ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಳ ಎಚ್ಚರ ಅಗತ್ಯ : ಡಾ. ಅರುಣ್ ಹರಿದಾಸ್

ಚಳಿಗಾಲದಲ್ಲಿ ಹೃದಯಾಘಾತ  ಹೆಚ್ಚಳ ಎಚ್ಚರ ಅಗತ್ಯ : ಡಾ. ಅರುಣ್ ಹರಿದಾಸ್

ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಳ ಎಚ್ಚರ ಅಗತ್ಯ : ಡಾ. ಅರುಣ್ ಹರಿದಾಸ್

*ತಣ್ಣನೆಯ ಹವಾಮಾನ ಎದುರಿಸಲು ಹಲವು ಸೂತ್ರಗಳ ಸಲಹೆ* (ಸಂದರ್ಶನ : ಡಾ.ಸದಾನಂದ ಪೆರ್ಲ)

ಕಲಬುರಗಿ : ಚಳಿಗಾಲದ ಅವಧಿಯಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಸಾರ್ವಜನಿಕರು ಈ ಅವಧಿಯಲ್ಲಿ ಹೃದಯ ಆರೋಗ್ಯ ಪಾಲನೆಗೆ ಎಚ್ಚರಿಕೆಯೊಂದಿಗೆ ಮೊದಲ ಆದ್ಯತೆ ನೀಡಬೇಕು. ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ಅನುಸರಿಸಲು ಖ್ಯಾತ ಹೃದ್ರೋಗ ತಜ್ಞರಾದ ಡಾ.ಅರುಣ್ ಹರಿದಾಸ್ ಸಲಹೆ ನೀಡಿದ್ದಾರೆ.

    ಚಳಿಗಾಲದ ಅವಧಿಯಲ್ಲಿ ಹೃದ್ರೋಗಿಗಳ ಸಮಸ್ಯೆ ವರ್ಧನೆಯ ಕುರಿತು ಇತ್ತೀಚೆಗಿನ ವರದಿಗಳ ಆಧಾರದ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಅವರು ಬೇಸಿಗೆ ಕಾಲಕ್ಕಿಂತಲೂ ಚಳಿಗಾಲದ ಸಮಯದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚು. ತಣ್ಣನೆಯ ಹವಾಮಾನದ ವೇಳೆ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ. ಹೃದಯಕ್ಕೆ ರಕ್ತ ಸರಬರಾಜು ಕಡಿಮೆಯಾಗುತ್ತದೆ. ಜ್ವರ, ಫ್ಲೂ ಮುಂತಾದ ಸೋಂಕುಗಳು ಹೆಚ್ಚಾಗಿ ದೇಹದಲ್ಲಿ ಉರಿಯೂತ ಕಂಡುಬರುತ್ತದೆ. ಕೊಲೆಸ್ಟ್ರಾಲ್ ಮಟ್ಟದ ಏರಿಕೆ, ವ್ಯಾಯಾಮದ ಕೊರತೆ, ಮನೆ ಒಳಗಿನ ಜೀವನಶೈಲಿ, ಮಾನಸಿಕ ಒತ್ತಡ, ಒಂಟಿತನ,ಖಿನ್ನತೆ ಮುಂತಾದವುಗಳು ಚಳಿಗಾಲದಲ್ಲಿ ಅತ್ಯಧಿಕವಾಗಿರುತ್ತದೆ ಎಂದಿದ್ದಾರೆ. ಈ

  ಚಳಿಗಾಲದ ವೇಳೆ ಹೃದಯ ಸಮಸ್ಯೆ ತಡೆಯಲು ಸಾರ್ವಜನಿಕರು ಎಚ್ಚರಿಕೆಯ ಹಲವು ಸೂತ್ರಗಳನ್ನು ಅನುಸರಿಸುವುದು ಉತ್ತಮ. ಬಿಸಿ ನೀಡುವ ಉಡುಪು (ಸ್ವೆಟ್ಟರ್) ಶಾಲು, ಸ್ಕಾರ್ಫ್ ಬಳಸಿ ಎದೆ ಮತ್ತು ಕತ್ತನ್ನು ಮುಚ್ಚಿಕೊಳ್ಳಬೇಕು. ರಕ್ತ ಪ್ರವಾಹ ತಡೆಯುವ ಉಡುಗೆ ಧರಿಸಬಾರದು. ಸೂರ್ಯೋದಯದ ನಂತರ ವಾಕಿಂಗ್ ಉತ್ತಮ ಕ್ರಮ. ಯೋಗ, ಲಘು ವ್ಯಾಯಾಮ ಮನೆಯೊಳಗೆ ಅಥವಾ ಒಳಾಂಗಣದಲ್ಲಿ ಮಾಡಬೇಕು. ತಣ್ಣನೆಯ ಹವೆಯಲ್ಲಿ ಹೆಚ್ಚು ಒತ್ತಡದ ಕೆಲಸವನ್ನು ಮಾಡದಿರುವುದು, ಎದೆ ನೋವು ಉಸಿರಾಟ ತೊಂದರೆ ಇದ್ದರೆ ತಕ್ಷಣ ಕೆಲಸವನ್ನು ನಿಲ್ಲಿಸಬೇಕು. ಕಿತ್ತಳೆ, ದಾಳಿಂಬೆ, ಪೇರಳೆ ಹಣ್ಣು ಸೇವನೆ ತಣ್ಣನೆಯ ಹವಾಮಾನದ ಸಂದರ್ಭದಲ್ಲಿ ಉತ್ತಮ. ಬಿಸಿ ಸೂಪ್, ಹರ್ಬಲ್ ಚಹಾ ಜೀ ಹೆಚ್ಚು ನೀರು ಸೇವನೆ, ಬಿಸಿಲಿಗೆ ನಡೆಯುವುದು, ಧ್ಯಾನ, ಯೋಗ ಮಾಡಿ ಹೃದಯದ ಆರೋಗ್ಯ ಕಾಪಾಡಬೇಕು ಎಂದು ಡಾ .ಅರುಣ್ ಹರಿದಾಸ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. 

ಬೆಳಗ್ಗಿನ ವೇಳೆ ಅಧಿಕ ಹೃದಯಾಘಾತ

 ಹೃದ್ರೋಗದ ಬಗ್ಗೆ ಇತ್ತೀಚಿನ ಅಧ್ಯಯನದ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಹೃದಯಾಘಾತದ ಅಪಾಯವು ರಾತ್ರಿ 11 ಗಂಟೆಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ರಕ್ತದ ಒತ್ತಡ ಮತ್ತು ಹೃದಯ ಬಡಿತದ ಏರಿಕೆ ಇದಕ್ಕೆ ಕಾರಣವಾಗಿದೆ. ಎದ್ದ ತಕ್ಷಣ ದೇಹದಲ್ಲಿ ಕೊರ್ಟಿಸೋಲ್, ಆಡ್ರೆನಲಿನ್ ಮುಂತಾದ ಒತ್ತಡದ ಹಾರ್ಮೋನುಗಳ ಏರಿಕೆ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒತ್ತಡಕ್ಕೆ ಒಳಗಾಗುತ್ತವೆ ಮತ್ತು ರಕ್ತದ ಒತ್ತಡ ತೀವ್ರವಾಗಿ ಹೆಚ್ಚಾಗುತ್ತದೆ. ರಾತ್ರಿಯ ವೇಳೆ ದೇಹ ನೀರನ್ನು ಕಡಿಮೆ ಕಳೆದುಕೊಂಡಿರುವುದು, ಬೆಳಿಗ್ಗೆ ರಕ್ತ ಸ್ವಲ್ಪ ದಪ್ಪವಾಗಿರುತ್ತದೆ. ಬೆಳಿಗ್ಗೆ ದೇಹದ ಕ್ಲಾಟ್ ಡಿಸಾಲ್ವಿಂಗ್ (ಕಟ್ಟಿನ ಕರಗುವಿಕೆ) ಕ್ರಿಯೆಯು ಕಡಿಮೆ ಇರುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ಅಡ್ಡಗಟ್ಟುವಿಕೆ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. 

ಸೋಮವಾರ ಹೃದಯಾಘಾತ ಅಧಿಕ

ಹೃದಯಾಘಾತ ಸಮಸ್ಯೆಯು ಸೋಮವಾರ ಅಧಿಕವಾಗಿರುತ್ತದೆ ಎಂದು ಇತ್ತೀಚಿನ ಅಧ್ಯಯನದ ವರದಿಯು ಸಾಬೀತು ಮಾಡಿದೆ. ವಿಶೇಷವಾಗಿ ಕೆಲಸ ಮಾಡುವ ಪುರುಷರು ಮತ್ತು ಮಹಿಳೆಯರು ಈ ಸಮಸ್ಯೆ ಎದುರಿಸುತ್ತಿದ್ದು ಕೆಲಸದ ಸ್ಥಳಕ್ಕೆ ಮರಳುವ ಒತ್ತಡದಿಂದ ಹಾರ್ಮೋನುಗಳು ಏರಿಕೆಯಾಗುವುದಲ್ಲದೆ ವಿಶ್ರಾಂತಿಯ ನಂತರ ಆಕಸ್ಮಿಕ ಒತ್ತಡ, ಹೃದಯ ಫ್ಲಾಕ್ ಅಸ್ಥಿರವಾಗುತ್ತದೆ ಎನ್ನಲಾಗುತ್ತಿದೆ. ನಿಖರ ಕಾರಣಗಳು ಸಾಬೀತಾಗದಿದ್ದರೂ ಕೆಲಸದ ಒತ್ತಡವೇ ಮುಖ್ಯ ಕಾರಣವೆಂದು ಕಂಡುಕೊಳ್ಳಲಾಗಿದೆ.

ನಿದ್ರೆ ಸಮಸ್ಯೆ ಹೃದ್ರೋಗಕ್ಕೆ ಕಾರಣ

ನಿದ್ರೆಯ ಕೊರತೆ ಉಂಟಾದರೆ ಹೃದಯಾಘಾತಕ್ಕೆ ಕಾರಣವಾಗುತ್ತದೆ. ರಕ್ತದ ಒತ್ತಡ ದಯವಿಟ್ಟು ಅತಿಯಾದ ತೂಕ ಉರಿಯುತ ಮಾನಸಿಕ ಒತ್ತಡ ಇವೆಲ್ಲವೂ ಕೂಡ ಹೃದಯಾಘಾತದ ಅಪಾಯಗಳನ್ನು ಹೆಚ್ಚಿಸುತ್ತದೆ