ಬಲಕುಂದಿ ತಾಂಡಾ ಶಾಲೆಯಲ್ಲಿ ವ್ಯಸನಮುಕ್ತ ದಿನಾಚರಣೆ

ಬಲಕುಂದಿ ತಾಂಡಾ ಶಾಲೆಯಲ್ಲಿ ವ್ಯಸನಮುಕ್ತ ದಿನಾಚರಣೆ

ಬಾಗಲಕೋಟೆ : ಮಹಾಂತ ಜೋಳಿಗೆಯ ಹರಿಕಾರರು,ಬಸವತತ್ವದ ದಂಡನಾಯಕರಾದ ಪರಮಪೂಜ್ಯ ವಿಜಯ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ವ್ಯಸನಮುಕ್ತ ದಿನಾಚರಣೆಯನ್ನು ಇಲಕಲ್ಲ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ವಿಜಯ ಮಹಾಂತ ಶಿವಯೋಗಿಗಳ ವೇಷಭೂಷಣಗಳಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು ಹಾಗೂ ವಿದ್ಯಾರ್ಥಿಗಳು ವ್ಯಸನದ ದುಷ್ಪರಿಣಾಮಗಳ ಬಗ್ಗೆ ಕಿರು ನಾಟಕ ಅಭಿನಯಿಸಿದರು.

ಇದೇ ಸಂದರ್ಭದಲ್ಲಿ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಶಾಲೆಯ ಮುಖ್ಯಗುರುಗಳಾದ ಪರಶುರಾಮ ಪಮ್ಮಾರ ವ್ಯಸನಮುಕ್ತ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಎಂ ಎಸ್ ಬೀಳಗಿ,ಎ ಡಿ ಬಾಗವಾನ,ಜಿ ಕೆ ಮಠ,ಆರ್ ಎಸ್ ಕೊಡಗಲಿ,ಎಂ ಎನ್ ಅರಳಿಕಟ್ಟಿ,ಎಂ ಪಿ ಚೇಗೂರ,ಎಸ್ ಎಲ್ ಜೋಗಿನ,ಪಿ ಎಸ್ ಹೊಸೂರ,ಎಸ್ ಎಂ ಮಲಗಿಹಾಳ,ಪಿ ಟಿ ಮೇಗಡಿ ಹಾಗೂ ಸಾಯಿರಾ ಹೆರಕಲ್ ಉಪಸ್ಥಿರಿದ್ದರು.