ಅ.8 ರಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ರಸ್ತೆ ತಡೆ ಚಳವಳಿ KPRS ಮತ್ತು ಕಬ್ಬು ಬೆಳೆಗಾರರ ಸಂಘ
Agriculture ರೈತರಿಗೆ ಸಂಬಂಧಿಸಿದ ವಿಷಯ
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಮುಖಂಡರ ನಿಯೋಗ, ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ದಿನಾಂಕ 8/8/2024 ರಂದು ಜಿಲ್ಲಾಧಿಕಾರಿಗಳು ಕಚೇರಿ ಎದುರುಗಡೆ ರಸ್ತೆ ತಡೆ ಚಳವಳಿ ನಡೆಸುವುದು KPRS ಮತ್ತು ಕಬ್ಬು ಬೆಳೆಗಾರರ ಸಂಘ ತಿರ್ಮಾನಿಸಿದೆ ಎಂದು ಎಲ್.ಎಲ್.ಭರತ್ ರಾಜು ಮಾತನಾಡಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಮುಖಂಡತ್ವ ಇಂದು, ರವಿಕುಮಾರ್ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರನ್ನ ಬೆಂಗಳೂರಿನ ಕಾವೇರಿ ಭವನದಲ್ಲಿ ಭೇಟಿ ಮಾಡಿ ಕಬ್ಬು ಬೆಳೆಗಾರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು
ಪ್ರತಿ ಟನ್ ಕಬ್ಬಿಗೆ ಐದು ಸಾವಿರ ನೀಡಬೇಕು. ಎಫ.ಅರ್.ಪಿ ಯನ್ನ ಶೇ.8.5ರ ಇಳುವರಿ ಆಧಾರದ ಮೇಲೆ ನಿಗದಿ ಮಾಡಬೇಕು.
ಕಟಾವು ಮತ್ತು ಸಾಗಾಣಿಕೆ ವೆಚ್ಚ 2023 .24ನೇ ಸಾಲಿನಲ್ಲಿ ಆಯುಕ್ತರು ನಿಗದಿಪಡಿಸಿರುವ ದರಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರುಗಳು ನಡೆದುಕೊಳ್ಳದೆ ಇರುವುದು ಹಾಗೂ ಕಬ್ಬು ಕಟವಾದ 14 ದಿನದೊಳಗೆ ಹಣಪಾವತಿ ಮಾಡದಿರುವುದು.
ಸಕ್ಕರೆ ಇಳುವರಿಯನ್ನ ಪರೀಕ್ಷಿಸಲು ರೈತರ ಒಳಗೊಂಡಂತಹ ಸಮಿತಿಯನ್ನ ರಚಿಸದೆ ಇರುವುದರಿಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಇಳುವರಿಯನ್ನ ಕಡಿಮೆ ನಿಗದಿಪಡಿಸುವುದರ ಮೂಲಕ ರೈತರನ್ನು ವಂಚಿಸುತ್ತಿರುವ ಬಗ್ಗೆ ಹಾಗೂ ತೂಕದಲ್ಲಿ ವ್ಯತ್ಯಾಸ ಆಗುತ್ತಿರುವುದರ ಬಗ್ಗೆ ಚರ್ಚಿಸಿ ಅಳತೆ ಮತ್ತು ತೂಕ ಮಾಪನ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಸರ್ಕಾರವೇ ಎಪಿಎಂಸಿಗಳ ಮೂಲಕ ವೇ ಬ್ರಿಡ್ಜ್ ನಿರ್ಮಿಸಿ ತೂಕ ಮಾಡಬೇಕು 2022. 23ನೇ ಸಾಲಿನಲ್ಲಿ ಪ್ರತಿ ಟೆನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಎಸ್ ಎ ಪಿ ಪ್ರತಿ ಟನ್ ಗೆ ನೂರು ರೂಪಾಯಿ ಮತ್ತು ಡಿಸ್ನಿಲರಿ ಇರುವ ಕಾರ್ಖಾನೆಗಳು ನೂರ ಐವತ್ತು ರೂಗಳ ಬಾಕಿ ಹಣ ನೀಡಬೇಕೆಂಬ ತೀರ್ಮಾನವನ್ನು ಜಾರಿಗೊಳಿಸುವ ಸಂಬಂಧ. ಕಬ್ಬಿನಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ರೈತರಿಗೆ ಪಾಲು ನೀಡಬೇಕೆಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು..ಗುಲ್ಬರ್ಗದ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಕೆಪಿಆರ್ ಸಕ್ಕರೆ ಕಂಪನಿಗಳಿಂದ ರೈತರಿಗೆ ಪ್ರತಿ ಟನ್ ಬರಬೇಕಾಗಿರುವ 112 ಮತ್ತು 162 ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಈಗಾಗಲೇ ಗುಲ್ಬರ್ಗ ಜಿಲ್ಲಾಧಿಕಾರಿ ಅವರಿಗೆ ಅವರ ಮೇಲೆ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ. ಅವರ ಕ್ರಮದ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಮತ್ತು ರೈತರು ಸಹ ಸಕ್ಕರೆ ನಿರ್ದೇಶಕರ ಆದೇಶದ ವಿರುದ್ಧವಾಗಿ ಕಾರ್ಖಾನೆ ಮಾಲೀಕರು ನಡೆದುಕೊಂಡಿದ್ದರೆ ಅವರ ಮೇಲೆ ವೈಯಕ್ತಿಕವಾಗಿಯೂ ವಂಚನೆ ಪ್ರಕರಣವನ್ನು ದಾಖಲಿಸಬಹುದು ಎಂದು ತಿಳಿಸಿರುತ್ತಾರೆ
ರೈತರ ಒಳಗೊಂಡ ಸಮಿತಿ ರಚಿಸಲಾಗುತ್ತದೆ ಅವರೆ ಇಳುವರಿ. ತೂಕ ಸಾಗಾಣಿಕೆ. ಮತ್ತು ಕಟಾವು ವೆಚ್ಚಗಳಲ್ಲಿ ಆಗುವ ಮೋಸದ ಬಗ್ಗೆ ಪರಿಶೀಲಿಸ ಬಹುದು ಎಂದಿದ್ದಾರೆ .
ಎಸ್ ಎ.ಪಿ ಬಗ್ಗೆ ಇಂದು ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ ಎಂದು ತಿಳಿಸಿದ್ದಾರೆ .
ನಿಯೋಗದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ಕಲಬುರಗಿ ಜಿಲ್ಲಾ ಸಂಚಾಲಕರಾದ ಶರಣಬಸಪ್ಪಾ ಮಮಶೆಟ್ಟಿ ,ಜಿಲ್ಲಾ ಮುಖಂಡರಾದಸಿದ್ದರಾಮ ದಣ್ಣೂರು ಭಾಗವಹಿಸಿದ್ದರು. ಅಶೋಕ ಹೂಗಾರ್ ಅರ್ಜುನ ಕುಂಬಾರ್ ಇದ್ದರು