ಕವಿ ಸಂತೋಷ ಕರಹರಿ ಕುರಿತು ಉಪನ್ಯಾಸ-೯ರಂದು
ಕವಿ ಸಂತೋಷ ಕರಹರಿ ಕುರಿತು ಉಪನ್ಯಾಸ-೯ರಂದು
ಕಲಬುರಗಿ: ಕವಿ- ಕಲಾವಿದ-ಪ್ರಕಾಶಕ ಸಂತೋಷಕುಮಾರ ಕರಹರಿ ಅವರ ಬದುಕು- ಬರಹ ಸಾಹಿತ್ಯ ಸಮಾಗಮ ಉಪನ್ಯಾಸ ಮಾಲಿಕೆ-೭ನ್ನು ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನವು ದಿನಾಂಕ: ೦೯-೧೧-೨೦೨೫ ರಂದು ರವಿವಸರ ಬೆಳಗ್ಗೆ: ೧೦-೩೦ ಗಂಟೆಗೆ ರಾಮೇಶ್ವರ ನಗರ ದೂರದರ್ಶನ ಕೇಂದ್ರ ಹಿಂದೆ ಹುಮನಾಬಾದ ರಿ.ಮಗ್ ರಸ್ತೆ ಕಲಬುರಗಿಯಲ್ಲಿ ನಡೆಯಲಿದೆ.ಕಾವ್ಯ ಕುರಿತು ಶಿಕ್ಷಕ- ಲೇಖಕ ಡಾ.ರಾಜಕುಮಾರ ಧುಮ್ಮನಸೂರು ಮತ್ತು ಬುದ್ಧ ಕಾವ್ಯ ಕುರಿತು ಶಿಕ್ಷಕ- ವಿಮರ್ಶಕ ಡಾ.ಚಿದಾನಂದ ಕುಡ್ಡನ್ ಉಪನ್ಯಾಸ ನೀಡುವರು.ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ವಹಿಸುವರು.ಕವಿ ಸಂತೋಷ ಕುಮಾರ ಕರಹರಿ ಉಪಸ್ಥಿತಿ ಇರುವರು.ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿ,ಕವಿ,ಕಲಾವಿದರು ಸಾಹಿತ್ತಾಭಿಮಾನಿ ಗಳು ಭಾಗವಹಿಸಲು ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊನಿ ಮತ್ತು ಡಾ.ಜಯದೇವಿ ಗಾಯಕವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
