ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯಾರಾಧನೆ

ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯಾರಾಧನೆ

ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯಾರಾಧನೆ

ಶಹಾಬಾದ ಫೆ.17: ಶ್ರೀ ಬೀರಪ್ಪ ಬೆಟ್ಟ ಟ್ರಸ್ಟ್ ವತಿಯಿಂದ ಬೆಟ್ಟದ ಶ್ರೀ ಬೀರಲಿಂಗೆಶ್ವರ ದೇವಸ್ಥಾನದಲ್ಲಿ ದಣಿವರಿಯದ ಸಂತ, ಹಾಲುಮತ ರತ್ನ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠಾಧ್ಯಕ್ಷರಾದ ಶಿವೈಕ್ಯ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮಕ್ಕೆ ಖಂಡೋಬಾ ದೇವಸ್ಥಾನ ಕಡಣಿಯ ದಿವ್ಯ ಸಾನಿಧ್ಯದಲ್ಲಿ ಪೀಠಾಧಿಪತಿಗಳಾದ ಶ್ರೀ ಗಣಪತಿ ಮುತ್ತ್ಯಾ ಪೂಜಾರಿ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬೀರಪ್ಪ ಬೆಟ್ಟ ಟ್ರಸ್ಟ್ ಅಧ್ಯಕ್ಷ ಶಿವಾನಂದ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಬುರಗಿಯ ಗುತ್ತಿಗೆದಾರರಾದ ಮಲ್ಲಿಕಾರ್ಜುನ ಎಲ್. ಪೂಜಾರಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಶಹಾಬಾದ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಶಹಾಬಾದದ ಮುಖಂಡ ಶಿವಯೋಗಿ ಪಟ್ಟಣಕರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಕಂಠಿಕರ ಉಪಸ್ಥಿತರಿದ್ದರು.

ವೇದಿಕೆ ಮೇಲೆ ಸಿದ್ದು ಎಸ್. ಪೂಜಾರಿ, ಶಾಂತಪ್ಪ ಪೂಜಾರಿ, ರಾಜು ಕುಂಬಾರ, ಅರುಣ ಜಾಯಿ, ಶರಣಪ್ಪ ಪೂಜಾರಿ, ನಾಗೇಂದ್ರ ಕುಂಟನ, ಯಲ್ಲಾಲಿಂಗ ಕರಗರ, ಗುರುರೇವಣಸಿದ್ದ ಕೊಡಚಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಬಸವರಾಜ ಕುಂಟನ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಾಂತಪ್ಪ ಹಡಪದ ವಂದಿಸಿದರು.

ಸ್ವಾಮೀಜಿಯವರ ಜೀವನ ಸಾಧನೆ ಮತ್ತು ಸಮಾಜ ಸೇವೆಯನ್ನು ಸ್ಮರಿಸಿ ಮಾತನಾಡಿದ ಗಣ್ಯರು, ಅವರ ಆದರ್ಶಗಳನ್ನು ಅನುಸರಿಸುವಂತೆ ಕರೆ ನೀಡಿದರು. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ದಿನವಿಡೀ ದಾಸೋಹ ಸೇವೆ ಭಕ್ತರಿಗೆ ನೆರವೇರಿಸಲಾಯಿತು.