ಶಿವಶಂಕರೇಶ್ವರ ದೇವರ ಪುರಾಣ ಇತಿಹಾಸದ ಮೈಲಿಗಲ್ಲಾಗಲಿ : ಹಾಲಪ್ಪಯ್ಯ ಶ್ರೀ

ಶಿವಶಂಕರೇಶ್ವರ ದೇವರ ಪುರಾಣ ಇತಿಹಾಸದ ಮೈಲಿಗಲ್ಲಾಗಲಿ : ಹಾಲಪ್ಪಯ್ಯ ಶ್ರೀ

ಸದ್ಗುರು ಶ್ರೀ ಶಿವಶಂಕರೇಶ್ವರ ದೇವರ ಪುರಾಣ ಗ್ರಂಥ ಲೋಕಾರ್ಪಣೆ

ಶಿವಶಂಕರೇಶ್ವರ ದೇವರ ಪುರಾಣ ಇತಿಹಾಸದ ಮೈಲಿಗಲ್ಲಾಗಲಿ : ಹಾಲಪ್ಪಯ್ಯ ಶ್ರೀ

ಸೇಡಂ.ಮಾ.30ಚಂದ್ರಶೇಖರಯ್ಯ ಶಾಸ್ತ್ರೀ ಅವರು ವೈವಿಧ್ಯಮಯ ಕವಿಯಾಗಿದ್ದಾರೆ. ಬಹು ಬಹುಭಾಷಾ ಲೇಖಕರಾಗಿರುವ ಶಾಸ್ತ್ರೀ ಅವರ ಅಕ್ಷರ ಜ್ಞಾನ ಅಪಾರವಾದದ್ದು ಎಂದು ಹಾಲಪ್ಪಯ್ಯ ಶ್ರೀಗಳು ಹೇಳಿದರು.

ಸೇಡಂ ಪಟ್ಟಣದ ಶ್ರೀ ಶಿವಶಂಕರೇಶ್ಬರ ಮಠದ ಸಭಾ ಮಂಟಪದಲ್ಲಿ ನಡೆದ ಸೇಡಂ ಸದ್ಗುರು ಶ್ರೀ ಶಿವಶಂಕರೇಶ್ಬರ ದೇವರ ಪುರಾಣ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಕ್ತರ ಏಳಿಗೆಗಾಗಿ, ಧರ್ಮದ ಇಳಿವಿಗಾಗಿ, ಲಿಂಗ ದೀಕ್ಷೆಯನ್ನು ಕೊಡುವ ,ಲಿಂಗ ಪೂಜೆಯನ್ನು ಮಾಡುವ ಮೂಲಕ ಧರ್ಮದ ಕಾರ್ಯವನ್ನು ಶಿವಶಂಕರೇಶ್ವರ ಮಠ ಮಾಡುತ್ತಲಿದೆ ಎಂದರು.

ಹಿಂದಿನ ಇತಿಹಾಸವನ್ನು ಎಂದಿಗೂ ಮರೆಯಬಾರದು, ಸೇಡಂನ ಇತಿಹಾಸ ಪುಟದಲ್ಲಿ ಶ್ರೀ ಶಿವಶಂಕರೇಶ್ವರ ಮಠವು ಸಾವಿರಾರು ಭಕ್ತರ ಉದ್ಧಾರಕ್ಕೆ ಅಣಿಯಾಗಿದೆ. ಮಠದ ಹಳ್ಳದ ಜಾತ್ರೆಯು ವೈಶಿಷ್ಟ್ಯ ಪೂರ್ಣವಾಗಿದೆ ಎಂದು ನುಡಿದರು.

ಧಾರ್ಮಿಕ ನೆಲೆಯಲ್ಲಿ ಸೇಡಂ ಜನರಿಗೆ ನಿತ್ಯ ಮಾರ್ಗದರ್ಶನದಲ್ಲಿ ಇರುವ ಶಿವಶಂಕರೇಶ್ವರ ಮಠದಲ್ಲಿ ಶ್ರಾವಣ ಮಾಸಕ್ಕೆ ಪಾದಪೂಜೆ ನಡೆಯುತ್ತದೆ. ಹಿರಿಯರು, ಕಿರಿಯರು ಎನ್ನದೆ ಶ್ರೀಮಠದ ಶ್ರೀ ಶಿವಶಂಕರೇಶ್ವರ ಮಹಾಸ್ವಾಮಿಗಳು ಮಾತೃಹೃದಯಿಯಾಗಿದ್ದಾರೆ ಎಂದರು.

ತೊಟ್ನಳ್ಳಿ ಶ್ರೀಗಳು ಮಾತನಾಡಿ, ಪುಣ್ಯ ಪುರುಷರ ಜೀವನವೇ ಶಾಸ್ತ್ರವಾಗಿವೆ. ಯೋಗಿಗಳು ನಿಂತ ನೆಲವೇ ಪುಣ್ಯಕ್ಷೇತ್ರವಾಗಿರುತ್ತದೆ. ಶಿವಶಂಕರೇಶ್ವರ ಮಠವು ಎಲ್ಲಾ ಶಾಸ್ತ್ರಗಳನ್ನು ಒಡಲಲ್ಲಿ ಇಟ್ಟುಕೊಂಡು ಭಕ್ತರಿಗೆ ಉಣಿಸಿದೆ ಎಂದರು.

ಲೇಖಕ ವೀರಯ್ಯಸ್ವಾಮಿ ಮೂಲಿಮನಿ ಗ್ರಂಥ ನಿರ್ಮಾಣದ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಶ್ರೀ ಶಿವಶಂಕರೇಶ್ವರ ಮಠದ ಶ್ರೀಗಳಾದ ಶ್ರೀ ಶಿವಶಂಕರೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.