ಕಲೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ – ಡಾ. ಸುರೇಶ ಶರ್ಮಾ

ಕಲೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ – ಡಾ. ಸುರೇಶ ಶರ್ಮಾ

ಕಲೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ – ಡಾ. ಸುರೇಶ ಶರ್ಮಾ

ಕಲಬುರಗಿ : ನಗರದ ಕಲಾ ಮಂಡಳದಲ್ಲಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ (ರಿ) ಇವರ ಸಂಯುಕ್ತಾಶ್ರಯದಲ್ಲಿ 79ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಹಾಗೂ ಸಂಸ್ಕೃತಿಕ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸುರೇಶ ಶರ್ಮಾ ಮಾತನಾಡಿ, “ಕಲೆ ಎಂಬುದು ಮಾನವ ಜೀವನದ ಅತ್ಯಂತ ಸುಂದರ ಅಂಶ. ಕಲೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಮಾಜದಲ್ಲಿ ಸೌಹಾರ್ದತೆ ಹಾಗೂ ಮಾನವೀಯತೆ ಬೆಳೆಸುವುದರಲ್ಲಿ ಕಲೆ ಮಹತ್ವದ ಪಾತ್ರವಹಿಸುತ್ತದೆ. ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವುದು ಪ್ರತಿಯೊಬ್ಬ ಕಲಾವಿದನ ಜವಾಬ್ದಾರಿ”ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಗುರುರಾಜ್ ಬಂಡಿ, ಚಲನಚಿತ್ರ ನಿರ್ದೇಶಕ ಕಾಂತರಾಜ್ ಗೌಡ, ಯಂಕಪ್ಪ ಅಕ್ಷಯ್, ಅಬ್ದುಲ್ ಜಾವಿದ್, ಸಂಗೀತ, ಮಂಜುನಾಥ್, ಶರಣಮ್ಮ ವೇದ, ಸೋನು ಎಂ ಜೆ, ಅಂಬರೀಶ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಬಚ್ಚನ್ ಸ್ವಾಗತ ಭಾಷಣ ಮಾಡಿ, “ಸಂಸ್ಥೆ ಕಳೆದ ಹಲವು ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಪ್ರತಿಭೆ ತೋರಿದವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಇದು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ” ಎಂದು ಹೇಳಿದರು.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನಗಳು ನಡೆದವು. ಯುವ ಕಲಾವಿದರು ತಮ್ಮ ಕಲೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಶಸ್ತಿ ಹಾಗೂ ಸನ್ಮಾನ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕೃತಜ್ಞತೆಗಳನ್ನು ಅಂಬರೀಶ್ ಪಾಟೀಲ್ ಸಲ್ಲಿಸಿದರು.

-