡ ಪಾಟೀಲ ಪಾಳಾ,ಅಂಬಾರಾಯ ಕೋಣೆ,ಅನೀಲ ಸುಗಂಧಿ, ಸಿದ್ದಣ್ಣ ಪುಜಾರಿ, ವಿಶ್ವನಾಥ ಕಟ್ಟಿಮನಿ,ಪ ಮನು ಸಗರ, ಗಣ್ಯರು, ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಡಾ ಬಸವರಾಜ ಕೊನೇಕ, ಸಂ.ಕ.ಪ.ಸ್ಥಾನಿಕ ಸಂಪಾದಕ ಪ್ರಭಾಕರ್ ಜೋಶಿ, ಸಾಹಿತಿ ಬಿ.ಎಚ್.ನಿರಗುಡಿ , ಹೋರಾಟಗಾರ ಹಣಮಂತ ಯಳಸಂಗಿ , ಜಮುನಾ ಗುತ್ತೇದಾರ, ಡಾ ಪ್ರಲಾದ ಬುರಲಿ, ನಿತಿನ್ ನಾಯಕ ವಿಶಾಲಾಕ್ಷಿ ಕರೆಡ್ಡಿ ಸೇರಿದಂತೆ 18,ಜನ ಸಾಧಕರಿಗೆ ಕನ್ನಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು
