ಸಂಗಮೇಶ್ವರ ಆಸ್ಪತ್ರೆಯಲ್ಲಿ ವಿಶ್ವ ಪ್ರೀಮೆಚುರಿಟಿ ದಿನಾಚರಣೆ
ಸಂಗಮೇಶ್ವರ ಆಸ್ಪತ್ರೆಯಲ್ಲಿ ವಿಶ್ವ ಪ್ರೀಮೆಚುರಿಟಿ ದಿನಾಚರಣೆ
ಕಲಬುರ್ಗಿ: ಅವಧಿಪೂರ್ವ ಜನನ ಸಂಬಂಧಿತ ಸಾವುಗಳು, ಸವಾಲುಗಳು ಮತ್ತು ಅವುಗಳನ್ನು ತಡೆಗಟ್ಟಲು ಕೈಗೆಟುಕುವ ಮಾರ್ಗಗಳು ಸೇರಿದಂತೆ ಅವಧಿಪೂರ್ವ ಜನನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 17 ರಂದು ವಿಶ್ವ ಅವಧಿಪೂರ್ವ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ ಕಿರಣ್ ಹೊಸ ಗೌಡ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ 2025 ನೇ ಸಾಲಿನ ಪ್ರೀಮಾಚುರಿಟಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಈ ದಿನದಂದು, ವಿಶ್ವ ಆರೋಗ್ಯ ಸಂಸ್ಥೆ ,ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ , ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಮತ್ತು ಮಾರ್ಚ್ ಆಫ್ ಡೈಮ್ಸ್ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಆಸ್ಪತ್ರೆಗಳು, ಲಾಭರಹಿತ ಸಂಸ್ಥೆಗಳು ಮತ್ತು ಆರೋಗ್ಯ ವೃತ್ತಿಪರರು ಒಟ್ಟಾಗಿ ಚಟುವಟಿಕೆಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ವಿಶ್ವಾದ್ಯಂತ ಅಕಾಲಿಕ ಜನನದ ತೊಂದರೆಗಳು ಮತ್ತು ಹೊರೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದು ಹೇಳಿದರು.
ನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಮಹಾನಂದಾ ಮೇಳಕುಂದಿ ಮಾತನಾಡಿ ಅವಧಿಪೂರ್ವ ಜನನವು ಹಲವಾರು ಕಾರಣಗಳಿಂದ ಸಂಭವಿಸಬಹುದು. ಹೆಚ್ಚಿನ ಅವಧಿಪೂರ್ವ ಜನನಗಳು ಸ್ವಾಭಾವಿಕವಾಗಿ ಸಂಭವಿಸುತ್ತವೆ. ಆದಾಗ್ಯೂ, ಕೆಲವು ಸೋಂಕುಗಳು ಅಥವಾ ಗರ್ಭಧಾರಣೆಯ ಇತರ ಸಮಸ್ಯೆಗಳಂತಹ ವೈದ್ಯಕೀಯ ಕಾರಣಗಳಿಂದ ಉಂಟಾಗುತ್ತವೆ, ಅದು ಹೆರಿಗೆಗೆ ಆರಂಭಿಕ ಪ್ರಚೋದನೆ ಅಥವಾ ಸಿಸೇರಿಯನ್ ಹೆರಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಮಕ್ಕಳ ವೈದ್ಯರಾದ ಡಾ. ಬಸವರಾಜ ಪಾಟೀಲ್ , ಡಾ. ಐಶ್ವರ್ಯ ಮತ್ತು ಡಾ. ಶಿವಕುಮಾರ್ ಸಂಗೋಳಗಿ ಅವರು ಆಸ್ಪತ್ರೆಯ NICU ನಲ್ಲಿ ದಾಖಲಾಗಿರುವ 2 ಅಕಾಲಿಕ ಶಿಶುಗಳ ಪ್ರಕರಣಗಳನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ತೊಡಕುಗಳು ಮತ್ತು ಅಕಾಲಿಕ ಶಿಶುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ವಿವರಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೆಯ ಆಹಾರ ತಜ್ಞೆ ಡಾ ಪಾರ್ವತಿ ಭೀಮಳ್ಳಿ ಉಪಸ್ಥಿತರಿದ್ದರು.
