ಕುಡು ಒಕ್ಕಲಿಗ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸ್ಥಾನ – ಸಮುದಾಯದ ಹರ್ಷ

ಕುಡು ಒಕ್ಕಲಿಗ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸ್ಥಾನ – ಸಮುದಾಯದ ಹರ್ಷ

ಕುಡು ಒಕ್ಕಲಿಗ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸ್ಥಾನ – ಸಮುದಾಯದ ಹರ್ಷ

ಕಲಬುರಗಿ, ಆ.24:ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕುಡು ಒಕ್ಕಲಿಗ (701) ಮತ್ತು ಕುಡು ವಕ್ಕಲಿಗ (703) ಸಮುದಾಯಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಕುಡು ಒಕ್ಕಲಿಗ ಸಮುದಾಯದಲ್ಲಿ ಹರ್ಷದ ಅಲೆ ಹರಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕುಡು ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ (ರಿ.) ಕಲಬುರಗಿ ವತಿಯಿಂದ ಹರ್ಷ ವ್ಯಕ್ತಪಡಿಸಲಾಯಿತು. ಸಂಘದ ಮುಖಂಡರು ಹೇಳುವಂತೆ, ಶತಮಾನಗಳಿಂದಲೂ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿರುವ ಈ ಸಮುದಾಯದ ಇತಿಹಾಸವನ್ನು ವಿವಿಧ ಗಣ್ಯರು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ರಾಜ್ಯದ ಹಲವಾರು ರಾಜಕೀಯ ನಾಯಕರ ಪ್ರಯತ್ನದಿಂದ ಗುರುತಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಸುವರ್ಣ ಕರ್ನಾಟಕ ಪ್ರದೇಶದ ನಾಯಕರು, ಸಂಘಟನೆಯ ಮುಖಂಡರು ಹಾಗೂ ಜನಪ್ರತಿನಿಧಿಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಸಮುದಾಯಕ್ಕೆ ಹಿಂದುಳಿದ ವರ್ಗಗಳಲ್ಲಿ ಸ್ಥಾನ ದೊರೆತಿದೆ. ಸಮಾಜ ಪರವಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ, ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ನಾಯಕರ ಸಹಕಾರ ದೊರೆತಿದೆ ಎಂದು ಸಂಘದ ಮುಖಂಡರು ತಿಳಿಸಿದರು.

ಆ.19ರಂದು ಆಯೋಗದ ಅಧ್ಯಕ್ಷ ಮದುಸುದಾನ ನಾಯಕರವರು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಕುಡು ಒಕ್ಕಲಿಗ ಸಮುದಾಯಕ್ಕೂ ಮಹತ್ವದ ಸ್ಥಾನ ಕಲ್ಪಿಸಿರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಸಂಘವು ಸಂತೋಷ ವ್ಯಕ್ತಪಡಿಸಿದೆ.

ಈ ಪ್ರಯುಕ್ತ ಸಮಾಜದ ಎಲ್ಲ ಸದಸ್ಯರು ಸಮೀಕ್ಷೆಯಲ್ಲಿ “ಧರ್ಮ – ಹಿಂದು, ಜಾತಿ – ಕುಡು ಒಕ್ಕಲಿಗ”ಎಂದು ನಮೂದಿಸಬೇಕೆಂದು ಸಂಘದ ಮುಖಂಡರು ಕರೆ ನೀಡಿದರು.

ಈ ಹರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಶಿವರಾಜ ಪಾಟೀಲ ಕಲಗುರ್ತಿ, ರಾಜ್ಯ ನಿರ್ದೇಶಕ ಮಲ್ಲಣ್ಣಗೌಡ ಬ್ರಿ. ಪಾಟೀಲ, ಗೌರವಾಧ್ಯಕ್ಷ ಬಸವರಾಜ ಬಿ. ಸರಡಗಿ, ಶಿವಯೋಗಪ್ಪ, ಕರಣಪ್ಪ ಮಸರಗೊಂಡ, ಮಲ್ಲಣ್ಣಗೌಡ ಬೋಳವಾಡ, ಚಂದ್ರಕಾಂತ ಎಸ್. ಪಾಟೀಲ, ಭೀಮಕಾ ಜಿರೊಳ ಸೇರಿದಂತೆ ಹಲವಾರು ಸಮಾಜ ಮುಖಂಡರು ಉಪಸ್ಥಿತರಿದ್ದರು.