ಸ್ನೇಹಿತರು ಕೈಬಿಟ್ಟರು ಪುಸ್ತಕ ಕೈ ಬಿಡುವುದಿಲ್ಲ. ಪುಸ್ತಕ ಜೀವನದ ದಾರಿ ದೀಪವಾಗಿದೆ : ಡಾ. ಅಪ್ಪಾರಾವ ಅಕ್ಕೋಣಿ

ಸ್ನೇಹಿತರು ಕೈಬಿಟ್ಟರು ಪುಸ್ತಕ ಕೈ ಬಿಡುವುದಿಲ್ಲ. ಪುಸ್ತಕ ಜೀವನದ ದಾರಿ ದೀಪವಾಗಿದೆ : ಡಾ. ಅಪ್ಪಾರಾವ ಅಕ್ಕೋಣಿ

ಸ್ನೇಹಿತರು ಕೈಬಿಟ್ಟರು ಪುಸ್ತಕ ಕೈ ಬಿಡುವುದಿಲ್ಲ. ಪುಸ್ತಕ ಜೀವನದ ದಾರಿ ದೀಪವಾಗಿದೆ : ಡಾ. ಅಪ್ಪಾರಾವ ಅಕ್ಕೋಣಿ

ಗ್ರಾಮೀಣ ಜನರ ಮುಗ್ದತೆಯನ್ನು ಸಮಾಜದ ಇಂದಿನ ರಿಯಾಲಿಟಿ ಶೋಗಳು ಕೊಲ್ಲುತ್ತಿವೆ : ಡಾ. ಮಲ್ಲಿನಾತ ತಳವಾರ

ಚಿಂಚೋಳಿ :ಜೊತೆಗೂಡಿರುವ ಸ್ನೇಹಿತರು ಒಂದು ಹಂತಕ್ಕೆ ಕೈ ಕೊಡಬಹುದು. ಆದರೆ ಪುಸ್ತಕ ಎಂದಿಗೂ ಕೈ ಬಿಡುವುದಿಲ್ಲ. ಪುಸ್ತಕ ಜೀವನದ ದಾರಿ ತೊರಿಸುವ ದೀಪವಾಗಿದೆ ಎಂದು ಬೆಂಗಳೂರು ಅ.ಭಾ.ಶ.ಸಾ.ಪರಿಷತ್ತಿನ ಉಪಾಧ್ಯಕ್ಷ ಡಾ. ಅಪ್ಪಾರಾವ ಅಕ್ಕೋಣಿ ಅವರು ಹೇಳಿದರು.

ಅವರು ಇಲ್ಲಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚಿಂಚೋಳಿ ಸಿ.ಬಿ.ಪಾಟೀಲ ಕಾಲೇಜಿನಲ್ಲಿ ಚಿಂಚೋಳಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸಾಹಿತಿ ಡಾ. ವಿಜಯಕುಮಾರ ಪರುತೆ ರಚಿತ “ಒಲವನರಿಸಿ” ಗಜಲ್ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಪುಸ್ತಕ ಓದುವಿನಲ್ಲಿ ಸಿಗುವ ತೃಪ್ತಿ ವಾಟ್ಸಪ್, ಫೇಸಬುಕ್ ನಲ್ಲಿ ಸಿಗುವುದಿಲ್ಲ. ಹಾಗಂತ್ತ ವಾಟ್ಸಪ್ ಕೆಟ್ಟದ್ದು ಎಂದು ಹೇಳುವುದಕ್ಕೂ ಆಗೋದಿಲ್ಲ. ಆದರೆ ಅದರ ಉಪಯೋಗದ ಮೇಲೆ ಅವಲಂಬಿಸಿದೆ ಎಂದರು. ಇಂದಿನ ಕಾಲದ ಯುವಕರು ಗೂಗಲ್, ವಾಟ್ಸಪ್ ಗಳಲ್ಲಿ ಜ್ಞಾನ ಸಂಪಾದಿಸದೇ, ಗೇಮ್ಸ್ ಮತ್ತು ಬೇರೆ ಬೇರೆ ಅರ್ಥದ ಅಸ್ಲಿಲ ಪದಗಳು ಉಪಯೋಗ ಮಾಡುವುದರಲಿ ತಲೀನರಾಗಿದ್ದಾರೆ. ಆದರೆ ಪುಸ್ತಕ ಇಂದಿಗೂ ಪ್ರಸ್ತುವಾಗಿದೆ. ಪುಸ್ತಕ ಪ್ರೀಯರಾಗಲು ಬಹಳ ಅವಶ್ಯಕವಾಗಿದೆ ಎಂದರು.  

ಕಲಬುರಗಿಯ ನೂತನ ಮಹಾವಿದ್ಯಾಲಯದ ಪ್ರಾಧ್ಯಪಕ ಡಾ. ಮಲ್ಲಿನಾಥ ತಳವಾರ ಮಾತನಾಡಿ,

ಗಜಲ್ ಮೂಲತಃ ಅರೆಬೀಕ್ ಶಬ್ದವಾಗಿದೆ. ಪರ್ಶನ ಭಾಷೆ ಸಾಹಿತ್ಯದ ರೂಪ ಕೊಟ್ಟರೇ, ಜಾಗತಿಕ ಮಟ್ಟದಲ್ಲಿ ನೆಲೆಯುರುವಂತೆ ಮಾಡಿದ್ದು, ಉರ್ದು ಭಾಷೆ. ಪ್ರೀತಿ, ಪ್ರೇಮ,ಪ್ರಣೆಯ, ವಿರಾಹ, ನೋವು ಗಜಲ್ ಅಡಗಿ ಕೊಂಡಿವೆ. ಮಸ್ಲಾ, ಮಕ್ಕ, ಅರೆಬೀಕ್ ಮತ್ತು ಕಾವ್ಯ ಗಜಲನ ನಾಲ್ಕು ಸ್ತಂಬಗಳಾಗಿದ್ದು, ಗಜಲ್ ಕಾವ್ಯದ ರಾಣಿ ಎಂದು ಕರೆಯಲಾಗುತ್ತದೆ. ಗಜಲ್ ನಲ್ಲಿಮೌಲ್ಯಗಳು ಹುಡುಕುವಂತಹ ಸಾತ್ವಿಕತೆ. ಸಂಬಂಧಗಳನ್ನು ಬೆಸೆಯುವಂತಹ ಚೈತನ್ಯದ ಮೌಲ್ಯಗಳು ಕಾಣಲಾಗುತ್ತದೆ ಮತ್ತು ರಿಯಾಲಿಟಿ ಶೋ ಗಳ ಅಬ್ಬರ,ಪ್ರೀತಿಯ ಚಿತ್ತಾರ, ವರಹದ ಕಣವರಿಕೆ, ಮೊಸದ ಆವರಿಕೆ, ಗಾಂಧಿಜಿಯ ಚಿತ್ರಣ, ರಾಜಕೀಯ ಸ್ಥಿತಿಗತಿ, ಯುವಜನತೆಯ ಕಳವಳ, ಬಾಲ್ಯದ ಮೋಹಕತೆ, ಸಮಾಜದ ದರ್ಶನವನ್ನು ಗಜಲ್ ಹಿಡಿದಿಟ್ಟಿದೆ. ಆದರೆ ಇಂದಿನ ಪ್ರಸ್ತುತ ರಿಯಾಲಿಟಿ ಶೋಗಳು ಗ್ರಾಮೀಣ ಭಾಗದ ಜನರ ಮುಗ್ದತೆಯನ್ನ ಸಾಮಜ ಕೊಲ್ಲುತ್ತಿದೆ. ಅವರ ಮೌಲ್ಯಗಳನ್ನ ಹರಾಜು ಹಾಕುತ್ತಿವೆ. ಬಾಲ್ಯವನ್ನು ಕಿತ್ತು ತಿನ್ನುತ್ತಿವೆ. ಮಾದರಿಯ ಮೌಲ್ಯಗಳನ್ನು ಸಾಯಿಸುತ್ತಿವೆ ಎಂದು ಕಳವಳ ವ್ಯಕ್ತಿಪಡಿಸಿದರು.  

ಒಲವನರಿಸಿ ಗಜಲ್ ಸಂಕಲನ ಪುಸ್ತಕ ರಚನೆಕಾರರು ಡಾ. ವಿಜಯಕುಮಾರ ಪರುತೆ, ಕಾಲೇಜಿನ ಪಾಂಶುಪಾಲೆ ಡಾ.ಮಾಣಿಕಮ್ಮ ಸುಲ್ತಾನಪೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರುರಾಜ ಜೋಷಿ ಹಾಗೂ ಶರಣಯ್ಯ ಸ್ವಾಮಿ ಅಲ್ಲಾಪೂರ್ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಗೌತಮ ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ. ಮಲ್ಲಿಕಾರ್ಜುನ ಪಾಲಾಮೂರ, ಅಶೋಕ ಪಾಟೀಲ, ಬಸವರಾಜ ಐನೋಳಿ, ಮೀರಾಜ ಪಾಷಾ, ಜ್ಯೋತಿ ಬೊಮ್ಮ, ಮಾರುತಿ ಪತ್ತಂಗೆ, ಸುರೇಶ ದೇಶಪಾಂಡೆ ಅವರು ಉಪಸ್ಥಿತರಿದರು.