ಯುಜಿಸಿಇಟಿ-2025: ಆಪ್ಷನ್ ಎಂಟ್ರಿ ದಿನಾಂಕ ಜುಲೈ 18ರವರೆಗೆ ವಿಸ್ತರಣೆ

ಯುಜಿಸಿಇಟಿ-2025: ಆಪ್ಷನ್ ಎಂಟ್ರಿ ದಿನಾಂಕ ಜುಲೈ 18ರವರೆಗೆ ವಿಸ್ತರಣೆ

ಯುಜಿಸಿಇಟಿ-2025: ಆಪ್ಷನ್ ಎಂಟ್ರಿ ದಿನಾಂಕ ಜುಲೈ 18ರವರೆಗೆ ವಿಸ್ತರಣೆ

ಬೆಂಗಳೂರು: ಯುಜಿಸಿಇಟಿ-2025ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಆಪ್ಷನ್ ಎಂಟ್ರಿ ಮಾಡಲು ಸರ್ವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಇದೀಗ ಈ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು **ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಿಸಲಾಗಿದೆ** ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಎಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.

ಸೂಚನೆಗಳು:

* ಎಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ ವಿಜ್ಞಾನ, ಬಿಪಿಟಿ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಆಸಕ್ತ ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ಈ ಅವಕಾಶವನ್ನು ಬಳಸಿಕೊಳ್ಳಬೇಕು.

* ಆಪ್ಷನ್ ಎಂಟ್ರಿಗೆ ಮೊದಲು, ಕಾಲೇಜು ಹಾಗೂ ಕೋರ್ಸ್ ಕೋಡ್‌ಗಳ ಆದ್ಯತಾಪಟ್ಟಿ ಬಿಳಿ ಕಾಗದದಲ್ಲಿ ತಯಾರಿಸಿಕೊಳ್ಳುವಂತೆ ಸೂಚಿಸಲಾಗಿದೆ.

* ಈ ಕ್ರಮದಿಂದ ಸರ್ವರ್ ಮೇಲೆ ಒತ್ತಡ ಕಡಿಮೆಯಾಗಲಿದೆ ಮತ್ತು ಇತರ ಅಭ್ಯರ್ಥಿಗಳಿಗೆ ಕೂಡ ಪೋರ್ಟಲ್ ಲಭ್ಯವಿರುತ್ತದೆ.

**ಸೀಟು ಹಂಚಿಕೆ ತಾತ್ಕಾಲಿಕ ಹಾಗೂ ಅಂತಿಮ ವೇಳಾಪಟ್ಟಿ:**

* **ಜುಲೈ 21**: ಅಣಕು ಸೀಟು ಹಂಚಿಕೆ ಫಲಿತಾಂಶ

* **ಜುಲೈ 28**: ಅಂತಿಮ ಸೀಟು ಹಂಚಿಕೆ ಫಲಿತಾಂಶ

**ವೈದ್ಯಕೀಯ ಪ್ರವೇಶಕ್ಕೆ ದಾಖಲೆ ಪರಿಶೀಲನೆ:**

* ಜುಲೈ 7 ನಂತರ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ವೈದ್ಯಕೀಯ, ದಂತ, ಆಯುರ್ವೇದ, ಹೋಮಿಯೋಪಥಿ ಹಾಗೂ ಯುನಾನಿ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು **ಜುಲೈ 17ರಿಂದ 19ರೊಳಗೆ** ತಮ್ಮ ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ ಕಚೇರಿಗೆ ಹಾಜರಾಗಬೇಕು.

* ವಿಶೇಷ ವರ್ಗ ಹಾಗೂ ಶ್ರೇಣಿಗೆ ಸೇರಿದವರು, ವಿಶೇಷ ಚೇತನರು ತಮ್ಮ ಪರಿಗಣನೆಯ ವೇಳಾಪಟ್ಟಿ ಪ್ರಕಾರಲೇ ಹಾಜರಾಗಬೇಕು.

ಕನ್ನಡ ಭಾಷಾ ಪರೀಕ್ಷೆ:

ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು **ಜುಲೈ 17ರಂದು ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ** ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುತ್ತದೆ. ಎಂದು ಎಚ್. ಪ್ರಸನ್ನ ಐಎಎಸ್,ಕಾರ್ಯನಿರ್ವಾಹಕ ನಿರ್ದೇಶಕರು ರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು, ತಿಳಿಸಿದರು