೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಆಯ್ಕೆ

೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ  ಸಾಹಿತಿ ಗೊ ರು ಚನ್ನಬಸಪ್ಪ ಆಯ್ಕೆ

೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಆಯ್ಕೆ

 ಮಂಡ್ಯ : ನಗರದಲ್ಲಿ ಇಂದು ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಹಿರಿಯ ಜನಪದ ತಜ್ಞ, ವಿದ್ವಾಂಸ ಮತ್ತು ಸಾಹಿತಿಗಳಾದ ಗೊ.ರು. ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಪ್ರಕಟಿಸಿದ್ದಾರೆ.

ಕನ್ನಡ ಸರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಗೊ ರು ಚ ಎಂದೆ ಪ್ರಸಿದ್ಧರಾಗಿರುವ ಗೊ ರು ಚನ್ನಬಸಪ್ಪ ರವರು ಚಿಕ್ಕಮಗಳೂರು ಜಿಲ್ಲೆ 1930 ರ ಮೇ 18 ರಂದು ಗಿರಿಗೌಡ ಹಾಗೂ ಅಕ್ಕಮ್ಮ ದಂಪತಿಗಳ ಉದರದಲ್ಲಿ ಜನಿಸಿದರು.

1948ರಲ್ಲಿ ಶಾಲಾ ಶಿಕ್ಷಕರಾಗಿ ಪ್ರತಿ ಜೀವನವನ್ನು ಆರಂಭಿಸಿದರು. ಗಾಂಧಿ ಗ್ರಾಮದಲ್ಲಿ ಸಮಾಜ ಶಿಕ್ಷಣ ತರಬೇತಿಯನ್ನು ಪಡೆದು, ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ಸೇವೆ ಸಲ್ಲಿಸಿದರು. ಅಲ್ಲವೇ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

1992ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ನಂತರ ಪ್ರತಿ ತಾಲೂಕಿಗೆ ಒಬ್ಬ ಅಧ್ಯಕ್ಷರಂತೆ ನೇಮಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದರು. ಕರ್ನಾಟಕಕ್ಕೆ ಹೊಂದಿಕೊಂಡಿರುವಂತಹ ಆಂಧ್ರಪ್ರದೇಶ ಮಹಾರಾಷ್ಟ್ರ ತಮಿಳುನಾಡುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಿದರು. ಆ ಮೂಲಕ ಗಡಿನಾಡು ಕನ್ನಡಿಗರಿಗೆ ಭಾಷೆಯ ಬಗ್ಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದಾರೆ.

ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಇವರ ಇವರ ಪಾತ್ರ ಬಹುಮುಖ್ಯವಾದದ್ದು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಶರಣರ ಚಿಂತನೆಗಳನ್ನು ಮತ್ತು ವಿಚಾರಧಾರೆಗಳನ್ನು ಜನಮನಕ್ಕೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.

 ಮೈದುನ ರಾಮಣ್ಣ, ಗ್ರಾಮ ಗೀತೆಗಳು, ಬಾಗೂರು ನಾಗಮ್ಮ ಇತರೆ ಹಾಡುಗಳು, ಮಹಾದೇವಿ, ಸದಾಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಗೆ, ಸಾಕ್ಷಿ ಕಲ್ಲು, ವಿಭೂತಿ, ಕುನಾಲ, ಬೆಳ್ಳಕ್ಕಿ ಹಿಂಡು ಬೆದರ್ಯಾವು ಸೇರಿದಂತೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

೧೯೯೨ ರಿಂದ ೧೯೯೫ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ (೧೯೯೩), ಮಂಡ್ಯ (೧೯೯೪, ಮತ್ತು ಮುಧೋಳದಲ್ಲಿ (೧೯೯೫) ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಗೆ ಭಾಜನರಾಗಿದ್ದರು.

ಈ ಹಿಂದೆ ಅವರೇ ಅಧ್ಯಕ್ಷರಾಗಿ ೧೯೯೪ ರಲ್ಲಿ ಮಂಡ್ಯದಲ್ಲಿ ಯಶಸ್ವಿಯಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. 

ಇದೀಗ ಅವರೇ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ ಎನ್ನಿಸಿದೆ.

ನಾಡಿನ ಹಿರಿಯ ಜನಪದ ವಿದ್ವಾಂಸ ಗೋ ರು ಚನ್ನಬಸಪ್ಪ ಅವರು ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ ಶರಣಬಸವಪ್ಪ ಅಪ್ಪಜಿ, ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ (ಅವ್ವಾಜಿ) ಅವರು, ಭಾಲ್ಕಿ ಹಿರೇಮಠದ ಪೂಜ್ಯರಾದ ನಾಡೋಜ ಡಾ ಬಸವಲಿಂಗ ಪಟ್ಟದೇವರು, ಹಾರಕೂಡ ಹಿರಿಯ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ, ಪೂಜ್ಯ ಜಗದ್ಗುರು ಡಾಕ್ಟರ್ ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ಸಾರಂಗ ಮಠ ಶ್ರೀಶೈಲಂ, ಶ್ರೀನಿವಾಸ ಸರಡಗಿಯ ಪೂಜ್ಯ ಡಾ, ರೇವಣಸಿದ್ಧ ಶಿವಾಚಾರ್ಯರು, ಡಾ.ವಿಲಾಸವತಿ ಖುಬಾ, ಡಾ. ಜಯಶ್ರೀ ದಂಡೆ,

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ದಯಾನಂದ ಅಗಸರ್, ಹಿರಿಯ ಸಾಹಿತಿಗಳಾದ ಡಾ ಸ್ವಾಮಿ ರಾವ್ ಕುಲಕರ್ಣಿ, ಅಪ್ಪಾರಾವ್ ಅಕ್ಕೋಣಿ, ಎ ಕೆ ರಾಮೇಶ್ವರ್, ಡಾ.ಮಲ್ಲಿಕಾರ್ಜುನ್ ವಡ್ಡನಕೇರಿ , ಶರಣಗೌಡ ಪಾಟೀಲ್ ಪಾಳಾ, ಪ್ರೊ ಯಶವಂತರಾಯ ಅಷ್ಠಗಿ, ಸುರೇಶ್ ಬಡಿಗೇರ,ಡಾ ವೀರಶೆಟ್ಟಿ ಗಾರಂಪಳ್ಳಿ, ಡಾ ಆನಂದ ಸಿದ್ದಾಮಣಿ, ಬಿ ಎಚ್ ನಿರಗುಡಿ,ಡಾ ಶ್ರೀಶೈಲ ಬಿರಾದಾರ, ಮಹಿಪಾಲ್ ರೆಡ್ಡಿ ಮುನ್ನೂರು, ಪ್ರಭಾಕರ್ ಜೋಶಿ, ಪ್ರೊ ಎಚ್ ಟಿ ಪೋತೆ, ಡಾ ಕೆ ಗಿರಿಮಲ್ಲ , ಡಾ.ಸದಾನಂದ ಪೆಲ೯.ಸಿ.ಎಸ್.ಮಾಲಿ ಪಾಟೀಲ ,ಡಾ.ಶರಣಬಸಪ್ಪ.ವಡ್ಡನಕೇರಿ, ಸುಲಕ್ಷಣಾ ಶಿವಪೂರ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.