ಮಲ್ಲಿನಾಥ ಹಿರೇಮಠರಿಗೆ ಆಧ್ಯಾತ್ಮರತ್ನ ಪ್ರಶಸ್ತಿ ಗರಿ
ಮಲ್ಲಿನಾಥ ಹಿರೇಮಠರಿಗೆ ಆಧ್ಯಾತ್ಮರತ್ನ ಪ್ರಶಸ್ತಿ ಗರಿ
ಅರ್ಹರಿಗೆ ಪ್ರಶಸ್ತಿ ಸಿಗಲಿ- ಹಾರಕೂಡ ಶ್ರೀ
ಬಸವಕಲ್ಯಾಣ: ಪ್ರಶಸ್ತಿ ಗೌರವಗಳು ಅರ್ಹರಿಗೆ ಸಿಕ್ಕಾಗ ಅದಕ್ಕೊಂದು ಬೆಲೆ ಬರುತ್ತದೆ.ನಿಸ್ವಾರ್ಥ ಆಧ್ಯಾತ್ಮ ಸೇವೆ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಸಿರಿಗನ್ನಡ ವೇದಿಕೆ ಕಾರ್ಯ ಸ್ತುತ್ಯಾರ್ಹವೆಂದು ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ.ಚೆನ್ನವೀರ ಶಿವಾಚಾರ್ಯರು ಆಶೀರ್ವದಿಸಿದರು.
ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಕಲಬುರಗಿ ಕೊಡಮಾಡುವ ಲಿಂ. ಶ್ರೀ ಸಿದ್ಧೇಶ್ವರ ಆಧ್ಯಾತ್ಮ ರತ್ನ ಪ್ರಶಸ್ತಿ ಹಾರಕೂಡದ ಹಿರೇಮಠದಲ್ಲಿ ಶ್ರೀ ಮಲ್ಲಿನಾಥ ಹಿರೇಮಠ ಮತ್ತು ಶ್ರೀಮತಿ ಹೇಮಲತಾ ಹಿರೇಮಠ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಅವರು ತಮ್ಮ ಮಠದ ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಕಾರ್ಯ ಸೇವೆ ಅಮೋಘವಾಗಿದೆ ಎಂದರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಮಲ್ಲಿನಾಥ ಹಿರೇಮಠ ಅವರು ಶಿಕ್ಷಕರಾಗಿ ವಿದ್ಯಾರ್ಥಿ ಮನ ತೀಡಿದವರು,ಕೋಹಿನೂರು,ಮುಡಬಿ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜೊತೆಗೆ ಹಾರಕೂಡ ಮಠದ ಸೇವೆಗೆ ತೊಡಗಿಕೊಂಡವರು ಅನೇಕ ಕೃತಿ ಸಂಪಾದಿಸಿದ್ದಾರೆ.ಅವರ ಕನ್ನಡ ಭಾಷೆ, ಸಾಹಿತ್ಯ,ಸಾಂಸ್ಕೃತಿಕ ಕೊಡುಗೆ ಗುರುತಿಸಿ ಆಧ್ಯಾತ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಕಾಡಾದ ಅಧ್ಯಕ್ಷರಾದ ಬಾಬು ಹೊನ್ನಾನಾಯಕರು ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿ- ಪ್ರಾಸ್ತಾವಿಕ ನುಡಿ ಆಡಿದರು.ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದರು ಪ್ರೊ.ಭದ್ರೇಶ ವಂದಿಸಿದರು.ಶಿವಕುಮಾರ ಡೋಲೆ,ಇತರಿದ್ದರು.
