ರಾಜ್ಯಕ್ಕೆ ಕೀರ್ತಿ ತಂದ ಹೆವೇನ್ ಫೈಟರ್ಸ್‌ ತಂಡ

ರಾಜ್ಯಕ್ಕೆ ಕೀರ್ತಿ ತಂದ ಹೆವೇನ್ ಫೈಟರ್ಸ್‌ ತಂಡ

ರಾಜ್ಯಕ್ಕೆ ಕೀರ್ತಿ ತಂದ ಹೆವೇನ್ ಫೈಟರ್ಸ್‌ ತಂಡ

ಮೈಸೂರು: ನವೆಂಬರ್‌ 1 ಮತ್ತು 2 ರಂದು ಮೈಸೂರಿನ ಚಾಮುಂಡಿ ವಿಹಾರ ಇಂಡೋರ್‌ ಕ್ರೀಡಾಂಗಣದಲ್ಲಿ ನಡೆದ 28ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹೆವೇನ್ ಫೈಟರ್ಸ್ ಸಂಸ್ಥೆಯ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್‌ ಕುಮಾರ್‌ ಬೀರನೂರ ಅವರ ನೇತೃತ್ವದ ತಂಡವು ಅದ್ಭುತ ಸಾಧನೆ ಮಾಡಿದೆ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ AISKU ಮತ್ತು AKSKA ಸಂಸ್ಥೆಗಳ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್‌ ಮಾಚಯ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಹೆವೇನ್ ಫೈಟರ್ಸ್ ತಂಡವು ಒಟ್ಟು 48 ಪದಕಗಳು — 8 ಬಂಗಾರ, 17 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿಯನ್ನು ತಂದಿದೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಕ್ರೀಡಾ ಅಭಿಮಾನಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಹಾಗೂ ಸಂಸ್ಥೆಯ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.

ಪದಕ ವಿಜೇತರು:

* ದರ್ಶನ್ ಎಂ. ಬಳಿಚಕ್ರ – 2 ಬಂಗಾರ

* ಹರ್ಷಿತ್ ಚೌಹಾಣ್ – 2 ಬಂಗಾರ

* ಬಸವರಾಜ್ ನಂದಳ್ಳಿ – 1 ಬಂಗಾರ, 1 ಕಂಚು

* ಶ್ರೀಶೈಲ್ ಹೂಗಾರ್ – 1 ಬಂಗಾರ, 1 ಬೆಳ್ಳಿ

* ಗೌರಿ ಪ್ರವೀಣ ಕಾಂಬ್ಳೆ – 1 ಬಂಗಾರ, 1 ಕಂಚು

* ಶರಣರೆಡ್ಡಿ – 1 ಬೆಳ್ಳಿ

* ಅಭಿಷೇಕ್ ಡಿ. ರಾಥೋಡ್ – 2 ಬೆಳ್ಳಿ

* ರೇವಣಸಿದ್ದಪ್ಪ – 1 ಬೆಳ್ಳಿ

* ಆರಾವ್ ಹೆರೂರು – 1 ಬೆಳ್ಳಿ, 1 ಕಂಚು

* ಅಮರ್ ಎಂ.ಎಸ್. – 1 ಬೆಳ್ಳಿ, 1 ಕಂಚು

* ಜಯಂತ್ ಎಂ. ಬೈರಪ್ಪ – 1 ಬೆಳ್ಳಿ

* ಅಭಿಷೇಕ್ ಎನ್. – 1 ಬೆಳ್ಳಿ

* ಗಗನ್ ಆರ್. ಪತ್ತಾರ್ – 2 ಬೆಳ್ಳಿ

* ಸಾಗರ್ ಹೂಗಾರ್ – 1 ಬೆಳ್ಳಿ, 1 ಕಂಚು

* ಹನುಮಂತ್ ಎಂ. ಬಿರಾದರ್ – 1 ಕಂಚು

* ಸಹನಾ ಕೊಳಕೂರು – 1 ಕಂಚು

* ದಾಮಿನಿ ನಿಂಬಾಳ್ಕರ್ – 1 ಕಂಚು

* ಬಸಮ್ಮ ಅರಸೂರ್ – 2 ಕಂಚು

* ಭಾಗ್ಯವಂತಿ ರಾಮಗೋಲ್ಡ್ – 1 ಕಂಚು

* ರೆಸ್ಟ್ ಎಂ. ಬಿರಾನೂರ್ – 1 ಕಂಚು

* ಸಾತ್ವಿಕ್ ಡಿ – 1 ಕಂಚು

* ಪವನ್ ಜಾದವ್ – 1 ಕಂಚು

* ನಾಗೇಂದ್ರ ಪಾಲಸಿಂಗ್ – 1 ಕಂಚು

* ರೋಹನ್ ಎಸ್.ಜಿ. – 2 ಕಂಚು

* ಮೌನೇಶ್ ಬಡಿಗೇರ್ – 1 ಕಂಚು

* ಸಂಜಯ್ ಕುಮಾರ್ ಒಡೆಯರ್ – 2 ಕಂಚು

* ಅಜಯ್ ಕುಮಾರ್ ಒಡೆಯರ್ – 2 ಕಂಚು

* ಆರಾದನ ಚಿಂಚೋಳಿ – 2 ಕಂಚು

* ಶ್ರಯಾಂಕ್ ವಿ – 1 ಬಂಗಾರ

* ಜೀವನ್ ಶಂಕರ್ – 1 ಬೆಳ್ಳಿ

* ಸಾಯಿ ರಿಥ್ವಿಕ್ ರಾಜಕುಮಾರ್ – 1 ಕಂಚು

ವಿದ್ಯಾರ್ಥಿಗಳ ಈ ಶ್ಲಾಘನೀಯ ಸಾಧನೆ ಕುರಿತು ಸಂಸ್ಥೆಯ ಕರಾಟೆ ಪಟು ಮಂಜುನಾಥ್ ನಾಲ್ವರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಜೇಟ್ಟೆಪ್ಪ ಎಸ್. ಪೂಜಾರಿ