ಜಾತಿ ಪದ್ದತಿ ಹೇಗೆ ಬಂತು ವಿಶೇಷ ಉಪನ್ಯಾಸ : ಜಿ.ಎನ್.ನಾಗರಾಜ

ಜಾತಿ ಪದ್ದತಿ ಹೇಗೆ ಬಂತು ವಿಶೇಷ ಉಪನ್ಯಾಸ : ಜಿ.ಎನ್.ನಾಗರಾಜ

ಜಾತಿ ಪದ್ದತಿ ಹೇಗೆ ಬಂತು ವಿಶೇಷ ಉಪನ್ಯಾಸ.

ವರ್ಣ ವ್ಯವಸ್ಥೆಯಲ್ಲಿ ಜಾತಿ ಪದ್ದತಿ ಉಲ್ಲೇಖ: ಜಿ.ಎನ್.ನಾಗರಾಜ

ಕಲಬುರಗಿ: ಇತಿಹಾಸ ಕೆದಕಿದಾಗ ಇಂದಿನ ಅನಿಷ್ಠ ಜಾತಿ ಪದ್ಧತಿ ವ್ಯವಸ್ಥೆ ವರ್ಣವಸ್ಥೆಯಲ್ಲೇ ಕಾಣಬಹುದಾಗಿದೆ. ಇದು ಜಿತ ಪದ್ದತಿಗೆ ಸಾಕ್ಷಿಯಾಗಿದೆ ಎಂದು ಖ್ಯಾತ ಸಮಾಜ ತಜ್ಞ ಜಿ ಎನ್ ನಾಗರಾಜ್ ಹೇಳಿದರು.

ನಗರದ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡ ಜಾತಿ ವ್ಯವಸ್ಥೆ ಹೇಗೆ ಬಂತು ಎಂಬ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ ವ್ಯವಸ್ಥೆಯಲ್ಲಿ ಮಹಿಳಾ ಅಸಮಾನತೆ ಕೂಡ ನೇರ ಸಂಬAದವಾಗಿದೆ ಎಂದು ಅಭಿಪ್ರಾಯ ಪಟ್ಟರು.

ವೇದಗಳ ಕಾಲದಲ್ಲಿ ಮಹಿಳೆಯರನ್ನು ವೇದಗಳ ಅಧ್ಯಯನ ಮಾಡುವ ಅಧಿಕಾರದಿಂದ ವಂಚಿಸಲಾಗಿತ್ತು. ಪೂಜಾ ಹೋಮ, ಯಜ್ಞ ಮಾಡುವ ಅಧಿಕಾರದಿಂದ ಮಹಿಳೆಯರನ್ನು ದೂರ ಇಡಲಾಗಿತ್ತು.

ಬ್ರಾಹ್ಮಣರಲ್ಲೇ ಕನಿಷ್ಠ ಇರುವ ಅಪಮಾನಕ್ಕೆ ಒಳಗಾದ ಬ್ರಾಹ್ಮಣರು ಕರ್ನಾಟಕಕ್ಕೆ ವಲಸೆ ಬಂದ ನಂತರ ಅತಿ ಹೆಚ್ಚು ಜಾತಿ ವ್ಯವಸ್ಥೆ ಕರ್ನಾಟಕದಲ್ಲಿ ಕಾಣಬಹುದಾಗಿದೆ. ಅಲ್ಲಿಂದ ಬಿ ವರ್ಣ ಪದ್ಧತಿ ಆರಂಭವಾಯಿತು.

ಹತ್ತನೇ ಶತಮಾನದಲ್ಲಿ ಆಳುವ ವರ್ಗಕ್ಕೆ ದುಡಿಯುವ ವರ್ಗ ಬೇಕಾಗಿರುವುದರಿಂದ ಜಾತಿ ಪದ್ಧತಿಯನ್ನು ವ್ಯಾಪಕವಾಗಿ ಪ್ರಚಾರಕ್ಕೆ ತರಲಾಯಿತು.

ನಂತರ ೧೨ನೇ ಶತಮಾನದಲ್ಲಿ ಮೊಟ್ಟ ಮೊದಲಿಗೆ ಜಾತಿ ವಿರುದ್ಧ ಚಳುವಳಿ ನಡೆಸಿದ್ದು ಶರಣರು ಎಂದು ಹೇಳಿದರು. 

ಜಾತಿ ಪದ್ಧತಿಯನ್ನು ಪೋಷಿಸುವ ಬಲಾಢ್ಯರು ಸಾರ್ವಜನಿಕ ಸಂಪತ್ತನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಅಧಿಕಾರ ಹೊಂದಲು ಹವಣ ಸುತ್ತಾರೆ. ಜಮೀನ್ದಾರಿ ಮತ್ತು ಪಾಳೆಗಾರರು ಮತ್ತು ಬಂಡವಳಿಗರು ಸಮಾಜದಲ್ಲಿ ಜಾತಿಯ ತಾರತಮ್ಯ, ಲಿಂಗಭೇದ, ವರ್ಣ ಭೇದವನ್ನು ಇನ್ನಷ್ಟು ಗಟ್ಟಿಗೊಳಿಸಲು ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಈ ಅರಿವು ಬಾರದಂತೆ ಜಾತಿ-ಜಾತಿಗಳ ವಿರುದ್ಧ ಹಗೆತನ ಹುಟ್ಟಿಸುತ್ತಿದ್ದಾರೆ. ಈ ಷಡ್ಯತ್ರವನ್ನು ಜನತೆಯು ಅರಿತುಕೊಳ್ಳಬೇಕಿದೆ. ಜಾತಿ ದೌರ್ಜನ್ಯಕ್ಕೂ ಭೂಸಂಬAಧಕ್ಕೂ ನೇರ ಸಂಬAಧವಿದೆ. ಆದ್ದರಿಂದ ಎಲ್ಲ ಜಾತಿಯೊಳಗಿನ ಶ್ರಮಜೀವಿಗಳು ಒಂದಾಗಿ ಹೋರಾಡಬೇಕಿದೆ ಎಂದು ಕಾ.ಜಿ.ಎನ್.ನಾಗರಾಜ ಹೇಳಿದರು. 

ಕಾ.ಕೆ ನೀಲಾ, ಜಿಲ್ಲಾ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ವರ್ಣ ವ್ಯವಸ್ಥೆಯ ಒಡಲಿಂದ ಜುಟ್ಟಿದ ಜಾತಿ ದೌರ್ಜನ್ಯವನ್ನು ತೊಡೆದು ಹಾಕಲು ಚರಿತ್ರೆ ಅರಿವ ಅಗತ್ಯವಿದೆ. ಶ್ರಮಿಕರೆಲ್ಲ ಒಂದಾಗುವ ಅಗತ್ಯವಿದೆ. ಸೈದ್ಧಾಂತಿಕ ಬದ್ಧತೆಯ ಸುಸಜ್ಜಿತ ಸಂಘಟನಾ ವ್ಯವಸ್ಥೆಯು ಬಲಿಷ್ಠವಾದ ಅಸ್ತ್ರವಾಗಿದೆ. ಆದ್ದರಿಂದಲೇ ಬಹುತ್ವ ಭಾರತ, ಬೆವರ ಲೋಕದ ಭಾರತಕ್ಕಾಗಿ ಚಿಂತನೆ- ಚಳುವಳಿ ಜೊತೆ ಸಾಗಬೇಕಿದೆ ಎಂದು ಹೇಳಿದರು. 

 ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಪ್ರಭು ಖಾನಾಪುರೆ, ಡಾಕ್ಟರ್ ಮೀನಾಕ್ಷಿ ಬಾಳಿ,ಪ್ರಿಯಾಂಕಾ ಮಾವಿನ್ಕರ್, ಸುಧಾಮ ಧನ್ನಿ, ಡಾಕ್ಟರ್ ಶಾಂತ ಶ್ರೀಮಂತ ಬಿರಾದರ್ ನಾಗರಾಜ, ಪ್ರಮೋದ್ ಪಾಂಚಾಳ್, ಸಲ್ಮಾನ್ ಖಾನ್ ನಗರ್, ಮೇಘ ಚಿಚಕೋಟಿ, ಸರ್ವೇಶ್ ಮಾವಿನ್ ಮುಂತಾದವರು ಭಾಗವಹಿಸಿದರು.