ನವರಾತ್ರಿ ಉತ್ಸವ : ಧರ್ಮ ಜಾಗೃತಿಗಾಗಿ ದುರ್ಗಾಮಾತಾ ನಡಿಗೆ
ನವರಾತ್ರಿ ಉತ್ಸವ : ಧರ್ಮ ಜಾಗೃತಿಗಾಗಿ ದುರ್ಗಾಮಾತಾ ನಡಿಗೆ
ಶಹಾಬಾದ: ನವರಾತ್ರಿ ಉತ್ಸವ ಮತ್ತು ಆಯುಧ ಪೂಜೆಯ ನಿಮಿತ್ತವಾಗಿ ವಿಶ್ವ ಹಿಂದೂ ಪರಿಷತ್ತ ಮತ್ತು ಭಜರಂಗ ದಳದ ವತಿಯಿಂದ ಹಿಂದೂ ಧರ್ಮದ ಜಾಗೃತಿಗಾಗಿ ಶರಣಬಸವೇಶ್ವರ ದೇವಾಲಯದಿಂದ ಜಗದಂಭಾ ಗುಡಿ ವರೆಗೆ ದುರ್ಗಾಮಾತಾ ದೌಡ್ ಹಮ್ಮಿಕೊಳ್ಳಲಾಗಿತ್ತು.
ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ದುರ್ಗಾಮಾತಾ ದೌಡ್ ಮೆರವಣಿಗೆ ಅದ್ದೂರಿಯಾಗಿ ಆರಂಭಗೊಂಡಿತು.
ಮಹಿಳಿಯರು ಮತ್ತು ಮಕ್ಕಳು ದುರ್ಗಾಮಾತಾ ಹಾಗೂ ಜೀಜಾ ಮಾತಾ ಸೇರಿದಂತೆ ವಿವಿಧ ಮಹನೀಯರ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕೇಸರಿ ಮುಂಡಾಸು ತೊಟ್ಟು, ಕೇಸರಿ ಹಾಗೂ ಹಳದಿ ಶಾಲು ಸೊಂಟಕ್ಕೆ ಕಟ್ಟಿ ನೂರಾರು ಮಹಿಳೆಯರಿಂದ ಪಾದಯಾತ್ರೆ, ಕೈಯಲ್ಲಿ ಹಿಡಿದ ಕೇಸರಿ ಧ್ವಜಕ್ಕೆ ಭಕ್ತಿ ಪೂರ್ವಕವಾಗಿ ನಮಿಸುವ ಭಕ್ತರು, ಮೆರವಣಿಗೆ ಉದ್ದಕ್ಕೂ ಭಾರತ್ ಮಾತಾ ಕೀ ಜೈ, ಹಿಂದೂ ಧರ್ಮಕ್ಕೆ ಜಯವಾಗಲಿ ಎಂದು ಘೋಷಣೆಗಳು ಕೂಗಿದರು ಕೊನೆಗೆ ಜಗದಂಬಾ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.
ಈ ಸಂಧರ್ಭದಲ್ಲಿ ಜ್ಯೋತಿ ಶರ್ಮಾ, ನೀಲಮ್ಮ ಘಂಟಿ, ಪುಷ್ಪ ಗೌಳಿ, ಸನ್ನಿಧಿ ಕುಲಕರ್ಣಿ, ದೀಪಾ ಮೆಂಗಜಿ, ಪ್ರತಿಭಾ ಪೂಜಾರಿ ಹಾಗೂ ವಿಹಿಂಪ ಅಧ್ಯಕ್ಷ ರಾಮು ಕುಸಾಳೆ ಭಜರಂಗ ದಳದ ಉದಯ ನಂದಗೌಳಿ ಸೇರಿದಂತೆ ಅನೇಕ ಇದ್ದರು.
ಶಹಬಾದ ವರದಿ :- ನಾಗರಾಜ್ ದಂದಾವತಿ