ಶೋಷಿತ ಸಮುದಾಯದಿಂದ ಕಲಬುರ್ಗಿಯಲ್ಲಿ 5 ರಂದು ಬೃಹತ್ ಪ್ರತಿಭಟನೆ

ಶೋಷಿತ ಸಮುದಾಯದಿಂದ ಕಲಬುರ್ಗಿಯಲ್ಲಿ 5 ರಂದು ಬೃಹತ್ ಪ್ರತಿಭಟನೆ

ಕಲಬುರಗಿ 

ಕನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಕಲಬುರ್ಗಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 05-08-2024 ರಂದು ಸೋಮವಾರ ಬೆಳಗ್ಗೆ 11:00 ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜನೆ ಮಾಡಲಾಗುವುದು ಎಂದು ಮಾಂತೇಶ್ ಎಸ್ ಕೌಲಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶೋಷಿತ ಸಮುದಾಯಗಳ ಜನನಾಯಕ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ತೇಜೋವಧೆ ಖಂಡಿಸಿ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ರಾಜಭವ ಚಲೋ ನಿರ್ಧಾರ ಎಂದರು 

ಇತ್ತಿಚೇಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿಗಳು ಅಧಿಕಾರದ ಆಸೆಗಾಗಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. 

 ಅವರು ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, 15 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು 40 ವರ್ಷಗಳಿಂದ ರಾಜಕೀಯದಲ್ಲಿದ್ದರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯನವರು ,

ರಾಜ್ಯ ಮತ್ತು ಕೇಂದ್ರ ಬಿಜೆಪಿ ಮತ್ತು ಜೆಡಿಎಸ್ ರ ನಾಯಕರ ಕುತಂತ್ರಕ್ಕೆ ರಾಜ್ಯಪಾಲರ ಮುಖಾಂತರ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

 ಸಿದ್ದರಾಮಯ್ಯರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ.ಎಂದರು

 ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ ಧರಂಸಿಂಗ್ ಮತ್ತಿತರರ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು, ಸಿದ್ದರಾಮಯ್ಯರವರ ಜೋತೆ ಬಡವರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ಕಾಂಗ್ರೆಸ್ ಸರ್ಕಾರ ಮತ್ತು ಸಮಾಜ ನಿಂತಿವೆ ಎಂದರು 

ಸಿದ್ದರಾಮಯ್ಯರವರ ತೇಜೋವಧೆ ಖಂಡಿಸಿ , ರಾಜ್ಯಪಾಲರ ನಡೆಯನ್ನು ವಿರೋಧಿಸಿ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರಾಜ್ಯ ಸಮಿತಿ ನಿರ್ಧರಿಸಿದ್ದಾರೆ ಬೃಹತ ಪ್ರತಿಭಟನೆಯಲ್ಲಿ ರೋಷಿತ್ ಸಮುದಾಯದವರು ಭಾಗವಹಿಸಬೇಕೆಂದರು ,ಎಂದು ವಿಠಲ ದೊಡ್ಡಮನಿ,ಬಸಯ್ಯ ಗುತ್ತೇದಾರ,ಅರ್ಜುನ ಗೊಬ್ಬರ,ಬೈಲಪ್ಪ ನೆಲೋಗಿ,ಪಿಡ್ಡಪ್ಪ ಜಾಲಗಾರ,ಕುಮಾರ ಯಾದವ್,ಸಾಯಿಬಣ್ಣ ಹೇಳವರ,ಮಗ್ಟಮ್ ದರ್ವೆತಿ, ಹಣಮಯ್ಯ ಆಲೂರ,ನಿಂಗಪ್ಪ ಸಾಗನೂರ, ಅರುಣಕುಮಾರ ಕಟ್ಟುಬು,ರೇವಣಸಿದ್ದಪ್ಪ ಸಾತನೂರ,ಸುದ್ದಿಗೋಷ್ಠಿ ನಡೆಸಿದರು