ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಲು ಸಂವಿಧಾನದ ಮಾರ್ಗಸೂಚಿ ಪಾಲಿಸಿ: ನ್ಯಾ: ದೇವದಾಸ್

ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಲು ಸಂವಿಧಾನದ ಮಾರ್ಗಸೂಚಿ ಪಾಲಿಸಿ: ನ್ಯಾ: ದೇವದಾಸ್

ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಲು ಸಂವಿಧಾನದ ಮಾರ್ಗಸೂಚಿ ಪಾಲಿಸಿ: ನ್ಯಾ: ದೇವದಾಸ್

ಆಳಂದ: ನಮ್ಮನ್ನು ನಾವು ಆಳಿಕೊಳ್ಳಲು, ನಮಗೆ ನಮ್ಮ ಸಂವಿಧಾನ ಬೇಕು" ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಲು ಸಂವಿಧಾನದ ನಮಗೆ ನೀಡಿದಸ ಮಾರ್ಗಸೂಚಿ ಪಾಲಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್. ದೇವದಾಸ್ ಹೇಳಿದರು. 

ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಕರಡು ರಚನೆಯ ಮಾತನಾಡಿದ ಅವರು “1947 ರ ಮೊದಲು ಸಾಂವಿಧಾನಿಕ ಸಭೆಯನ್ನು ರಾಜಪ್ರಭುತ್ವದ ರಾಜ್ಯಗಳ 389 ಚುನಾಯಿತ ಸದಸ್ಯರು ನಡೆಸಿದರು. ನಂತರ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಿತಿಗೆ ಕರ್ನಾಟಕದ ಬೆಣಗಲ್ ನರಶಿಮರಾವ್ ಕಾನೂನು ಸಲಹೆಗಾರರಾಗಿ ಆಯ್ಕೆಯಾದರು. ಪ್ರಸ್ತುತ ಕರಡನ್ನು ಅಂತಿಮಗೊಳಿಸುವ ಮೊದಲು ಒಟ್ಟು 114 ಅಧಿವೇಶನಗಳನ್ನು ನಡೆಸಲಾಯಿತು.” ಎಂದು ಅವರು ಹೇಳಿದರು.  

ದೇಶವು ಸಂವಿಧಾನದ ಮೇಲೆ ನಡೆಯುತ್ತದೆ ಮತ್ತು ನಾವು ವಿಶ್ವದ ಅತ್ಯುತ್ತಮ ಸಂವಿಧಾನವನ್ನು ಹೊಂದಿದ್ದೇವೆ. ಎಡಿಎಂ ಜಬಲ್ಪುರ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತೀಯ ಸಂವಿಧಾನ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಶಕ್ತಿಯ ಬಗ್ಗೆ ಗಮನಸೆಳೆದರು. 

ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳಲ್ಲಿ ಒಂದಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಧಿಕಾರದ ಪ್ರತ್ಯೇಕತೆಯು ನಮ್ಮ ಮೂಲಭೂತ ಕರ್ತವ್ಯ ಮತ್ತು ಹಕ್ಕುಗಳನ್ನು ಪರಿಣಾಮಕಾರಿಯಾಗಿ ಚಲಾಯಿಸಲು ಅನುವು ಮಾಡಿಕೊಟ್ಟಿದೆ. ನಮ್ಮ ಸಂವಿಧಾನದಿAದ ನಮ್ಮ ದೇಶ ವಿಶಿಷ್ಟವಾಗಿದೆ. ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಲು ಅನುಚ್ಛೇದ-21, 'ಸ್ವಾತಂತ್ರ‍್ಯದ ಹಕ್ಕು' ಕುರಿತು ಇನ್ನಷ್ಟು ತಿಳಿದುಕೊಳಿ ಎಂದು ಹೇಳಿದರು.

ಸಿಯುಕೆ ಕುಲಪತಿ, ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಓದಿದರು ಮತ್ತು ಎಲ್ಲರೂ ಅದನ್ನು ಅನುಸರಿಸಿದರು. ಅವರು ಮಾತನಾಡಿ “ಗೌರವಯುತವಾಗಿ ಮತ್ತು ಮೌಲ್ಯಯುತವಾಗಿ ಬದುಕಲು ಸಂವಿಧಾನವು ಅನುವು ಮಾಡಿಕೊಟ್ಟಿದೆ. ಸಂವಿಧಾನವೂ ನಮಗೆ ವಿವಿಧತೆಯಲ್ಲಿ ಏಕತೆಯನ್ನು ಕಲಿಸಿದೆ. ನಮ್ಮ ಸಂವಿಧಾನದಲ್ಲಿ ಲಿಂಗ ಸಮಾನತೆಯ ಕಾರಣ, ನಾವು ಮಹಿಳಾ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳನ್ನು ಹೊಂದಿರುತ್ತೇವೆ” ಎಂದು ಅವರು ಹೇಳಿದರು. 

ಅತಿಥಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಮಾತನಾಡಿ “ಸಂವಿಧಾನವು' ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಾಣುತ್ತದೆ ಹಾಗೂ ಎಲ್ಲರಿಗೂ ಬದುಕಲು ಸಮಾನ ಅವಕಾಶ ನೀಡುತ್ತದೆ. ಸಂವಿಧಾನವಿಲ್ಲದೆ ನಾವು ಘನತೆಯಿಂದ ಬದುಕಲು ಸಾಧ್ಯವಿಲ್ಲ. ಸಂವಿಧಾನವು ಎಲ್ಲ ಧರ್ಮಗಳಿಗೂ ದೇವರು ಇದ್ದಂತೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಸಾಂವಿಧಾನಿಕ ನೈತಿಕತೆಯನ್ನು ನಾವು ಅನುಸರಿಸಬೇಕು. ನಾವೆಲ್ಲರೂ ನಮ್ಮ ಸಂವಿಧಾನ, ನಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಗೌರವಿಸಬೇಕು ಎಂದರು. 

ಪ್ರಭಾರಿ ಕುಲಸಚಿವ ಪ್ರೊ.ಚನ್ನವೀರ ಆರ್.ಎಂ ಮಾತನಾಡಿದರು. ವಿವಿಧ ಸ್ಪರ್ದೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಡಾ.ಬಸವರಾಜ ಕುಬಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. 

ಡಾ.ಅನಂತ ಚಿಂಚೂರೆ ನಿರೂಪಿಸಿ ವಂದಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ವಂದೇಮಾತರA ಹಾಡಿದರು. ಪ್ರೊ.ಬಸವರಾಜ ಡೋಣೂರ, ಪ್ರೊ.ಜಿ.ಆರ್.ಅಂಗಡಿ, ಪ್ರೊ.ರೊಮೇಟ್ ಜಾನ್, ಪ್ರೊ.ಪವಿತ್ರಾ ಆಲೂರು, ಡಾ.ವೆಂಕಟರಮಣ ದೊಡ್ಡಿ, ಪ್ರೊ.ವೀರೇಶ ಕಸಬೇಗೌಡರ, ಡಾ.ಕಟ್ಟಿಮನಿ ಉಪಸ್ಥಿತರಿದ್ದರು.