ಬನ್ನಪ್ಪ ಬಿ.ಕೆ ಸೇರಿ 16 ಕನ್ನಡ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ
ಬನ್ನಪ್ಪ ಬಿ.ಕೆ ಸೇರಿ 16 ಕನ್ನಡ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ
ಕಲಬುರಗಿ : ಸಾಹಿತ್ಯ ಎಂಬುದು ಮಾನವೀಯ ಮೌಲ್ಯ ಮತ್ತು ಸಂಬಂಧಗಳ ಬೆಸುಗೆಯಾಗಿ ನಿಲ್ಲುತ್ತದೆ ಎಂದು ಮಾಹಿತಿ ಆಯೋಗದ ರಾಜ್ಯ ಆಯುಕ್ತರು ರವೀಂದ್ರ ಡಾಖಪ್ಪ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಅಲ್ಲಮ ಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ ಅವರು ಕನ್ನಡಿಗರು ಸ್ವಾಭಿಮಾನಿಗಳಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು,ಪಿಡಿಎ ಪ್ರಾಧ್ಯಾಪಕ ಬಾಬುರಾವ ಶೇರಿಕಾರ, ಲೇಖಕಿ ಇಂದುಮತಿ ಪಾಟೀಲ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್,ಧನ್ನಿ, ಕೋಶಾಧ್ಯಕ್ಷ ಛಪ್ಪರಬಂದಿ, ಶರಣರಾಜ ಪ್ರಮುಖರಾದ ಸಿದ್ದಲಿಂಗ ಬಾಳಿ, ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ರೆಹಮಾನ್ ಪಟೇಲ್,ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಶಕುಂತಲಾ ಪಾಟೀಲ, ರಮೇಶ ಡಿ.ಬಡಿಗೇರ, ಕಲ್ಯಾಣಕುಮಾರ ಶೀಲವಂತ, ಜಗದೀಶ ಮರಪಳ್ಳಿ ಡಾ. ಕಲ್ಯಾಣರಾವ ಶೀಲವಂತ,ಡಾ.ಆನಂದ ಸಿದ್ದಾಮಣಿ ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು
ಸಾಧಕರಿಗೆ ರಾಜ್ಯೋತ್ಸವ ಗೌರವ ಪುರಸ್ಕಾರ
ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಬನ್ನಪ್ಪ ಬಿ.ಕೆ.ಸೆಡಂ,ಗುರಣ್ಣ ಪಡಶೆಟ್ಟಿ ಉಡಚಣ, ಪ್ರಹ್ಲಾದ ಬುರ್ಲಿ, ಮಹ್ಮದ್ ಇಬ್ರಾಹಿಂ, ಅಮೃತಪ್ಪ ಅಣೂರ, ಮಂಜುಳಾ ಬಿ.ಜಾನೆ, ಶಾರದಾಮಣಿ ಪಾಟೀಲ, ಅಮೃತ ಪೂಜಾರಿ, ಸೋಮಶೇಖರ ರೂಳಿ, ಅಶೋಕ ತೊಟ್ನಳ್ಳಿ, ಹಣಮಂತರಾಯ ಕಣ್ಣಿ, ಜಟಿಂಗರಾಯ ಶಾಖಾಪುರೆ, ಖಾಜಾ ಫರಿದೋದ್ದಿನ್, ಮಹೇಶ ಚಿಂಚೋಳಿ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.