ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಮನವಿ
ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಮನವಿ
ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮತ್ತು ಕುಂದು ಕೊರತೆಗಳನ್ನು ವೀಕ್ಷಿಸಿಲು ಆಗಮಿಸಿದ ಮುಂಬಯಿ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಧರ್ಮವೀರ ಮೀನಾ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ವಾಡಿ ಪಟ್ಟಣವು ತನ್ನದೆ ಆದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ .
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರು
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ತುಂಬಾ ಖುಷಿಯಾಗಿದೆ.
ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನ ಕೊಡಿ.ಸಮಸ್ಯೆಗಳ ಪಟ್ಟಿ ಯನ್ನು ನೀಡುತ್ತಿದ್ದು,ಅವುಗಳನ್ನು ಪರಿಹರಿಸಿ ಎಂದು ಕೇಳಿಕೊಂಡರು.
1) ಪ್ಲೈಓರ ಹಾಗೂ ಬ್ರಿಡ್ಜ್ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು,ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಿ.
2) ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಗಳು ಆವರಿಸಿಕೊಂಡಿರುವುದರಿಂದ,ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು,ಒಳ ಸುತುವೆ ಅಥವಾ ಮೇಲ ಸೇತುವೆ ನಿರ್ಮಿಸಿ.
3) ಹನುಮಾನ ನಗರ,ವಿಜಯ ನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೇ ಹೋಗಬೇಕು,
ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ.
ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ.
4) ಕೊಲ್ಲಾಪುರ ರೈಲನ್ನು ವಾಡಿ ಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ,
ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿ ಯಿಂದ ಪ್ರಾರಂಭಿಸಿ,ತಲುಪುವಂತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ.
5) ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ,ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ.
6) ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್ ಹಾಲ ಸಮರ್ಕವಾದ ನಿರ್ವಾಣೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
7) ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಗಾಗಿ ವೈದ್ಯರೊಂದಿಗೆ
ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.
ಗುಟುಕಾ,ದೊಮ್ರಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.
8)ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ 3 ಕಿ ಮಿ ಸುತ್ತಲೂ ಬೇಲಿ ಹಾಕಿಸುವುದು.
9) ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ ಸಂಚಾರಿಸುವಂತೆ ಮಾಡುವುದು.
10) ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಸುವುದು.
ಇದರ ಪ್ರತಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೂ ಮೇಲ್ ಮಾಡಿದ್ದು,ಮೇಲ್ಕಾಣಿಸಿದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ತಾಲ್ಲೂಕು ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ,
ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ,ವಾಡಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಇಂಗಳಗಿ ಬಿಜೆಪಿ ಅಧ್ಯಕ್ಷ ಸೋಮು ಚವ್ಹಾಣ,
ಮುಖಂಡರಾದ ರಮೇಶ ಕಾರಬಾರಿ, ಗಿರಿಮಲ್ಲಪ್ಪ ಕಟ್ಟಿಮನಿ,ಕಿಶನ ಜಾಧವ,ಪರುತಪ್ಪ ಕರದಳ್ಳಿ, ಶಿವಶಂಕರ ಕಾಶೆಟ್ಟಿ,ಅಂಬದಾಸ ಜಾಧವ, ಕಿಶನ ನಾಯಕ,ರವಿ ಜಾಧವ, ಆನಂದ ಇಂಗಳಗಿ, ನಾಗರಾಜ ಗೌಡ ಗೌಡಪ್ಪನೂರ ಸೇರಿದಂತೆ ಇತರರು ಇದ್ದರು.