ಅಧ್ಯಕ್ಷ ಹುದ್ದೆಗೆ ನೀಲಕಂಠ ಜಮಾದಾರ ರಾಜೀನಾಮೆ;
ಅಧ್ಯಕ್ಷ ಹುದ್ದೆಗೆ ನೀಲಕಂಠ ಜಮಾದಾರ ರಾಜೀನಾಮೆ;
ಸಾರ್ಥಕ ಸೇವೆಯಲ್ಲಿಯ ನಿಸ್ವಾರ್ಥ ಸೇವಕನ ಸುತ್ತಮುತ್ತ
ಕಲಬುರಗಿ ಜಿಲ್ಲೆಯ ಕೋಲಿ ಕಬ್ಬಲಿಗ ನೌಕರರ ಸಂಘದ ಎರಡು ಅವಧಿಯವರೆಗೆ ಅಧ್ಯಕ್ಷರಾಗಿ ತಮ್ಮ ಸಾರ್ಥಕ ಸೇವೆ ನಿರ್ವಹಿಸಿ,ಅವರು ನಿವೃತ್ತರಾದ ಮರುದಿನವೇ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ ಸಾಮಾಜಿಕ ಕಳಕಳಿಯ ದೊಡ್ಡಸ್ತಿಕೆಯನ್ನು ಮೆರೆದಿದ್ದಾರೆ.
ಇವರೇ ಮುಂದುವರೆಯಬೇಕೆಂಬ ಕೇಂದ್ರ ಸಂಘದ ಒತ್ತಾಯಕ್ಕೆ ಅವರು ಒಪ್ಪದೇ ಇದ್ದಾಗ ಅನಿವಾರ್ಯವಾಗಿ ನವೆಂಬರ್ ನಲ್ಲಿ ನಡೆಯುವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದವರೆಗೆ ಮುಂದುವರೆಯಲು ಕೇಂದ್ರ ಸಂಘದವರು ಸೂಚಿಸಿದ್ದಾರೆ. ಮುಂದುವರಿಕೆಯ ಆದೇಶದ ಪ್ರತಿಯನ್ನು ಹಾಗೂ ರಾಜೀನಾಮೆ ಪತ್ರವನ್ನು ಈ ಜಾಲತಾಣದಲ್ಲಿ ಮಾಹಿತಿಗಾಗಿ ಪೋಸ್ಟ್ ಮಾಡಲಾಗಿದೆ.
ಸಿದ್ದಪ್ಪ ಜಿ ಮಹಾಗಾಂವ ಮಾಧ್ಯಮ ಕಾರ್ಯದರ್ಶಿ ಬೆಂಗಳೂರು