ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಗುರುಮಠಕಲ್:ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕ ಘಟಕ ಗುರುಮಠಕಲ್ ವತಿಯಿಂದ ಜಿಲ್ಲೆಯ ಗಡಿಭಾಗವಾದ ಕುಂಟಿಮಾರಿ ಚೆಕ್‌ಪೋಸ್ಟ್ ಹತ್ತಿರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕರವೇ ತಾಲೂಕ ಅಧ್ಯಕ್ಷ ಶರಣಬಸಪ್ಪ ಯಲ್ಹೇರಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಅಬಕಾರಿ ಇಲಾಖೆಯ ಅಧಿಕಾರಿ ಶ್ರೀಶೈಲ ಎಸ್. ಒಡೆಯರ್ ಅವರು ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಯಲ್ಹೇರಿ ಅವರು,

“ಗುರುಮಠಕಲ್ ತಾಲೂಕು ಕರ್ನಾಟಕ–ತೆಲಂಗಾಣ ಗಡಿಯಲ್ಲಿರುವುದರಿಂದ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಕಟ್ಟುವ ಕೆಲಸ ಅತ್ಯಗತ್ಯ. ಕರವೇ ಸಂಘಟನೆಯು ಹೆಚ್ಚಿನ ಗ್ರಾಮ ಶಾಖೆಗಳನ್ನು ಆರಂಭಿಸಿ ಕನ್ನಡ ನಾಡು–ನುಡಿ–ನೆಲ–ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಸರ್ಕಾರವು ಪ್ರತಿ ವರ್ಷವೂ ಗಡಿಭಾಗಗಳಲ್ಲಿ ‘**ಗಡಿನಾಡ ಉತ್ಸವ**’ಗಳನ್ನು ಆಯೋಜಿಸಿ ಕನ್ನಡ ಸಂಸ್ಕೃತಿಯ ಬಲವರ್ಧನೆಗೆ ಪ್ರಾಮುಖ್ಯತೆ ನೀಡಬೇಕು,” ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಪಾಟೀಲ್ ಜೈಗ್ರಾಮ್,ತಾಲೂಕ ಪ್ರಧಾನ ಕಾರ್ಯದರ್ಶಿ ಮೌನೇಶ್ ದೊಬ್ಬಲ್ ಮಾಧ್ವಾರ,ಜಗದೀಶ್ ನಸಲವಾಯಿ,ರಾಕೇಶ್ ಕುಂಟಿಮಾರಿ,ಶಿವು ಕಾವಲಿ ಕೊಂಕಲ್,ರಾಘವರೆಡ್ಡಿ ಪಳ್ಳ ಸಂಬರ,ದೇವಸಿಂಗ್ ಮಾಧ್ವಾರ,ವಿಜಯ ತೋರಣತಿಪ್ಪ,ತಾಯಪ್ಪ ಕಾಳೆಬೆಳಗುಂದಿ,ಬನ್ನಯ್ಯ ಕಲಾಲ್,ಪ್ರಭಾಕರ್ ಹೂಗಾರ್,ಮಂಜುನಾಥ ಬಟಿಕೇರಿ,ನಿಂಗಪ್ಪ ಕರಣಿಗಿ,ಹಣಮಂತ ಬೋವಿ,ನಾಗಪ್ಪ ಮಡಿವಾಳ ಸಂಬರ,ಅನಿಲ್ ವಂಕಸಂಬರ** ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಶೇಷ ಪ್ರತಿನಿಧಿ