ಜೀವನ ಮೌಲ್ಯದ ನಾಟಕಕಾರ ರಾಜೇಂದ್ರ ಝಳಕಿ- ಡಾ.ಶೀಲಾದೇವಿ ಬಿರಾದಾರ

ಜೀವನ ಮೌಲ್ಯದ ನಾಟಕಕಾರ ರಾಜೇಂದ್ರ ಝಳಕಿ-  ಡಾ.ಶೀಲಾದೇವಿ ಬಿರಾದಾರ

ಜೀವನ ಮೌಲ್ಯದ ನಾಟಕಕಾರ ರಾಜೇಂದ್ರ ಝಳಕಿ-

 ಡಾ.ಶೀಲಾದೇವಿ ಬಿರಾದಾರ

ಕಲಬುರಗಿ: ಮಕ್ಕಳ ಮನಸ್ಸನ್ನು ಅರಿತವರು ಶಿಕ್ಷಕರು ಅದರ ಹಾಗೆ ಸಾಹಿತ್ಯ ರಚಿಸಿದವರು ಅವರೇ ಹೀಗಾಗಿ ತಮ್ಮ ಸಾಹಿತ್ಯದ ಜೂವನ ಮೌಲ್ಯಗಳನ್ನು ಬಿತ್ತಿದ ನಾಟಕಕಾರ ರಾಜೇಂದ್ರ ಝಳಕಿ ಎಂದು ಯುವ ಲೇಖಕಿ ಡಾ.ಶೀಲಾದೇವಿ ಬಿರಾದಾರ ಅಭಿಮತ ಪಟ್ಟರು.

ಮಾತಾಮಾಣಿಕೇಶ್ವರಿ ಕಾಲೋನಿತ ಕೋಕಿಲೇಶ್ವರಿ ದೇವಸ್ಥಾನದ ಆವರಣದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ-೫ ಉಪನ್ಯಾಸ ಮಾಲಿಕೆಯಲ್ಲಿ ಶಿಕ್ಷಕ- ಸಾಹಿತಿ ರಾಜೇಂದ್ರ ಝಳಕಿ ನಾಟಕ ಕುರಿತು ಮಾತನಾಡಿ ನಾಲ್ಕು ದೃಶ್ಯಗಳನ್ನು ಹೊಂದಿದ ಪರಿಣಾಮಕಾರಿ ನಾಡಕ ಎಂದರು.

     ‌‌ ಕಲ್ಲರಳಿನ ಕರುಳು ಕಾವ್ಯ ಮತ್ತು ನೀಲಕಂಠ ಕೃತಿಯಲ್ಲಿ ಸಾಮಾಜಿಕ ಕಳಕಳಿಯ, ಜೀವನಾನುಭವ‌ ಸಾಮರಸ್ಯ ವನ್ನು ಕಾವ್ಯದಲ್ಲಿ ಅರಳಿಸಿದರೆ,ನೀಲಕಂಠ ಜಮಾದಾರ ಅವರ ಬದುಕು, ಸಮಾಜದ ಕೊಡುಗೆ ಅಭಿನಂದನ ಗ್ರಂಥದಲ್ಲಿ ಅಡಕವಾಗಿ ಎಂದು ಆಳಂದ ಎ.ವಿ ಪಾಟೀಲ ಕಾಲೇಜಿನ ಕನ್ನಡ ಅಧ್ಯಾಪಕಿ ಡಾ.ಸುಖ ದೇವಿ ಗಂಟೆ ನುಡಿದರು. ಚಿಗುರು ಚೇತನ ಮಕ್ಕಳ ಕಾವ್ಯ ಸಂಗ್ರಹದಲ್ಲಿ ಅತ್ಯುತ್ತಮ ಕವನ ಮಕ್ಕಳ ಮೇಲೆ ಪ್ರಭಾವ‌ ಬೀರುವವೆಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಸಿದ್ಧಪ್ಪ ಹೊಸಮನಿ ಅಭಿಪ್ರಾಯ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ ಸಾಹಿತಿ,ಸಿರಿಗನ್ನಡ ವೇದಿಕೆ ಸಾಕ್ಷಿ ಪ್ರತಿಷ್ಠಾನ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ

ಒಬ್ಬ ಲೇಖಕ ಆತ ಒಂದು ಸಮುದಾಯದ ಲೇಖಕ ಆಗಲಾರ ಆತನ ವಿಚಾರಗಳು ಮನುಕುಲ ಉದ್ಧಾರದ ವಿಚಾರ ಗಳಾಗಬೇಕು.ಝಳಕಿ ಒಬ್ಬ ಶಿಕ್ಷಕ,ವಿದ್ಯಾರ್ಥಿ ಭವಿಷ್ಯ ನಿರ್ಮಿಸಿ, ಸಮುದಾಯದ ಹಿತ ಕಾಯ್ದು, ಲೇಖಕರಾಗಿ ಕವಿ,ವಚನಕಾರ,ನಾಟಕಕಾರರಾಗಿ ಸಾಹಿತ್ಯ ಸೇವೆ ಅನನ್ಯವೆಂದರು.ಬಡತನ ನೋವು,ಅವರ ಬರಹದ ಶಕ್ತಿಯಾಗಿವೆ ಎಂದರು.

   ‌‌‌ ‌ ‌ಸಾಹಿತಿ ರಾಜೇಂದ್ರ ಝಳಕಿ ಮಾತನಾಡಿ ನನ್ನ ಜೀವನ ಸಂಘರ್ಷ ಬರಹವಣಿಗೆಗೆ ದಾರಿ, ನನಗೆ ಕೈ ಹಿಡಿದ ಹಲವರನ್ನು ಸ್ಮರಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಭಗವಂತಪ್ಪ ಬುಳ್ಳಾ,ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳರ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಕೋಲಿ ಸಮಾಜದ ನೌಕರ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ, ಉಪಸ್ಥಿತಿ ಇದ್ದರು. ಡಾ.ಚಿದಾನಂದ ಕುಡ್ಡನ್ ಸ್ವಾಗತಿಸಿದರು, ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ರಾಜಕುಮಾರ ಧುಮ್ಮನಸೂರು ವಂದಿಸಿದರು. ಬಿ.ಜಿ.ಶೆಟಗಾರ,ವಿಶ್ವನಾಥ ಭಕರೆ,ಮೊದಲಾದರಿದ್ದರು.