ಮಕ್ಕಳಲ್ಲಿ ಸಮಯಪ್ರಜ್ಞೆ, ನಿಯಮ ಪಾಲನೆ ಖಂಡಿತ ನೆರವಾಗುತ್ತದೆ – ಶಿವರಾಜ ಅಂಡಗಿ

ಮಕ್ಕಳಲ್ಲಿ ಸಮಯಪ್ರಜ್ಞೆ, ನಿಯಮ ಪಾಲನೆ ಖಂಡಿತ ನೆರವಾಗುತ್ತದೆ – ಶಿವರಾಜ ಅಂಡಗಿ

ಮಕ್ಕಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಪುಸ್ತಕ ವಿತರಣೆ

ಮಕ್ಕಳಲ್ಲಿ ಸಮಯಪ್ರಜ್ಞೆ, ನಿಯಮ ಪಾಲನೆ ಖಂಡಿತ ನೆರವಾಗುತ್ತದೆ – ಶಿವರಾಜ ಅಂಡಗಿ

ಕಲಬುರಗಿ : ಮಕ್ಕಳಲ್ಲಿ ಸಮಯಪ್ರಜ್ಞೆ, ವೈಯಕ್ತಿಕ ಶಿಸ್ತು ಮತ್ತು ನಿಯಮ ಪಾಲನೆ ಬೆಳೆಸುವುದು ಅವರ ಭವಿಷ್ಯ ನಿರ್ಮಾಣಕ್ಕೆ ಅಗತ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

ಕುಮಾರ ಶ್ರೇಯಾಂಕ ಹಂಚನಾಳ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ಪರಿಸರದ ಇತಿಮಿತಿಗಳೊಳಗೆ ತಮ್ಮ ಆಸೆ-ಆಕಾಂಕ್ಷೆಗಳನ್ನು ಸಾಧಿಸುವ ದೃಢಸಂಕಲ್ಪ ಬೆಳೆಸಬೇಕು. ಗುರಿ ಮುಟ್ಟಲು ಇರುವ ಸಮಯ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ “ಮುಂದೆ ನೀವು ಕೂಡ ಇಂಥಹ ಸಾಧಕರಂತೆ ಬೆಳೆಯಿರಿ” ಎಂದು ಪ್ರೇರೇಪಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿ ವಿನೋದಕುಮಾರ ಜನೇವರಿ ಹಾಗೂ ಸಿ.ಎ. ರಾಜಕುಮಾರ ಹಂಚನಾಳ ಅವರು ಮಕ್ಕಳ ಪಠ್ಯದ ಓದುವಿನೊಂದಿಗೆ ಪಠ್ಯೇತರ ಓದು ಮತ್ತು ದೈಹಿಕ ಚಟುವಟಿಕೆಗಳೂ ಅತ್ಯಂತ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮ ಹೂಗಾರ, ಸಂಗಮೇಶ ಮೈನಾಳ, ಮಸಬೀನಾಳ, ಸೋಮಶೇಖರ್, ಸಿದ್ದರಾಮ ಹಂಚನಾಳ, ಸೋಮಶೇಖರ್ ಹಂಚನಾಳ, ಮಂಜುನಾಥ ಕಲಬುರಗಿ, ಸುರೇಖಾ ಧೋತರೆ, ಶೈಲಜಾ ಜಮಾದಾರ, ಶರಣಮ್ಮ ಜಮಾದಾರ, ಸವಿತಾ, ಸಂಜಿತಾ ಹಾಗೂ ಸುಜಾತಾ ಹಂಚನಾಳ ಉಪಸ್ಥಿತರಿದ್ದರು.

ಪುಸ್ತಕ ಪಡೆದ ಮಕ್ಕಳು ಚಿನ್ಮಯಿ, ಚಿಂಟು, ಶ್ರೇಯಾಂಕ, ಪ್ರಣವಿ, ಆರೂಷ, ಧನಶ್ರೀ, ವೀರ, ಶ್ರೀಗೌರಿ, ಆಯುಷಿ, ಶ್ರೇಯಸ್ಸ್ ಸೇರಿದಂತೆ ಹಲವಾರು ಮಕ್ಕಳು ಭಾಗವಹಿಸಿದರು.