ಸುಟ್ಟ ಟ್ರಾನ್ಸ್ಫಾರಂ ದುರಸ್ಥಿಗೆ ವಿಳಂಬ ಖಂಡಿಸಿ ಹೋರಾಟ
ಸುಟ್ಟ ಟ್ರಾನ್ಸ್ಫಾರಂ ದುರಸ್ಥಿಗೆ ವಿಳಂಬ ಖಂಡಿಸಿ ಹೋರಾಟ
ಆಳಂದ: ತಾಲೂಕಿನಲ್ಲಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಟ್ರಾನ್ಸಫಾರಂಗಳು ಸುಟ್ಟು ವಾರಕಳೆದರು ದುರಸ್ಥಿ ಕೈಗೊಳ್ಳದೆ ಇರುವುದು ರೈತರ ಬೆಳೆ ಒಣಗಿ ನಷ್ಟವಾಗುತ್ತಿದೆ. ಈ ಕುರಿತು ರೈತರು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗದ ಹಿನ್ನೆಲೆಯಲ್ಲಿ ಶೀಘ್ರವೇ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಂಕರ ಮಾಡಿಯಾಳ ಅವರು ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಧಿಕಾರಿಗಳು ವಿಳಂಬ ದೋರಣೆಯಿಂದಾಗಿ ನೀರುಣಿಸಿಕೊಳ್ಳಲಾಗದೆ, ಲಕ್ಷಾಂತ ರೂಪಾಯಿ ಬೆಳೆ ಒಣಗಿ ನಷ್ಟವಾಗುತ್ತಿದೆ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಐದಾರು ಟ್ರಾನ್ಸಫಾರಂ ಸುಟ್ಟಿದ್ದು ಒಂದೆರಡು ದುರಸ್ಥಿ ಮಾಡಿ ಇನ್ನೂಳಿದ ಹಾಗೇ ದಿದೊಡಿದ್ದು, ಈ ಪರಿಸ್ಥಿತಿ ಆಳಂದ ತಾಲೂಕು ಸೇರಿದಂತೆ ಜಿಲ್ಲೆಯ ಹಲವಡೆ ಇದೇ ಪರಿಸ್ಥಿತಿ ಮುಂದುವರೆದರು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಗಮನ ಹರಿಸಿ ರೈತರ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿದರು.
ಮಾಡಿಯಾಳ ಗ್ರಾಮದಲ್ಲಿ ವಿದ್ಯುತ್ ಉತ್ಪನ್ನ ೧ ಕೆ.ವಿ. ಇದ್ದರು ಸಕಾಲಕ್ಕೆ ಜನರಿಗೆ ವಿದ್ಯುತ್ ಪೂರೈಕೆ ಇಲ್ಲದೆ ಸಮಸ್ಯೆ ಎದುರಾಗಿದೆ.
ಪಂಪಸೆಟ್‌ಗಳಿಗೆ ದಿನದ ೨೪ ಗಂಟೆಯಲಿ ೭ ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಆದರೆ ನೀಡುವ ೭ ಗಂಟೆಯಲ್ಲೂ ಹತ್ತಾರು ಬಾರಿ ಸಂಪರ್ಕ ಕಡಿತವಾಗುತ್ತಿದೆ. ಇದರಿಂದ ನೀರುಣಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಹಗಲಿನಲ್ಲಿ ದಿನಕ್ಕೆ ೧೦ಗಂಟೆಗಳ ಕಾಲ ಮಾರ್ಚ್ವರೆಗೆ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಬೆಳೆಗೆ ನೀರುಣಿಸಿಕೊಳ್ಳಲು ಅನುಕೂಲವಾಗುತ್ತದೆ. ಟ್ರಾನ್ಸಫಾರಂ ಸುಟ್ಟು ವಾರಗಟ್ಟಲೆ ಕಳೆದರು ಸಮಯಕ್ಕೆ ದುರಸ್ಥಿಮಾಡುತ್ತಿಲ್ಲ. ರೈತರಿಗೆ ಸಮಸ್ಯೆಯಾಗಿದೆ ಸಂಬಂಧಿತ ವ್ಯವಸ್ಥಾಪಕ ನಿರ್ದೇಶಕರು ಯಾವ ತಾಲೂಕಿಗೂ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎಂದು ಆರೋಪಿಸಿದರು.
ವಿದ್ಯುತ್ ಇಲ್ಲದಕ್ಕೆ ಹಾನಿಯಾದ ಬೆಳೆಗೆ ಜೆಸ್ಕಾಂನಿಂದಲೇ ಪರಿಹಾರ ಕೊಡಬೇಕು. ಸುಟ್ಟ ಟ್ರಾನ್ಸಫಾರಂಗಳನ್ನು ೨೪ ಗಂಟೆಯಲ್ಲಿ ದುರಸ್ಥಿ ಮಾಡುವ ನಿಯಮದಂತೆ ನಡೆದುಕೊಳ್ಳಬೇಕು. ಹಗಲಿನ ೧೦ ಗಂಟೆಗಳ ಕಾಲ ಮಧ್ಯದಲ್ಲಿ ಕಡಿತವಾಗದಂತೆ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಇನ್ನಿತರ ಬೇಡಿಕೆಗೆ ಒತ್ತಾಯಿಸಿ ಕಲಬುರಗಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಮುಂದೆ ಕಿಸಾನಸಭಾದಿಂದ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವರದಿ,ಸಚೀನ ಎಸ್ದೇವನೂರ