ಧನಗರಗಲ್ಲಿಯ ಬ್ರಹ್ಮಪುರದಲ್ಲಿ ರೇವಣಸಿದ್ದೇಶ್ವರ ಪುರಾಣ ಪ್ರವಚನ,
ಧನಗರಗಲ್ಲಿ ಬ್ರಹ್ಮಪುರದಲ್ಲಿ ಶ್ರಾವಣ ಮಾಸದ ಪುರಾಣ ಪ್ರವಚನ,
ಕಲಬುರಗಿ : ಹಾಲುಮತದ ಧರ್ಮ ಗುರು , ಜಗದ್ಗುರು ರೇವಣಸಿದ್ದೇಶ್ವರ ಮಹಾಪುರಾಣ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರಿಯಂತ ಜರುಗಲಿದೆ ಎಂದರು. ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಪುಜಾರಿ ಅವರು ತಿಳಿಸಿದರು.
ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರೇವಣಸಿದ್ಧೇಶ್ವರ ಕೋರಿಮಠ ತರುಣ ಸಂಘ ಧನಗರಗಲ್ಲಿ ಬ್ರಹ್ಮಪೂರ ಕಲಬುರ್ಗಿ ವತಿಯಿಂದ. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ ಅಂಗವಾಗಿ ಪ್ರತಿ ನಿತ್ಯ ಸಾಯಂಕಾಲ 06:00 ರಿಂದ 10:00 ಗಂಟೆಯವರೆಗೆ ಶ್ರೀ ಮಠದಲ್ಲಿ ಪೂರಾಣ ಗುಬ್ಬೇವಾಡದ ಸೋಮೇಶ್ವರ ಆಶ್ರಮದ ಕನ್ನಯ್ಯ ಮಹಾರಾಜ ಪುರಾಣ ಪ್ರವಚನ ನೀಡುವರು. ಪ್ರಸ್ತುತ ಸಾಲಿನಿಂದ ಶಾಶ್ವತ ಅಭೀಷೇಕ ನಡೆಯುತ್ತಿದೆ ಎಂದರು
ಅಗಸ್ಟ್ತಿ 4, ರಂದು ಪುರಾಣ ಕಾರ್ಯಕ್ರಮ ಉದ್ಘಾಟನೆಗೆ ತಿಂಥಣಿ ಬ್ರಿಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಆಗಮಿಸಲಿದ್ದು , ಅವರ ಮೇರವಣಿಗೆ ಡೊಳ್ಳು ಕುಣಿತ, ಪೂರ್ಣ ಕುಂಭ ಮೇರವಣಿಗೆಯೊಂದಿಗೆ ನಗರದ ಶರಣಬಸವೇಶ್ವರ ದೇವಸ್ಥಾನದಿಂದ ಕೋರಿ ಮಠದ ತನಕ ನಡೆಯಲಿದೆ ಎಂದರು
ಪುರಾಣ ಆಲಿಸಲು ಧನಗರಗಲ್ಲಿ, ಸಮತಾ ಕಾಲೋನಿ, ಕನಕ ನಗರ, ಅಲ್ಲದೆ ಸೂತ್ತ-ಮೂತ್ತಲಿನ ಎಲ್ಲಾ ಭಕ್ತರು ಪೂರಾಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ,ಪ್ರವಚನವನ್ನು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸರಳ ಸಜ್ಜನಿಕೆಯ ಜೀವನಸಾಗಿಸಲು ಸಾಧ್ಯ,ಶ್ರೀತರುಣ ಸಂಘವು ಸತತವಾಗಿ ಹಲವಾರು ವರ್ಷಗಳಿಂದ ಧಾರ್ಮಿಕ ಮತ್ತು ಸಂಸ್ಕೃತ ಕಾರ್ಯಕ್ರಮ ನಡೇಸುತ್ತ ಬರುತ್ತಿದ್ದೇವೆ, ಈ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರೀ ರೇವಣಸಿದ್ಧೇಶ್ವರ ಕೋರಿಮಠ -ತರುಣಸಂಗದ ಅಧ್ಯಕ್ಷ ರವಿಗೊಂಡ ಕಟ್ಟಿಮನಿ ಮಾತನಾಡಿದರು ಪತ್ರಿಕಾಗೋಷ್ಠಿಯಲ್ಲಿ ರಾಜು ಆಲಗೂಡ, ರಜನಿಕಾಂತ್ ಮೇಳಕುಂದಿ, ಧರ್ಮರಾಜ ಚೌಕಿ, ಶರಣಬಸಪ್ಪ ಗರೂರ,ಶಿವಲಿಂಗಪ್ಪ ಗರೂರ, ಸುನೀಲ್ ತೆಗನೂರ ಉಪಸ್ಥಿತರಿದ್ದರು.