ಮಾಲಗತ್ತಿ ಗ್ರಾ. ಪಂ ಅಧ್ಯಕ್ಷರಾಗಿ ದೀಪಕ ಬಮ್ಮನೂರ ಆಯ್ಕೆ
ಮಾಲಗತ್ತಿ ಗ್ರಾ. ಪಂ ಅಧ್ಯಕ್ಷರಾಗಿ ದೀಪಕ ಬಮ್ಮನೂರ ಆಯ್ಕೆ
ಶಹಾಬಾದ : - ತಾಲೂಕಿನ ಮಾಲಗತ್ತಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ಸದಾಶಿವ ಸಿಂಗೆ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ದೀಪಕ ಬಸವರಾಜ ಬಮ್ಮನೂರ ಮತ್ತು ಉಪಾಧ್ಯಕ್ಷರಾಗಿ ಸರಸ್ವತಿ ಶರಣಪ್ಪ ಅವಿರೋಧವಾಗಿ ಆಯ್ಕೆಯಾದರು.
ಮಾಲಗತ್ತಿ ಗ್ರಾಮ ಪಂಚಾಯಿತಿಮುಂದಿನ ಅವದಿಗೆ ಪ. ಜಾ ಗೆ ಅಧ್ಯಕ್ಷ ಸ್ಥಾನ ಮತ್ತು ಹಿಂದುಳಿದ ವರ್ಗಕ್ಕೆ ಉಪಾಧ್ಯಕ್ಷ ಮೀಸಲಾಗಿಸಿದ ಸ್ಥಾನ ಕ್ಕೆ ಚುನಾವಣೆ ಜರುಗಿತು.
ಮಾಲಗತ್ತಿ ಗ್ರಾಮ ಪಂಚಾಯಿತ ವ್ಯಾಪ್ತಿಗೆ ಸೇರಿದ ಮಾಲಗತ್ತಿ, ಶಂಕರವಾಡಿ ಮತ್ತು ಯರಗಲ ಗ್ರಾಮಕ್ಕೆ ಸೇರಿದ ಒಟ್ಟು 18 ಗ್ರಾ. ಪಂ. ಸದಸ್ಯರಿದ್ದು, 13 ಜನ ಹಾಜರಾಗಿ 5 ಜನ ಸದಸ್ಯರು ಗೈರಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಯರಗಲ ಗ್ರಾಮದ ದೀಪಕ ಬಮ್ಮನೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಂಕರವಾಡಿ ಗ್ರಾಮದ ಸರಸ್ವತಿ ಶರಣಪ್ಪರವರು ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪ್ರತಿ ಸ್ಪರ್ಧಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ದೀಪಕ ಬಮ್ಮನೂರ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಶರಣಪ್ಪ ರವರು ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ ರವರು ಚುನಾವಣಾಧಿಕಾರಿ ಯಾಗಿ ಆಗಮಿಸಿ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು.
ಈ ಸಂಧರ್ಭದಲ್ಲಿ ತಾ. ಪಂ. ಮಾಜಿ ಸದಸ್ಯ ಏಲಿಸ್ ಬುಳ್ಳಾ, ಮಾಜಿ ಅಧ್ಯಕ್ಷರಾದ ಮಲ್ಲಣ್ಣ ಅಲ್ಲೂರ, ಸದಾಶಿವ ಸಿಂಗೆ, ಡಾ. ವಿಜಯಕುಮಾರ ಕಟ್ಟಿ, ಮರೇಣ್ಣ, ಮಲ್ಲಪ್ಪ ತಳವಾರ, ಶರಣಪ್ಪ ಪೂಜಾರಿ, ರಾಜು ಜೀರಕಲ, ಹಣಮಂತ ಮುತ್ತಗಿ, ಮಂಜುಳಾ, ಶಿವಮ್ಮ, ಮಲ್ಲಮ್ಮ, ರಾವಸಾಬ ಪಾಟೀಲ ಹಾಗೂ ಶಹಾಬಾದ ನಗರದ ರಾಜೇಶ ಯನಗುಂಟಿಕರ, ಶರಣು ಪಗಲಾಪುರ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ಗ್ರಾ. ಪಂ. ಕಛೇರಿ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿ ಪಿಎಸ್ಐ ಶಾಮರಾಯ ಮತ್ತು ಎಎಸ್ಐ ಹಣಮಂತ ಅಷ್ಠಗಿ ಮತ್ತು ಪಣ್ಮುಖ ಕಟ್ಟಿ ನೇತೃತ್ವದಲ್ಲಿ ಬೀಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ