ಅ.ವಿ.ಮಹಾ ಸಭಾ. ಚುನಾವಣಾ ಅಭ್ಯರ್ಥಿಗಳಾದ ಸೀರಿ, ಪಾಟೀಲರಿಗೆ ಜಿಲ್ಲಾ ವೀರಶೈವ ಮಹಾಸಭಾ ಬೆಂಬಲ
ಅ.ವಿ.ಮಹಾ ಸಭಾ. ಚುನಾವಣಾ ಅಭ್ಯರ್ಥಿಗಳಾದ ಸೀರಿ, ಪಾಟೀಲರಿಗೆ ಜಿಲ್ಲಾ ವೀರಶೈವ ಮಹಾಸಭಾ ಬೆಂಬಲ
ಕಲಬುರಗಿ 23:ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷರಾದ ಶ್ರೀ ಶಂಕರ ಬಿದರಿಯವರ ಪೆನಲ್ ನಲ್ಲಿ ಕಲಬುರಗಿಯ ಕ್ರಮ ಸಂಖ್ಯೆ 32 ರಾಜಶೇಖರ ಸಿರಿ, ಕ್ರಮ ಸಂಖ್ಯೆ 43 ಶಶಿಕಾಂತ ಪಾಟೀಲ ಹಾಗೂ ಕ್ರಮ ಸಂಖ್ಯೆ 50 ಸಂತೋಶ ಪಾಟೀಲರು ಚುನಾವಣೆಗೆ ಸ್ಪರ್ಧಿಸಿದ್ದು ಇವರಿಗೆ ಕಲಬುರಗಿ, ಜಿಲ್ಲಾ ವೀರಶೈವ ಸಮಾಜದವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ್ ಪಾಟೀಲ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು ಮಹಾಸಭಾದ ರಾಜ್ಯ ಘಟಕದ ಕಾರ್ಯ ನಿರ್ವಾಹಕ ಸಮಿತಿಯಲ್ಲಿ 57 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಒಟ್ಟು 27 ಜನರಿಗೆ ಮಾತ್ರ ಮತಹಾಕಲು ಅವಕಾಶವಿರುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1933 ಜನ ಮತದಾರರಿದ್ದು, ಇದರಲ್ಲಿ ಕಲಬುರಗಿ ನಗರದಲ್ಲಿ 1400 ಜನ ಮತದಾರರಿದ್ದು, ಎಲ್ಲಾ ತಾಲೂಕು ಸೇರಿ 533 ಮತದಾರರು ಇದ್ದಾರೆ. ಎಂದರು
ಜಿಲ್ಲಾ ವೀರಶೈವ ಸಮಾಜದ ಎಲ್ಲಾ ಮತದಾರರು ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಗೆ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಎಲ್ಲಾ ಮತದಾರರಲ್ಲಿ ವಿನಂತಿಸಿ ಕೊಂಡರು.
ಒಟ್ಟು ರಾಜ್ಯ ಘಟಕದಲ್ಲಿ 41 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಅದರಲ್ಲಿ 13 ಜನ ಮಹಿಳೆಯರು ಹಾಗೂ ರಾಜ್ಯ ಆದ್ಯಕ್ಷರಾಗಿ ಶಂಕರ ಬಿದರಿಯವರ ಪೆನಲ್ 27 ಜನ ಅಭ್ಯರ್ಥಿಗಳು ಆಯ್ಕೆ ಮಾಡಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲ್ಯಣಪ್ಪ ಪಾಟೀಲ ಮಳಖೇಡ, ಸಾತಪ್ಪ ಪಟ್ಟಣಕರ್, ಸಂಗಮೇಶ್ ನಾಗನಹಳ್ಳಿ, ಮಂಜು ರೆಡ್ಡಿ, ಶ್ರೀಶೈಲ್ ಗೂಳಿ, ಉಪಸ್ಥಿತರಿದ್ದರು