ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಜೆಸ್ಕಾಂನಲ್ಲಿ ವಿಜೃಂಭಣೆಯಿಂದ
ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಜೆಸ್ಕಾಂನಲ್ಲಿ ವಿಜೃಂಭಣೆಯಿಂದ
ಕಲಬುರ್ಗಿ : ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಘಟಕ–15, ನಗರ ವಿಭಾಗದಲ್ಲಿ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ಭಕ್ತಿಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ವಿಶ್ವನಾಥ್ ರೆಡ್ಡಿ ಪೂಜೆ ಸಲ್ಲಿಸಿ ಮಾತನಾಡಿದರು. “ನಮ್ಮ ನಿತ್ಯ ಜೀವನದಲ್ಲಿ ಕನಕದಾಸರ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಇಂತಹ ಜಯಂತಿ ಆಚರಣೆಗಳು ಸಾರ್ಥಕವಾಗುತ್ತವೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರರಾದ ವಶೀಮ, ಭಾಗಣ್ಣ, ದತ್ತು ದೊಡ್ಡಮನಿ, ಭೂಷಣ್ ಕುಮಾರ, ಮಲ್ಲಿಕಾರ್ಜುನ ಹಾಗೂ 659 ನೌಕರ ಸಂಘದ ಮುಖಂಡರಾದ ಸಾಯಬಣ್ಣಾ ಹೂಗಾರ, ಸಯ್ಯದ್ ಪಟೇಲ್, ಅನಿಲ್ ಮೈದರ್ಗಿ, ಸಿದ್ದರಾಮ್ ಪೂಜಾರಿ, ನಾಗರಾಜ, ಶಾಂತು, ಭೋಗಪ್ಪ, ವೀರೇಶ ಅಕ್ಕಿ, ವಿಶ್ವನಾಥ್ ವಿಶ್ವಕರ್ಮ ಸೇರಿದಂತೆ ಘಟಕ–15ರ ನೌಕರರು ಉಪಸ್ಥಿತರಿದ್ದರು.
