ಸರ್ಕಾರಿ ನಡತೆ ನಿಯಮ ಉಲ್ಲಂಘಿಸಿದ ನೌಬಾದ ಸಿ ಆರ್ ಪಿ ಶ್ರೀದೇವಿ ಹೂಗಾರ ವಿರುದ್ಧ ಕಲಬುರಗಿ ಆಯುಕ್ತರಿಗೆ ದೂರು.

ಸರ್ಕಾರಿ ನಡತೆ ನಿಯಮ ಉಲ್ಲಂಘಿಸಿದ ನೌಬಾದ  ಸಿ ಆರ್ ಪಿ  ಶ್ರೀದೇವಿ ಹೂಗಾರ ವಿರುದ್ಧ ಕಲಬುರಗಿ ಆಯುಕ್ತರಿಗೆ ದೂರು.

ಸರ್ಕಾರಿ ನಡತೆ ನಿಯಮ ಉಲ್ಲಂಘಿಸಿದ ನೌಬಾದ ಸಿ ಆರ್ ಪಿ ಶ್ರೀದೇವಿ ಹೂಗಾರ ವಿರುದ್ಧ ಕಲಬುರಗಿ ಆಯುಕ್ತರಿಗೆ ದೂರು.

ಕಲಬುರಗಿ ಎ. 5 : ಬೀದರ ಜಿಲ್ಲೆಯ ನೌಬಾದ ಕ್ಲಸ್ಟರ್ ನ ಸಿ.ಆರ್.ಪಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದೇವಿ ಹೂಗಾರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿರುವುದನ್ನು ಗಮನಿಸಿದ ಅಖಲ ಕರ್ನಾಟಕ ದಲಿತ ಸೇನೆಯ ರಾಜ್ಯ ಅಧ್ಯಕ್ಷರಾದ ದತ್ತಾತ್ರೇಯ ಕುಡಕಿ ಹಾಗೂ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಸಂಜೀವ್ ಕುಮಾರ ಕಾಂಬಳೆಯವರು ಇಂದು ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ದೂರು ನೀಡಿ ಸರ್ಕಾರಿ ನಡತೆ ನಿಯಮ ಉಲ್ಲಂಘಿಸುತ್ತಿರುವ ಶ್ರೀ ದೇವಿ ಹೂಗಾರ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕೆಂದು ಮನವಿ ಸಲ್ಲಿಸಿದರು.    

   ಸಿ.ಆರ್.ಪಿ. ಶ್ರೀದೇವಿ ಹೂಗಾರ ರವರು ಶಿಕ್ಷಣ ಇಲಾಖೆಯ ಕರ್ತವ್ಯ ಗಿಂತಲೂ ಹೆಚ್ಚು ಸಮಯ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾಳೆ. ಮತ್ತು ಯೂಟ್ಯೂಬ್ ಚಾನಲ್ ಗಳ ಮೂಲಕ ಮೈಂಡ್ ಮಾಸ್ಟರ್ ಟ್ರೈನಿಂಗ್ ಸೆಂಟರ್ , ಮೈಂಡ್ ಟ್ರೈನರ್ ,ರೇಕಿ ಮಾಸ್ಟರ್ ಅಂತ ಇನ್ನೂ ಎನೇನೋ ಹೇಳಿ ವೇಬ್ ನಾರ್ ಕ್ಲಾಸ್ ಮತ್ತು ಆನ್ ಲೈನ್ ಮೈಂಡ್‌ ಟ್ರೈನಿಂಗ್ ಅಂತೆಲ್ಲ ನಕಲಿ ಕೊರ್ಸು ಮಾಡುತ್ತಿದ್ದಾಳೆ. ಅಷ್ಟೇಯಲ್ಲದೇ ನಿವೇದಿತಾ ಟ್ರಸ್ಟ್ ಎಂಬ ಹೆಸರಿನ ಮೂಲಕ 2019 ರಿಂದ ಕೊರನಾ ಕಾಲದಿಂದ ಇಲ್ಲಿಯವರೆಗೆ ಯೂಟ್ಯೂಬ್ ಚಾನಲ್ ಗಳಲ್ಲಿ ಸಾವಿರಾರು ವಿಡಿಯೋಗಳು ಮಾಡಿ ಬಿಡುತ್ತಿದ್ದಾಳೆ ಮತ್ತು ಸಾರ್ವಜನಿಕರಿಂದ QR code ಮೂಲಕ ಹಣ ಗಳಿಕೆ ಮಾಡುತ್ತಿದ್ದಾಳೆ. ಇದು ಇಲಾಖೆಗೂ ಮತ್ತು ಸಾರ್ವಕರಿಗೂ ಇವರು ಮಾಡುತ್ತಿರುವ ವಂಚನೆಯಾಗಿದೆ. 

1966 ರ ಸರ್ಕಾರಿ ನೌಕರರ ನಡತೆ ನಿಯಮದ ಪ್ರಕಾರ ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ತೊಡಗುವಂತ್ತಿಲ್ಲ ಮತ್ತು ಸರ್ಕಾರದ ವೇತನ ಬಿಟ್ಟು ಬೇರೆ ಕಡೆಯಿಂದ ಮತ್ತೊಂದು ಆದಾಯ ಗಳಿಸುವಂತ್ತಿಲ್ಲ . ಆದರೂ ಇವರು ಸುಮಾರು 5 ವರ್ಷಗಳಿಂದ ಯೂಟ್ಯೂಬ್ ಚಾನಲ್ ಮೂಲಕ ವಿಡಿಯೊ ಮಾಡಿ ಬಿಡುತ್ತಿದ್ದಾಳೆ.ಕ್ವಿವ್ ಆರ್ ಕೊಡ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದಾರೆ. 

ಇವರ ಪತಿ ಬೀದರ ಪೋಲಿಸ್ ಇಲಾಖೆಯಲ್ಲಿ ಇದ್ದರೂ ಕೂಡ ಅವರು ಕಾನೂನು ಅರಿವು ನೀಡದೆ ಪ್ರೋತ್ಸಾಹಿಸುತ್ತಿದ್ದರಿಂದ ಅವರ ಮೇಲೆಯೂ ಕೂಡ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ದಲಿತ ಸೇನೆಯ ಅಧ್ಯಕ್ಷರು ನೀಡಿದ ದೂರಿನಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ತಿಳಿಸಿದ್ದಾರೆ.