ಮೇಜರ್ ಧ್ಯಾನಚಂದ ಜನ್ಮದಿನ : ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

ಮೇಜರ್ ಧ್ಯಾನಚಂದ ಜನ್ಮದಿನ : ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

|ಮೇಜರ್ ಧ್ಯಾನಚಂದ ಜನ್ಮದಿನ : ರಾಷ್ಟ್ರೀಯ ಕ್ರೀಡಾ ದಿನ ಆಚರಣೆ|

ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳ ಪ್ರಮುಖ ಪಾತ್ರವಿದೆ :.. ಗಂಗಾಧರ. 

ಶಹಾಬಾದ : - ಕ್ರೀಡೆಗಳು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದು ಮಾತ್ರವಲ್ಲದೆ ಅದು ನಮ್ಮನ್ನು ಕ್ರೀಯಾ ಶೀಲರನ್ನಾಗಿ ಹಾಗೆ ಚುರುಕಾಗಿರಿಸುತ್ತದೆ ಮತ್ತು ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳ ಪ್ರಮುಖ ಪಾತ್ರವಿದೆ ಎಂದು ಬಾಲ ವಿದ್ಯಾ ಮಂದಿರ ಶಾಲೆಯ ಮುಖ್ಯ ಗುರುಗಳಾದ ಗಂಗಾಧರ ರವರು ಹೇಳಿದರು. 

ಅವರು ಬಾಲ ವಿದ್ಯಾ ಮಂದಿರ ಶಾಲೆಯ ಆವರಣದಲ್ಲಿ ಮೇಜರ್ ಧ್ಯಾನಚಂದ ರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಯುವಕರನ್ನು ಮತ್ತು ಶಾಲಾ ಮಕ್ಕಳನ್ನು ಕ್ರೀಡೆಯತ್ತ ಆಕರ್ಷಿತರನ್ನಾಗಿ ಮಾಡಲು ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. 

ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಧ್ಯಾನ್‌ಚಂದ್‌ ಅವರು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಚಿನ್ನದ ಪದಕ ಪಡೆದು ಸಾಧನೆ ಮಾಡುವ ಮೂಲಕ ದೇಶಕ್ಕೆ ಟಹೆಸರು ತಂದುಕೊಟ್ಟ ಶ್ರೇಷ್ಠ ಆಟಗಾರ, ಹಾಕಿ ಮಾಂತ್ರಿಕ ಹಾಗೂ ಶ್ರೇಷ್ಠ ಕ್ರೀಡಾಪಟು ಧ್ಯಾನ್ ಚಂದ್ ಅವರ ಮಹಾನ್ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಭಾರತ ಸರ್ಕಾರವು 2012 ರಲ್ಲಿ ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಗುತ್ತದೆ ಎಂದರು. 

ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯ ಗುರುಗಳಾದ ವಿದ್ಯಾವತಿ, ರಾಮಲಕ್ಷ್ಮೀ ಹಾಗೂ ಪತ್ರಕರ್ತ ಲೋಹಿತ ಕಟ್ಟಿ ಇದ್ದರು. 

ಶಹಾಬಾದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆ ಟ್ರೋಫಿಗಳನ್ನು ನೀಡಿ ಸನ್ಮಾನಿಸಲಾಯಿತು. 

ದೈಹಿಕ ಶಿಕ್ಷಕ ರತನರಾಜ ಕೋಬಾಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿದ್ಯಾರ್ಥಿ ಉಮೇಶ ಸ್ವಾಗತಿಸಿದರು, ಸೋನಾಕ್ಷಿ ಮತ್ತು ಸೈಯದ ಜುನೇದ ನಿರೂಪಿಸಿದರು, ಸೋಹಾ ಅಹ್ಮದಿ ವಂದಿಸಿದರು. 

ಈ ಸಂಧರ್ಭದಲ್ಲಿ ಬಾಲ ವಿದ್ಯಾ ಮಂದಿರ ಶಾಲೆಯ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.