ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪ್ರತೀಕವೇ ಸ್ವಾತಂತ್ರ್ಯ ದಿನಾಚರಣೆ

ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪ್ರತೀಕವೇ ಸ್ವಾತಂತ್ರ್ಯ ದಿನಾಚರಣೆ

ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪ್ರತೀಕವೇ ಸ್ವಾತಂತ್ರ್ಯ ದಿನಾಚರಣೆ 

ಶಹಾಪುರ :ಸ್ವಾತಂತ್ರ್ಯ ದಿನವನ್ನು ದೇಶಭಕ್ತಿ ಮತ್ತು ಏಕತೆಯ ಮನೋಭಾವವನ್ನು ಉತ್ತೇಜಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಮಾನತೆಯನ್ನು ಎತ್ತಿ ಹಿಡಿದು, ಸದಾ ಪ್ರೇರಣೆ ದಾಯಕವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಶಿದ್ರಾ ಹೇಳಿದರು.

ತಾಲೂಕಿನ ಸಗರ ಗ್ರಾಮ ಪಂಚಾಯಿತಿ ವತಿಯಿಂದ ಯುಕೆಪಿ ಕ್ಯಾಂಪ್ ಆವರಣದಲ್ಲಿ ಆಯೋಜಿಸಿದ 79 ನೇ ಸ್ವಾತಂತ್ರ್ಯ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ನೆನಪುಗಳನ್ನು ಮೆಲುಕು ಹಾಕಿ ಅವರ ಸಾಹಸ, ಶೌರ್ಯ,ಯುವ ಪೀಳಿಗೆಗೆ ಪರಿಚಯಿಸಿ ಕೊಡುವ ನಿಟ್ಟಿನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬದುಕು ಬರಹ ಓದಿ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿಶ್ವನಾಥ ಯರಗೋಳ, ಭಾಗಮ್ಮ ಮುದ್ದಾ,ನಿಂಗಮ್ಮ ಚೆನ್ನೂರ,ಮಹಾದೇವ ಹುಬ್ಬಳ್ಳಿ, ಗೊಲ್ಲಾಳಪ್ಪ,ರಹಿಮುನ್ನಿಸಾ ಬೇಗಂ ಸೇರಿದಂತೆ ಇನ್ನಿತರ ಸಾಧಕರನ್ನ ಗುರುತಿಸಿ "ಅತ್ಯುತ್ತಮ ಸೇವಾ ಪ್ರಶಸ್ತಿ" ನೀಡಿ ಗೌರವಿಸಲಾಯಿತು.ಪಿಯುಸಿ ದ್ವಿತೀಯ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಂಷನೀಯ ಪತ್ರ ನೀಡಿ ಗೌರವಿಸಲಾಯಿತು.

ಈ ಸಮಾರಂಭದ ವೇದಿಕೆಯ ಮೇಲೆ ಯುವ ಮುಖಂಡರಾದ ತಿರುಪತಿ ಹತ್ತಿಕಟಿಗಿ,ಗುರು ಕಾಮಾ, ಸಂತೋಷ ಗೌಡ ಸುಬೇದಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದರಾಮಪ್ಪ ಕ್ಯಾತನಕಟ್ಟಿ,ಕಾರ್ಯದರ್ಶಿ ಕಾಳಪ್ಪ ಬಡಿಗೇರ,ಕಂಪ್ಯೂಟರ್ ಆಪರೇಟರ್ ಸಾಯಿಬಾಬಾ ಅಣಬಿ, ಗ್ರಂಥಪಾಲಕ ವಿಶ್ವರಾಧ್ಯ ದೇಸಾಯಿ ಮಠ ಹಾಗೂ ಗ್ರಾಮದ ಹಿರಿಯ,ಕಿರಿಯ ಮುಖಂಡರು ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.