ಜಗತ್ತಿಗೆ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಶಕ್ತಿ ಬಗ್ಗೆ ಅರಿವು ಮೂಡಿಸುತ್ತದೆ : ಚಲನಚಿತ್ರ ನಟ ಹುಲಿ ಕಾರ್ತಿಕ

ಜಗತ್ತಿಗೆ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಶಕ್ತಿ ಬಗ್ಗೆ ಅರಿವು ಮೂಡಿಸುತ್ತದೆ : ಚಲನಚಿತ್ರ ನಟ ಹುಲಿ ಕಾರ್ತಿಕ
ಸಾಂಸ್ಕೃತಿಕ ಉತ್ಸವಗಳು ನಮ್ಮ ಸಮಾಜದಲ್ಲಿ ಹಬ್ಬದ ಸಮಯದಲ್ಲಿ ಪ್ರಭಾವಿತವಾಗಿರುತ್ತದೆ. ಇವು ಜಗತ್ತಿಗೆ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಶಕ್ತಿ ಬಗ್ಗೆ ಅರಿವು ನೀಡಲು ಸಹಾಯಮಾಡುತ್ತವೆ. ಎಂದು ಚಲನಚಿತ್ರ ನಟ ಹುಲಿ ಕಾರ್ತಿಕ ಹೇಳಿದರು.
ಕಲಬುರಗಿ; ನಗರದ ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ನೂತನ ವಿದ್ಯಾಲಯ ಸಂಸ್ಥೆ ವತಿಯಿಂದ ಸಾಂಸ್ಕೃತಿಕ ಉತ್ಸವ ೨೦೨೪-೨೫ ಕಾರ್ಯಕ್ರಮವನ್ನು ಚಲನಚಿತ್ರ ನಟ ಹುಲಿ ಕಾರ್ತಿಕ ಉದ್ಘಾಟಿಸಿ ಮಾತನಾಡಿದ ಅವರು
ಸಾಂಸ್ಕೃತಿಕ ಪರಂಪರೆ, ಕಲೆ, ಸಂಸ್ಕೃತಿ, ನೃತ್ಯ, ಸಂಗೀತ, ನಾಟಕ ಮತ್ತು ಇತರ ಕಲಾಮಹೋತ್ಸವಗಳನ್ನು ಪರಿಚಯಿಸಲು ಒಂದು ವೇದಿಕೆ ಒದಗಿಸುತ್ತವೆ. ಇವುಗಳು ಸಮುದಾಯವನ್ನು ಸಮೃದ್ಧ ಮಾಡುವ ಮೂಲಕ, ದೈಹಿಕ ಮತ್ತು ಮಾನಸಿಕವಾಗಿ ವ್ಯಕ್ತಿಯ ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಎಂದರು.
ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಾ. ಗೌತಮ ಆರ್. ಜಹಾಗೀರದಾರ, ನಟರಾದ ತರುಣ ಶರ್ಮಾ, ಆರವ ಸೂರ್ಯ, ಶ್ರೀಕಾಂತ ಕುಲಕರ್ಣಿ, ಸುಧಾ ಕುಲಕರ್ಣಿ ಕರಲಗೀಕರ, ಎಂ.ಹೆಚ್.ಚಾರಿ, ಡಾ.ರಮೇಶ ಯಳಸಂಗಿಕರ್, ಆನಂದ ಪಪ್ಪು, ಅಭಿಜಿತ ದೇಶಮುಖ, ಡಾ.ಗೋತಗಿಕರ ವಿಜಯಕುಮಾರ, ಜಿ.ಎಂ. ಪೂಜಾರ ಸೇರಿದಂತೆ ಮುಖ್ಯ ಗುರುಗಳು, ನೂ.ವಿ.ವಿದ್ಯಾನಿಕೇತನ ಪ್ರೌಢಶಾಲೆ ಸಹ ಸಂಚಾಲಕರು, ವಿದ್ಯಾನಿಕೇತನ ಪ್ರೌಢಶಾಲೆಯ ಸಕಲ ಸಿಬ್ಬಂದಿ ವರ್ಗದವರು ಇದ್ದರು.