ಎನ್ಸೆಫಾಲಿಟಿಸ್ ರೋಗಿಗೆ ಜೀವ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು
ಎನ್ಸೆಫಾಲಿಟಿಸ್ ರೋಗಿಗೆ ಜೀವ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು
ಕಲಬುರ್ಗಿ ನ08: ವೈದ್ಯಕೀಯ ಕ್ಷೇತ್ರದಲ್ಲಿ ಅಪಾಯಕಾರಿ ಹಾಗೂ ಮಾರಣಾಂತಿಕ ಮೆದುಳಿನ ಉರಿಯೂತದ ಕಾಯಿಲೆ ಎನ್ಸೆಫಾಲಿಟಿಸ್ ಇಂತಹ ಕಾಯಿಲೆ ಹೊಂದಿರುವ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಸ್ತಾಪೂರ ಗ್ರಾಮದ ಮೊಹಮ್ಮದ್ ಸಮಿ ಎಂಬ 21 ವರ್ಷ ವಯಸ್ಸಿನ ಯುವಕ ಅಗಸ್ಟ್ 30 ರಂದು ಸಾವು ಬದುಕಿನ ಗಂಭೀರ ಪರಿಸ್ಥಿತಿಯಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಅವನ ಆಮ್ಲಜನಕ ಮಟ್ಟವು ಸಹ ತಿವ್ರವಾಗಿ ಕುಸಿದಿತ್ತು.ಇದನ್ನು ಅರಿತು ಆಸ್ಪತ್ರೆಯ ಐಸಿಯು ವಿಭಾಗದ ನುರಿತ ತಂಡವು ರೋಗಿಯ ಉಸಿರಾಟದ ವೈಫಲ್ಯವನ್ನು ತಡೆಗಟ್ಟಲು ತಕ್ಷಣವೆ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ಮುಂದುವರಿಸಿತು. ಮೆದುಳಿನ ತೀವ್ರ ಜ್ವರದಿಂದಾಗಿ ಹಾಗೂ ಶೀತದಿಂದ ದೇಹದ ಮೇಲೆಲ್ಲಾ ದದ್ದುಗಳಾಗಿದ್ದವು ಈ ಮೊದಲು ರೋಗಿಯು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಆದರೆ ಗಂಭೀರ ಪರಿಸ್ಥಿತಿಯಲ್ಲಿ ಅಲ್ಲಿಂದ ನೇರವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾದನು. ಉಸಿರಾಟದ ತೊಂದರೆ ಸಾವು ಬದುಕಿನ ನಡುವಿನ ಹೋರಾಟ ಮಾಡುತ್ತಿದ್ದ ರೋಗಿ ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗಂಭೀರ ಸ್ವರೂಪ ಪಡೆದಾಗ ಇವನಿಗೆ ಮಾರಣಾಂತಿಕ ಎನ್ಸೆಫಾಲಿಟಿಸ್ ಇರುವುದು ಖಚಿತವಾಯಿತ. ಇದನ್ನರಿತ ಆಸ್ಪತ್ರೆಯ ನುರಿತ ನರವಿಜ್ಞಾನ ತಜ್ಞರಾದ ಡಾ ಅನಿಲಕುಮಾರ ಪಾಟೀಲ್ ಚಿಕಿತ್ಸೆ ಆರಂಭಿಸಿದರು ಅವರಿಗೆ ಉನ್ನತ ಮಟ್ಟದ ಪ್ರತಿಜೀವಕಗಳು ಮತ್ತು ಆಂಟಿವೈರಲ್ ಗಳೊಂದಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಆರಂಭಿಸಿದರು ಅವರ ಸಲಹೆಯಂತೆ ಆಸ್ಪತ್ರೆಯ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆ ಸಮಯಕ್ಕೆ ಸರಿಯಾಗಿ ಔಷಧೋಪಚಾರದಿಂದಾಗಿ ರೋಗಿಯು ಉಸಿರಾಟದಲ್ಲಿ ಗಮನಾರ್ಹ ಬದಲಾವಣೆಯಾಗಿ ಸರಿಯಾಗಿ ಆಮ್ಲಜನಕ ಪೂರೈಕೆಗೊಂಡು ವೆಂಟಿಲೇಟರ್ ನಿಂದ ಹೊರಬಂದು ಚಿಕಿತ್ಸೆಯಿಂದ ಈಗ ಸ್ಥಿರವಾಗಿ ಇಂದು ಸಾವಿನ ದವಡೆಯಿಂದ ಪಾರಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಂತಹ ಮಾರಣಾಂತಿಕ ಮೆದುಳಿನ ಕಾಯಿಲೆಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡದಲ್ಲಿ ಆಸ್ಪತ್ರೆಯ ನರವಿಜ್ಞಾನ ಮುಖ್ಯಸ್ಥರಾದ ಡಾ ಅನಿಲಕುಮಾರ ಪಾಟೀಲ್, ಐಸಿಯು ವಿಭಾಗದ ಮುಖ್ಯಸ್ಥರಾದ ಡಾ ಸೊಹೈಲ್ ಶಾಲಿ,ಡಾ ಪ್ರತೀಕ್ ಅನೇಕ ಸ್ನಾತಕೋತ್ತರ ವೈದ್ಯರು ಹಾಗೂ ಸಿಬ್ಬಂದಿಗಳು ಇದ್ದರು.
ಇಂತಹ ಸಾಧನೆ ಮಾಡಿದ ಸಂಪೂರ್ಣ ವೈದ್ಯಕೀಯ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ , ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್, ವೈದ್ಯಕೀಯ ಆಸ್ಪತ್ರೆಯ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರಶಂಸಿಸಿದ್ದಾರೆ.
