ವೈವಿಧ್ಯಮಯ ಸಂಸ್ಕೃತಿಯ ಈ ನಾಡು ಕರುನಾಡು - ದರ್ಶನಾಪುರ

ವೈವಿಧ್ಯಮಯ ಸಂಸ್ಕೃತಿಯ ಈ ನಾಡು ಕರುನಾಡು - ದರ್ಶನಾಪುರ

ವೈವಿಧ್ಯಮಯ ಸಂಸ್ಕೃತಿಯ ಈ ನಾಡು ಕರುನಾಡು - ದರ್ಶನಾಪುರ 

ಶಹಾಪುರ : 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಯಾದಗಿರಿ ಜಿಲ್ಲಾ ಆಡಳಿತ ವತಿಯಿಂದ ಕೂಡ ಮಾಡುವ 2025 - 26 ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಅದ್ದೂರಿಯಿಂದ ಜರುಗಿತು,

ಕಲೆ ಸಾಹಿತ್ಯ ಸಂಗೀತ, ಪತ್ರಿಕೆ, ಸಂಘಟನೆ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಕಾರ್ಯನಿರ್ವಹಿಸಿದ ಸಾಧಕ ಬಸವರಾಜ ಶಿಣ್ಣೂರ

ಅವರಿಗೆ ಸಂಕೀರ್ಣ ಕ್ಷೇತ್ರದಿಂದ ಗುರುತಿಸಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು,ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ,ಪ್ರತಿಯೊಬ್ಬರು ನಾಡು ನುಡಿ, ನೆಲ ಜಲ ಕ್ಕೆ ದಕ್ಕೆ ಬಂದಾಗ ಕಂಕಣ ಬದ್ಧರಾಗಿ ನಿಲ್ಲಬೇಕು,ಈ ನಾಡಿನ ಸಾಹಿತ್ಯ,ಸಂಸ್ಕೃತಿ,ಸಂಪತ್ ಭರಿತವಾಗಿರುವುದರಿಂದ ಬೇರೆ ದೇಶಗಳು ನಮ್ಮ ಕರ್ನಾಟಕವನ್ನು ಮರಳಿ ನೋಡುವಂತಾಗಿದೆ ಎಂದು ಹರುಷ ವ್ಯಕ್ತಪಡಿಸಿದರು,

ಕವಿರಾಜ ಮಾರ್ಗದ ಪ್ರಕಾರ ಕನ್ನಡ ನಾಡು ನುಡಿ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿತ್ತು,ಇಂದಿನ ಬಳ್ಳಾರಿ,ಬೆಳಗಾವಿ,ಗದಗ ಮತ್ತು ಕೊಪ್ಪಳದಂತ ಪ್ರದೇಶಗಳು ಆಗಿನ ಪ್ರಮುಖ ಕೇಂದ್ರಗಳಾಗಿದ್ದವು ಈ ನಾಡು ಜಾನಪದ,ಕಲೆ,ನೃತ್ಯ,ಹಾಡು, ನಾಟಕ,ವೇಷ ಭೂಷಣಗಳು ಮತ್ತು ಹಬ್ಬಗಳಂತ ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿದೆ ಇಂತಹ ನಾಡಿನಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ ಎಂದು ನೆನೆದರು.

ಶಾಸಕರಾದ ಚೆನ್ನರೆಡ್ಡಿ ಪಾಟೀಲ್ ತುನ್ನೂರ,ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚುಂಚನಸೂರ, ಕರ್ನಾಟಕ ರಾಜ್ಯ ಮಧ್ಯಪಾನ ಸ್ವಯಂ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲದಾಪುರ, ನಗರಸಭೆ ಅಧ್ಯಕ್ಷರು ಲಲಿತ ಅನುಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜಿಲ್ಲಾಧಿಕಾರಿಗಳಾದ ಹರ್ಷಲ್ ಬೋಯರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಉತ್ತರಾದೇವಿ ಮಠಪತಿ, ಸೇರಿದಂತೆ ವಿವಿಧ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.