ಸಿಬ್ಬಂದಿಗಳು ಪ್ರಾಮಾಣಿಕ ಣಿಕ ಸೇವೆ ಸಲ್ಲಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್.
ಸಿಬ್ಬಂದಿಗಳು ಪ್ರಾಮಾಣಿಕ ಣಿಕ ಸೇವೆ ಸಲ್ಲಿಸಿ
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್.
ಕಲಬುರಗಿ ನವೆಂಬರ್ 21 (ಕರ್ನಾಟಕ ವಾರ್ತೆ) ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ನೀಡುವಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸಾಮಾಜಿಕ ಕಾರ್ಯತೊಡಗಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ವೈದ್ಯಕೀಯ ಪಾತ್ರ ಬಹಳಷ್ಟು ಮಹತ್ವ ಇದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ಶುಕ್ರವಾರದಂದು ಕಲಬುರಗಿ ನಗರದ ಜಿಮ್ಸ್ ಕಾಲೇಜಿನಲ್ಲಿ 35ನೇ ವಾರ್ಷಿಕ ರಾಜ್ಯ ಕಚ್ಕಾನ್ ಸಮ್ಮೇಳನ-2025 (35th Annual state conference KACHCON -2025) ರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿವುದರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಸಮುದಾಯ ಆಧಾರಿತ ಆರೋಗ್ಯ ಸಂಸ್ಥೆಯನ್ನು ವಿಸ್ತರಿಸುವುದು. ವೈದ್ಯಕೀಯ ಕ್ಷೇತ್ರದಲ್ಲಿ ಸಕಾರತ್ಮಕ ಚಿಂತನೆಗಳನ್ನು ವಿಸ್ತರಿಸುವ ಉದ್ದೇಶ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಇಲ್ಲಿಯವರೆಗೆ ನಮ್ಮ ಅಧಿಕಾರದ ಅವಧಿಯಲ್ಲಿ 22 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇನ್ನೂ 3 ವೈದ್ಯಕೀಯ ಕಾಲೇಜುಗಳು ಪ್ರಗತಿ ಹಂತದಲ್ಲಿದ್ದು, ಒಟ್ಟು 25 ವೈದ್ಯಕೀಯ ಕಾಲೇಜುಗಳು ಆಗಲಿದ್ದು, ಕರ್ನಾಟಕದಲ್ಲಿ ಕೇವಲ 1 ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಬೆಂಗಳೂರಿನಲ್ಲಿದ್ದು, ಕಲಬುರಗಿಯಲ್ಲಿ 1 ಆಸ್ಪತ್ರೆಗೆ ಸರಕಾರ ಮುಂದಾಗಿದೆ ಇನ್ನೂ ಹೆಚ್ಚು ಸೂಪರ್ ಸ್ಪೆಷಯಾಲಿಟಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಅನುಕೂಲವಾಗಲು ಸ್ಥಾಪಿಸಲಾಗುವುದು ವೈದ್ಯಕೀಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಸದಾ ಸಾರ್ವಜನಿಕರ ಸೇವೆಯಲ್ಲಿ ಮುಂದಾಗಿದ್ದು ಅಭಿನಂದನೆ ಸಲ್ಲಿಸೋಣ ಎಂದು ಹೇಳಿದರು.
ನಾನು ಮೊದಲನೆ ಬಾರಿಗೆ ವೈದ್ಯಕೀಯ ಸಚಿವನಾದ್ದಾಗ ಆರೋಗ್ಯದ ಸೌಲಭ್ಯಗಳನ್ನು ಯಾವ ರೀತಿಯಾಗಿ ವಿಸ್ತರಣೆ ಮಾಡಬೇಕು ಎಂಬ ದೂರ ದೃಷ್ಠಿಯ ಕಾರಣದಿಂದಲ್ಲೇ ಇವತ್ತಿನ ಜಿಲ್ಲೆಯ ಜನರು ಉತ್ತಮವಾದ ಚಿಕಿತ್ಸೆ ಪಡೆಯಲು ಜಿಲ್ಲೆಯಲ್ಲಿ ನಾಲ್ಕು ಸರ್ಕಾರಿ ಆಸ್ಪತ್ರೆಗಳಾದ ಜಿಮ್ಸ್ ಆಸ್ಪತ್ರೆ, ಜಯದೇವ ಇನ್ಸ್ಟಿಟ್ಯೂಟ್ ಆಪ್ ಕ್ಯಾಡಿಯೋಲಾಜಿ, ಟ್ರಾಮ ಕೇರ್ ಸೆಂಟರ್, ಹಾಗೂ ಇಎಸ್ಐ ಆಸ್ಪತ್ರೆ ಬಡಜನರಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿವೆ ಎಂದು ಹೇಳಿದರು.
ನಮ್ಮ ಅಧಿಕಾರ ಅವಧಿಯಲ್ಲಿ ಕಲಬುರಗಿಯನ್ನು ಹೆಲ್ತ್ ಹಬ್ಬ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಕಿದ್ವಾಯಿ ಆಸ್ಪತ್ರೆ ಯನ್ನು ರಿಜನಲ್ ಕೇರ್ ಸೆಂಟರ್ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ ಜೊತೆಗೆ ನಮ್ಮ ರಾಜ್ಯದಲ್ಲಿ ನಿಮಾನ್ಸ್ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂಬ ಉದ್ದೇಶವಿದೆ. ಕಲ್ಯಾಣ ಕರ್ನಾಟಕ ಭಾಗದ ಜನ ಚಿಕಿತ್ಸೆಗಾಗಿ ಹೈದ್ರಬಾದ ಮತ್ತು ಸೋಲಾಪುರ ಅಂತಾ ಅಲೆದಾಡಬಾರದು ಜಿಲ್ಲೆಯಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಆಗಬೇಕು ಅದಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರ ಸಾಹಕಾರ ಅಗತ್ಯವಿದೆ ಎಂದರು.
ಇಂದಿನ ವೈಜ್ಞಾನಿಕ ಯುಗದಲ್ಲಿ ಹವಾಮಾನಗಳ ವೈಫರಿತ್ಯದಿಂದ ವೈದ್ಯಕೀಯ ಲೋಕಕ್ಕೆ ಸವಾಲು ನೀಡುವಂತ ಬಹಳಷ್ಟು ರೋಗಗಳನ್ನು ಕಾಣುತ್ತಿದ್ದೇವೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದ ಫಲವಾಗಿ ಈ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371 (ಜೆ) ವಿಧಿಯನ್ನು ಜಾರಿಗೊಳಿಸಲಾಯಿತು. ಆ ಕಾರಣದಿಂದಾಗಿಯೇ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳನ್ನು ಪಡೆಯಲು ಸಾಧ್ಯವಾಯಿತು.
ಜಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್ ಎನ್. ಎ., ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪ್ರಯತ್ನಗಳನ್ನು ಅವರ ನಿಖರವಾದ ಯೋಜನೆ ಮತ್ತು ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕಾಗಿ ಶ್ಲಾಘಿಸಲಾಯಿತು.
ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್ ಏಮ್ಸ್, ನವದೆಹಲಿ ಪೋಷಕರ ಮುಖ್ಯ ಭಾಷಣಕರರಾಗಿ ಮಾತನಾಡಿ, ಡಾ.ಆನಂದ ಕೃಷ್ಣನ್ ಪ್ರೊಫೆಸರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಲೇರಿಯಾ, ಡೆಂಗ್ಯೂ ಚಿಕ್ಕನ್ ಗೂನ್ಯ ಅಂಥಹ ರೋಗಗಳು ಉತ್ಪಾತಿಯಾಗುತ್ತವೆ ಇದಕ್ಕೆ ವೈದ್ಯಾದೀಕರಿಗಳು ಹೆಚ್ಚಿನ ಆಸಕ್ತಿ ವಹಿಸಿ ತಪಾಸಣೆ ಮಾಡಿ ರೋಗಗಳನ್ನು ಗುಣಮುಕ್ತಮಾಡಬೇಕೆಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಮಟ್ಟದಲ್ಲಿ ಅತಿ ಹೆಚ್ಚು ಸಾದನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ಸೇವೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು KACH ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. : "ಅತ್ಯುತ್ತಮ ಸಮುದಾಯ ಆರೋಗ್ಯ ವೃತ್ತಿಪರ ಪ್ರಶಸ್ತಿ" ಡಾ. ಶೈಲಜಾ ಪಾಟೀಲ್ - ಸಾರ್ವಜನಿಕ ಆರೋಗ್ಯದಲ್ಲಿ ಶ್ರೇಷ್ಠತೆಗಾಗಿ . KACH ಯುವ ವಿಜ್ಞಾನಿ ಪ್ರಶಸ್ತಿ ಡಾ. ಮೊಹಮ್ಮದ್. ವಸೀಮ್ ಫರಾಜ್ ಅನ್ಸಾರಿ - ಯುವ ಸಂಶೋಧಕ ಮನ್ನಣೆ ಅತ್ಯುತ್ತಮ ಯುವ ಸಮುದಾಯ ಆರೋಗ್ಯ ವೃತ್ತಿಪರ ಪ್ರಶಸ್ತಿ ಡಾ. ವಾಣಿ ಎಚ್. ಚಳಗೆರೆ - ಸಮುದಾಯ ಆರೋಗ್ಯ ಕ್ಷೇತ್ರದಲ್ಲಿ ಉದಯೋನ್ಮುಖ ನಾಯಕಿ KACH ಸಮೃದ್ಧ ಸಾಹಿತ್ಯ ಪ್ರಶಸ್ತಿ ಡಾ. ಅಶ್ವಿನಿ ಕುಮಾರ್ (ಡಾ. ಚಿತ್ರಾ ರಾವ್ ಪರವಾಗಿ ಸ್ವೀಕರಿಸಲಾಗಿದೆ) . "ಜೀವಮಾನ ಸಾಧನೆ ಪ್ರಶಸ್ತಿ" ಹೀಗೆ ಒಟ್ಟು 11 ಜನರಿಗೆ ನೀಡಲಾಯಿತು. ಡಾ. ಡಿ. ಸುನಿಲ್ ಕುಮಾರ್ - ಸಾರ್ವಜನಿಕ ಆರೋಗ್ಯ ಸೇವೆ ತೀರ್ಮಾನ ಇವರಿಗೂ ಸನ್ಮಾನಿಸಲಾಯಿತು.
ಡಾ ಆನಂದ ಕೃಷನ್ ಪ್ರಾಧ್ಯಾಪಕರು ಸಮುದಾಯ ಆರೋಗ್ಯ ಸಂಘ ನವದೆಹಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಶರಣಬಸಪ್ಪ ಕ್ಯಾತನಾಳ ನಿರ್ದೇಶಕರು ಜಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆ, ಡಾ ಉಮೇಶ್ ಎಸ್ ಆರ್ ಡಾ ಜಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆ, ವೈದ್ಯಕೀಯ ಅಧೀಕ್ಷಕರು ಶಿವಕುಮಾರ ಸಿ ಆರ್ ಆಯೋಜಕರಾಗಿ ಡಾ ಅಜಯಕುಮಾರ ಜಿ ಅಧ್ಯಕ್ಷರು ಏಂಅಊ , ಡಾ ಮೀನಾಕ್ಷಿ ಎಂ ದವಡೆ, ಡಾ ರಮೇಶ್ ಮತ್ತು ಡಾ ಗುರುರಾಜ ಎನ್ ಎ . ನಿರ್ದೇಶಕ ಕಮ್ ಡೀನ್ ಡಾ.ಶಿವಕುಮಾರ್ ಸಿ.ಆರ್ ವೈದ್ಯಕೀಯ ಸೂಪರಿಂಟೆಂಡೆಂಟ್ ಸಮಿತಿಗಳನ್ನು ಸಂಘಟಿಸುವುದು ಡಾ.ಅಜಯಕುಮಾರ್ KACH ಅಧ್ಯಕ್ಷರು ಮತ್ತು ಸಂಘಟನಾ ಅಧ್ಯಕ್ಷರು ರಮೇಶ್ ಡಾ ಸಂಘಟನಾ ಕಾರ್ಯದರ್ಶಿ, ಜನರಲ್ ಕಾರ್ಯದರ್ಶಿ ಡಾ.ಟಿ.ಎಸ್.ರಂಗನಾಥ್ ಡಾ. ಗಿರೀಶ್ ಬಿ ಸಂಘಟನಾ ತಂಡ, ಸಿಬ್ಬಂದಿಗಳು ಇದ್ದರು.
