ಡಾ.ಮಲ್ಲಿಕಾರ್ಜುನಚಿಕ್ಕಪಾಟೀಲ ಅವರು ಈಜು ಸ್ಪರ್ಧೆಯಲ್ಲಿ ಗೆಲುವು
ಡಾ.ಮಲ್ಲಿಕಾರ್ಜುನಚಿಕ್ಕಪಾಟೀಲ ಅವರು ಈಜು ಸ್ಪರ್ಧೆಯಲ್ಲಿ ಗೆಲುವು
ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಹೆಚ್- ಗುಂಪಿನಲ್ಲಿ ಕಲಬುರಗಿಯ ಅಕ್ವಾ ಅಸೋಸಿಯೇಷನ್ ನ ಸದಸ್ಯರು ಹಾಗೂ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಕಲಬುರಗಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶ್ರೀಯುತರು ಸದಾಶಿವನಗರದ ಗಣೇಶ ಮಂದಿರ ಸಮಿತಿಯ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.ಚಿಕ್ಕಪಾಟೀಲ ಅವರ ಸಾಧನೆಗೆ ಸದಾಶಿವನಗರ ಬಡಾವಣೆಯ ನಿವಾಸಿಗಳು ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ,ಹೈ.ಕ.ಶಿ .ಸಂಸ್ಥೆಯ ಅಧ್ಯಕ್ಚರು ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಶ್ರೀ ಶಶೀಲ ನಮೋಷಿ ,ಶ್ರೀ ಹಾವೇಂದ್ರ ಪುಣ್ಯಶೆಟ್ಟಿ, ಲಕ್ಷ್ಮಿಕಾಂತರಡ್ಡಿ ಪಲ್ಲಾ ,ಮಲ್ಲಿಕಾರ್ಜುನ ಸ್ವಾಮಿ, ನರಸಣ್ಣ ತಂಬೂರಿ,ಶರಬಣ್ಣ ದಿದ್ದಿ,ಡಾ.ರಾಜೇಂದ್ರ ಕೊಂಡಾ,ಡಾ.ಮಹೇಶ ಗಂವ್ಹಾರ ,ನಾಗೇಂದ್ರ ಪಾಟೀಲ,ಗಂಗಾಧರ ಡೋಣಿ,ಮೊದಲಾದವರು ಅಭಿನಂದಿಸಿದ್ದಾರೆ.