ಡಾ. ವಿದ್ಯಾಸಾಗರ ದಣ್ಣೂರ ಅವರಿಗೆ ‘ಕಲಿಕಾ ಸ್ನೇಹಿ’ ಪ್ರಶಸ್ತಿ
ಡಾ. ವಿದ್ಯಾಸಾಗರ ದಣ್ಣೂರ ಅವರಿಗೆ ‘ಕಲಿಕಾ ಸ್ನೇಹಿ’ ಪ್ರಶಸ್ತಿ
ಕಲಬುರಗಿ : ಸುಜಯ್ ಎಜ್ಯುಕೇಶನ್ ಮತ್ತು ವೆಲ್‌ಫೇರ್ ಸೊಸೈಟಿ ವತಿಯಿಂದ ಸ್ಥಾಪಿತ **‘ಬುದ್ಧ, ಬಸವ, ಅಂಬೇಡ್ಕರ್ ಪ್ರೇರಣಾ ವೇದಿಕೆ – ಮಾನವ ಮೌಲ್ಯಗಳ ಬೆಳಕಿಗೆ ಶಾಶ್ವತ ನಮನ’ ವೇದಿಕೆಯಡಿ, ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ 'ಕಲಿಕಾ ಸ್ನೇಹಿ ಪುರಸ್ಕಾರ ಪ್ರದಾನ ಸಮಾರಂಭ – 2025’ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಉನ್ನತ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಶಿಕ್ಷಕರನ್ನು ಗೌರವಿಸಲಾಯಿತು.
ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ವಿದ್ಯಾಸಾಗರ ದಣ್ಣೂರ ಅವರು ಕಲಿಕೆ ಹಾದಿಯಲ್ಲಿ ನವೀನತೆ, ಶ್ರಮ ಮತ್ತು ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತ ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಬದುಕಿನ ಹಿತಕ್ಕಾಗಿ ನೀಡಿದ ಅಮೂಲ್ಯ ಸೇವೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವರದಿ: ಡಾ. ಅವಿನಾಶ S. D.
