ಉಚಿತ ಆರೋಗ್ಯ ಶಿಬಿರ ಸದುಪಯೋಗ ಪಡೆದುಕೊಳ್ಳಿ : ಭಂವರ್ ಸಿಂಗ್ ಮೀನಾ
ಉಚಿತ ಆರೋಗ್ಯ ಶಿಬಿರ ಸದುಪಯೋಗ ಪಡೆದುಕೊಳ್ಳಿ : ಭಂವರ್ ಸಿಂಗ್ ಮೀನಾ
ಕಲಬುರಗಿ : ರಾಷ್ಟ್ರೀಯ ಅರೋಗ್ಯ ಅಭಿಯಾನ ಜಿಲ್ಲಾಡಳಿತ ಜಿಲ್ಲಾಪಂಚಾಯತ ಕಲಬುರಗಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ರಾಷ್ಟ್ರಿಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಡಿಯಲ್ಲಿ ವೈದ್ಯೇಹಿ ಆಸ್ಪತ್ರೆ ಬೆಂಗಳೂರು ಇವರ ಸಂಯೂಕ್ತಾಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಯಿತು. ಶಿಬಿರವನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಷ್ಟ್ರಿಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಡಿಯಲ್ಲಿ ಇಂದು ಸುಮಾರು 300 ಮಕ್ಕಳಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಇಂದು ನಡೆದ ಶಿಬಿರದಲ್ಲಿ 109 ಮಕ್ಕಳು ಸ್ಕ್ರೀನಿಂಗ್ ನಲ್ಲಿ ಶಸ್ತ್ರ ಚಿಕಿತ್ಸೆಗೆ 54 ಮಕ್ಕಳು ಆಯ್ಕೆ ಆಗಿದ್ದಾರೆ.
ಜಿಲ್ಲೆಯ ಸುಮಾರು 4.8 ಲಕ್ಷ ಅಂಗನವಾಡಿ, ಶಾಲಾ ಮಕ್ಕಳಿಗೆ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಕ್ಕಳಿಗೆ ಯಾವುದೇ ಅರೋಗ್ಯ ಸಮಸ್ಯೆ ಇದ್ದರು ಕೂಡ ಅದನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವಂತ ಕಾರ್ಯವನ್ನು ನಮ್ಮ ಆರ್ ಸಿ ಎಚ್ ಓ ಹಾಗೂ ಆರ್ ಬಿ ಎಸ್ ಕೆ ತಂಡ ಮಾಡುತ್ತೆ ಜಿಲ್ಲೆಯ ಎಲ್ಲ ಸಾರ್ವಜನಿಕರು ತಮ್ಮ ಮಕ್ಕಳಿಗೆ ಏನಾದರು ಆರೋಗ್ಯ ಸಮಸ್ಯೆಗಳಿದ್ದರೆ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.ನಂತರ ಮಾತನಾಡಿದ ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತ್ನಾಳ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ನಮ್ಮ ವೈದ್ಯಕೀಯ ತಂಡ ಮಾಡುತ್ತಿರುವದು ಬಹಳಷ್ಟು ಸಂತಸದ ವಿಷಯ, ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ತರಹದ ಸಮಸ್ಯೆ ಗಳಿದ್ದರೆ ಕೂಡಲೇ ನಮ್ಮ ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು ಜೊತೆಗೆ ಈ ಶಿಬಿರದಿಂದ ಹಲವಾರು ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿದ್ದು ಬಡ ಪಾಲಕರ ಮೊಗದಲ್ಲಿ ಮಂದಹಾಸ ಮುದಿದ್ದು, ಇಂದು ನಾವು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ ಎಂದರು.ತದನಂತರ ಮಾತನಾಡಿದ ಆರ್ ಸಿ ಎಚ್ ಓ ಸಿದ್ದರಾಮ ಪಾಟೀಲ್ ನಮ್ಮ ಆರ್ ಬಿ ಎಸ್ ಕೆ ತಂಡದವರ ಜೊತೆಗೆ ನಮ್ಮ ವೈದ್ಯಕೀಯ ತಂಡ ವರ್ಷಕ್ಕೆ ಅಂಗನವಾಡಿಗಳಿಗೆ ಎರಡು ಬಾರಿ ಹಾಗೂ ಶಾಲೆಗಳಿಗೆ 1 ಬಾರಿ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಅರೋಗ್ಯ ತಪಾಸಣೆ ಮಾಡಿ ಮಕ್ಕಳಲ್ಲಿರುವ ಅರೋಗ್ಯ ಸಮಸ್ಯೆ ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡುವ ಕಾರ್ಯವನ್ನು ನಮ್ಮ ತಂಡಗಳು ಮಾಡುತ್ತಿವೆ ಅಷ್ಟೇ ಅಲ್ಲದೆ ಒಂದು ಒಪರೇಷನ್ ಮಾಡಬೇಕು ಎಂದರೆ ಕನಿಷ್ಠ ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗುತ್ತೆ ಅದರೆ ನಮ್ಮ ಕಾರ್ಯಕ್ರಮದಲ್ಲಿ ಯಾವುದೇ ಮಗುವಿಗೆ ಉಚಿತ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡುವಂತ ಕಾರ್ಯ ವನ್ನು ನಾವು ಮಾಡುತ್ತಿದ್ದೇವೆ ಎಂದು ಸಂತಸ ವ್ಯಕ್ತ ಪಡಿಸಿದರು.
ಹಾಗಾಗಿ ಎಲ್ಲ ವರ್ಗದ ಬಡಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಡಿ ಚ್ ಓ ಡಾ.ಶರಣಬಸಪ್ಪ ಕ್ಯಾತ್ನಾಳ್, ಆರ್ ಸಿ ಎಚ್ ಓ ಸಿದ್ದರಾಮಪ್ಪ ಪಾಟೀಲ್, ಡಾಕ್ಟರ್ ಉಮೇಶ್ ಎಸ್ ಆರ್ ಡೀನ ಮತ್ತು ನಿರ್ದೇಶಕರು, ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ವ್ಯವಸ್ತಾಪಕರಾದ ಕೃಷ್ಣ ವಗ್ಗೆ, ಡಾ. ರುಖೀಯಾ ಅಸನರಬಾ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು, ರಾಜಕುಮಾರ್ ರಾಥೋಡ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ. ಪ್ರವೀಣ್ ಜೋಶಿ ಜಿಲ್ಲಾ ಸಂಯೋಜಕರು ಆರ್ ಬಿ ಎಸ್ ಕೆ,ಡಾ. ನಾಗರಾಜ್ ಪಾಟೀಲ್ ಸ್ಥಳೀಯ ವೈದಾಧಿಕಾರಿಗಳು ಜೀನ್ಸ್ ಆಸ್ಪತ್ರೆ, ಡಾ. ಸಂಧ್ಯಾ ಕಾನೇಕರ ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು, ವೈದೇಹಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ವಿಜಯ್ ಸಾಯಿ, ವೈದ್ಯರಾದ ಡಾ. ಮೋಹಿತ್, ಡಾ.ತಿಲಕ, ಕಲಬುರ್ಗಿ ಜಿಲ್ಲೆಯ ಆರ್ ಬಿ ಎಸ್ ಕೆ ತಂಡದ ವೈದ್ಯಾಧಿಕಾರಿಗಳು, ಡಿಇಐಆರ್ಟಿ ಶಿಕ್ಷಕರು, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.