ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಕಾಂಗ್ರೇಸ್ ಪ್ರಯತ್ನ ಪಡುತ್ತಲೇ ಬಂದಿದೆ : ಸಚಿವ ಡಾ. ಶರಣಪ್ರಕಾಶ ಪಾಟೀಲ

ಸುಲೇಪೇಟ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವ ಆಚರಣೆ
ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಕಾಂಗ್ರೇಸ್ ಪ್ರಯತ್ನ ಪಡುತ್ತಲೇ ಬಂದಿದೆ : ಸಚಿವ ಡಾ. ಶರಣಪ್ರಕಾಶ ಪಾಟೀಲ
ಮತ್ತೋಮ್ಮೆ ಸಂಪುಟದಲ್ಲಿ ನಿರ್ಣಯಕೈಗೊಂಡು ಕೇಂದ್ರಕ್ಕೆ ಸಲ್ಲಿಸಲು ನಿರ್ಮಾನ ತೇಗೆದುಕೊಳ್ಳಲಾಗುವುದು | ಕಾಂಗ್ರೇಸ್ ಪಕ್ಷ ಕೋಲಿ ಸಮಾಜ ಪರ ಬೆಂಬಲವಾಗಿರಲಿದೆ
ಚಿಂಚೋಳಿ :ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಲಿ ಸಮಾಜಕ್ಕೆ ಎಸ್ಟಿ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಕಡತ ಕಳುಹಿಸಿದ್ದೇವೆ. ಆದರೆ ಕೇಂದ್ರ ಸರಕಾರ ಕಡತ ಅಂಗೀಕರಿಸದೇ, ಹಿಂದಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ತಿಳಿಸಿದರು.
ಅವರು ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಅಂಬಿಗರ ಭವನದಲ್ಲಿ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವ ನಿಮಿತ್ಯವಾಗಿ ಹಮ್ಮಿಕೊಳ್ಳಲಾಗಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಲಿ ಸಮಾಜ ಸಮಾಜಿಕವಾಗಿ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶ ಕಾಂಗ್ರೆಸ್ ಪಕ್ಷ ಹೊಂದಿದೆ. ರಾಜ್ಯ ಸರಕಾರ ಕಳಹಿಸಿರುವ ಕಡತ ಕೇಂದ್ರ ಸರಕಾರ ಮನಸ್ಸು ಮಾಡದೇ ಪದೇ ಪದೇ ರದ್ದುಗೊಳಿಸಿ ಹಿಂದಕ್ಕೆ ಕಳುಹಿಸಿದ್ದು, ರಾಜ್ಯ ಸರಕಾರ ಮತ್ತೋಮ್ಮೆ ಕೇಂದ್ರಕ್ಕೆ ಎಸ್ಟಿ ಪ್ರಸ್ತಾವನೆ ಕಳುಹಿಸಿ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ವೀಠಲ್ ಹೆರೂರ್ ಅವರ ಕಾಲದಿಂದ ಕೋಲಿ ಸಮಾಜದ ಎಸ್ಟಿ ಸೇರ್ಪಡೆಗೊಳಿಸಬೇಕೆಂದು ಬಹುದಿನದ ಹೋರಾಟದ ಬೇಡಿಕೆಯಾಗಿದ್ದು, ಸಚಿವ ಶರಣಪ್ರಕಾಶ ಪಾಟೀಲರು ಮತ್ತು ಪ್ರೀಯಾಂಕ್ ಖರ್ಗೆ ಅವರು ಸಚಿವ ಸಂಪುಟದಲ್ಲಿ ಪ್ರಸ್ಥಾಪಿಸಿ ತಿರ್ಮಾನ ತೇಗೆದುಕೊಂಡು ಕೇಂದ್ರಕ್ಕೆ ಸಲ್ಲಿಸಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.
ಕೆ.ಪಿಎಸ್.ಸಿ ಮಾಜಿ ಸದಸ್ಯೆ ಡಾ. ನಾಗಾಬಾಯಿ ಬುಳ್ಳ, ಲಕ್ಷ್ಮಣ ಆವಂಟಿ ಅವರು ಮಾತನಾಡಿದರು.
ರಟಕಲ್ ಗೌರಿಗುಡ್ಡದ ಪೂಜ್ಯ ರೇವಣಸಿದ್ದ ಶರಣರು, ಪೂಜ್ಯ ಸಿದ್ದರಾಮಯ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಕೊತ್ತಪೇಟ, ಸುಲೇಪೇಟ ಗ್ರಾ.ಪಂ.ಅಧ್ಯಕ್ಷ ಸಂತೋಷ ಮೇಘರಾಜ ರಾಠೋಡ, ಶರಣಪ್ಪ ತಳವಾರ, ಬಸವರಾಜ ಸಜ್ಜನಶೆಟ್ಟಿ, ರವಿರಾಜ ಕೊರವಿ, ಅನೀಲ ಜಮದಾರ ಹುಡದಳ್ಳಿ, ರಾಮಚಂದ್ರ ಗಣಾಪೂರ,ಶಿವಕುಮಾರ ತಳವಾರ ಅವರು ಇದ್ದರು.