ಆಳಿದ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಪಕ್ಷಗಳು ಒಳಮೀಸಲಾತಿ ಜಾರಿಗೊಳಿಸುವುದರ ಕಡೆಗೆ ಯಶಸ್ವಿ ಕಂಡಿಲ್ಲ: ಆರೋಪ ಸರಕಾರಕ್ಕೆ ಎಚ್ಚರಗೊಳಿಸಲು ಆ.1 ರಂದು ಡಿಸಿ ಕಛೇರಿ ಮುಂದೆ ಅರೆಬತ್ತಲೆ ಪ್ರತಿಭಟನೆ ನಡೆಸಲು ನಿರ್ಧಾರ

ಆಳಿದ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಪಕ್ಷಗಳು ಒಳಮೀಸಲಾತಿ ಜಾರಿಗೊಳಿಸುವುದರ ಕಡೆಗೆ ಯಶಸ್ವಿ ಕಂಡಿಲ್ಲ: ಆರೋಪ 

ಸರಕಾರಕ್ಕೆ ಎಚ್ಚರಗೊಳಿಸಲು ಆ.1 ರಂದು ಡಿಸಿ ಕಛೇರಿ ಮುಂದೆ ಅರೆಬತ್ತಲೆ ಪ್ರತಿಭಟನೆ ನಡೆಸಲು ನಿರ್ಧಾರ 

ಚಿಂಚೋಳಿ : ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಪಕ್ಷಗಳು ಮಾದಿಗರ 30 ವರ್ಷಗಳ ಹೋರಾಟದ ಬೇಡಿಕೆಯಾಗಿರುವ ಒಳಮೀಸಲಾತಿ ಜಾರಿಗೊಳಿಸಲು ಇಚ್ಚೆ ಮತ್ತು ಧ್ವನಿ ಎತ್ತಿ ಕೆಲಸ ಮಾಡುವಂತಹ ಯಶಸ್ವಿ ಕಂಡಿಲ್ಲ ಎಂದು ತಾಲೂಕ ಮಾದಿಗ ಸಮಾಜದ ಮುಖಂಡರು ಆರೋಪಿಸಿದ್ದಾರೆ. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡ ಜಗನ್ನಾಥ ಕಟ್ಟಿ ಹಾಗೂ ಆಕಾಶ ಕೊಳ್ಳೂರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮನ್ನ ಆಳಿದ ಬಿಜೆಪಿ, ಜೆಡಿಎಸ್ ಮತ್ತು ಪ್ರಸ್ತುತ ಆಳುತ್ತಿರುವ ಕಾಂಗ್ರೇಸ್ ಸರಕಾರ 30 ವರ್ಷಗಳಿಂದ ನಡೆಸುತ್ತಿರುವ ಬೇಡಿಕೆಯ ಹೋರಾಟ ಒಳಮೀಸಲಾತಿ ಜಾರಿಗೊಳಿಸಲು ಸಿದ್ದರಾಮಯ್ಯ ಸರಕಾರ ಮನಸ್ಸು ಮಾಡುತ್ತಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಒಳಮೀಸಲಾತಿ ಜಾರಿಗೊಳಿಸಲು ಅಧಿಕಾರ ನೀಡಿ ಆದೇಶಿಸಿದೆ. ಆದರೆ ಸಿದ್ದರಾಮಯ್ಯ ಸರಕಾರ ಪಂಚ ಗ್ಯಾರೆಂಟಿ ನೀಡಿದಂತೆ ಆರನೇ ಗ್ಯಾರೆಂಟಿ ಮಾದಿಗರ ಒಳಮೀಸಲಾತಿ ಜಾರಿ ಮಾಡಿ ತೀರುತ್ತೇವೆಂದು ಹೇಳಿದವರು, ಈಗ ಅದೇ ಒಳಮೀಸಲಾತಿ ಜಾರಿಗೊಳಿಸಲು ಸುಳ್ಳು ಭರವಸೆಗಳು ನೀಡಿ, ಹಿಂದೆಟ್ಟು ಹಾಕಲಾಗುತ್ತಿದೆ ಎಂದು ಮುಖಂಡ ಆಕಾಶ ಕೊಳ್ಳೂರ ಆರೋಪಿಸಿದರು. ಸುಪ್ರೀಂ ಕೋರ್ಟ ಆದೇಶದಂತೆ ಕೇರಳ, ತೆಲಂಗಾಣ, ಛತೀಸ್ ಗಡ್, ರಾಜ್ಯಸ್ಥಾನ, ಆಂಧ್ರಪ್ರದೇಶ ರಾಜ್ಯಗಳ ಸರಕಾರಗಳು ಒಳಮೀಸಲಾತಿ ಜಾರಿಗೊಳಿಸಿವೆ. ಆದರೆ ಕರ್ನಾಟಕ ಕಾಂಗ್ರೇಸ್ ಸರಕಾರ ಮಾತ್ರ ಯಾಕೇ ಮಾಡುತ್ತಿಲ್ಲ? ಎಂದು ಜಗನ್ನಾಥ ಕಟ್ಟಿ, ಆಕಾಶ ಕೊಳ್ಳೂರ ಪ್ರೇಶ್ನಿಸಿದ್ದಾರೆ. ಇನ್ನೂ ಮಾದಿಗ ಸಮಾಜದ ಜನಾಂಗಕ್ಕೆ ಸೇರಿದ 9 ಶಾಸಕರು ಇದ್ದರು ವಿಧಾನಸಭೆಯಲ್ಲಿ ಸಮಾಜದ ಧ್ವನಿಯಾಗಿ ಒಳಮೀಸಲಾತಿ ಜಾರಿಗಾಗಿ ಧ್ವನಿ ಎತ್ತುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಒಳಮೀಸಲಾತಿ ಜಾರಿಗೊಳಿಸವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರಕ್ಕೆ ಎಚ್ಚರಿಸುವುದಕ್ಕಾಗಿ ಮೊದಲ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆ.1 ರಂದು ಅರೆಬತ್ತಲೆ ಪ್ರತಿಭಟನೆ ಕೈಗೊಳಲಾಗಿದ್ದು, ಅದರಂತೆ ಕಲಬುರಗಿ ಡಾ.ಬಿ.ಆರ್ ಅಂಬೇಡ್ಕರ ಪುತ್ಥಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಅರೆಬತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪ್ರದೀಪ್ ಮೇತ್ರಿ, ಸುರೇಶ ಸೇರಿಕಾರ, ರವಿ ಗುಪ್ತ, ವೀರೇಂದ್ರ ಮೋತಕಪಳ್ಳಿ, ರೇವಣ್ಣಸಿದ್ದಪ್ಪ, ನಾಗರ್ಜುನ್ ಕಟ್ಟಿ, ಹಣಮಂತ ಬೀರನಳ್ಳಿ, ಮಚೇಂದ್ರ, ಪ್ರಸಾದ್ ಓಂಕಾರ, ಅನೀಲ, ಬಸವರಾಜ, ವಿಶಾಲ ಸುಗಂದಿ, ಸತೀಶ ಮೇತ್ರಿ, ಸೋಮಶೇಖರ ಗಡಿಲಿಂಗದಳ್ಳಿ, ರಾಜೇಂದ್ರ ಅವರು ಇದ್ದರು.