ಅಬಕಾರಿ ಆಯುಕ್ತರಾಗಿದ ವೆಂಕಟೇಶ್ ಕುಮಾರ್ ಅವರಿಗೆ ಅಭಿನಂದನೆ

ಅಬಕಾರಿ ಆಯುಕ್ತರಾಗಿದ ವೆಂಕಟೇಶ್ ಕುಮಾರ್ ಅವರಿಗೆ ಅಭಿನಂದನೆ
ಬೆಂಗಳೂರು: ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಜನಪರ ಆಡಳಿತ ನಿರ್ವಹಿಸಿದ್ದ ಶ್ರೀ ವೆಂಕಟೇಶ್ ಕುಮಾರ್ ಅವರು ಇತ್ತೀಚೆಗೆ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ, ಜುಲೈ 16ರಂದು ಬೆಂಗಳೂರಿನ ಆಯುಕ್ತಾಲಯದ ಕಚೇರಿಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ರಾಜ್ಯ ವೈನ್ ಮರ್ಚೆಂಟ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಗೋವಿಂದರಾಜ ಹೆಗ್ಡೆ, ಕಲಬುರಗಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ವೆಂಕಟೇಶ್ ಕಡೇಚೂರ್ ಹಾಗೂ ಗುತ್ತಿಗೆದಾರರಾದ ಶ್ರೀ ಸತೀಶ್ ಸಲಗರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ವೆಂಕಟೇಶ್ ಕುಮಾರ್ ಅವರಿಗೆ ನೂತನ ಜವಾಬ್ದಾರಿಯಲ್ಲೂ ಯಶಸ್ಸು ಕೋರಿದರು.