ಯತ್ನಾಳ ಉಚ್ಚಾಟನೆ,ಬಿಜೆಪಿಗೆ ನಷ್ಟ - ಗುರು ಅಂಗಡಿ

ಯತ್ನಾಳ ಉಚ್ಚಾಟನೆ,ಬಿಜೆಪಿಗೆ ನಷ್ಟ - ಗುರು ಅಂಗಡಿ
ಶಹಾಪುರ : ವಿಜಯಪುರದ ಶಾಸಕರು ಹಾಗೂ ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದರಿಂದ ಮುಂಬರುವ ದಿನಗಳಲ್ಲಿ ಬಿಜೆಪಿಗೆ ಭಾರಿ ಪ್ರಮಾಣದ ನಷ್ಟ ಆಗಲಿದೆ ಎಂದು ಪಂಚಮಸಾಲಿ ಸಮಾಜದ ಯುವ ಮುಖಂಡ ಗುರು ಅಂಗಡಿ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗದೆ,ಇನ್ನುಳಿದ ವೀರಶೈವ ಲಿಂಗಾಯತ ಉಪಪಂಗಡಗಳಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಿಂದೂ ಧರ್ಮದ ಉಳಿಯುವಾಗಿ ಸಾಕಷ್ಟು ಹೋರಾಟ ನಡೆಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿರುವ ಇವರಿಗೆ ಈ ರೀತಿ ಮಾಡಿರುವುದು ತುಂಬಾ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಬೆಳವಣಿಗೆಯಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಕಣ್ಣೀರು ತರಿಸಿದ್ದಾರೆ,ಅಲ್ಲದೆ ನಮ್ಮ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದು ತೀವ್ರವಾಗಿ ಖಂಡಿಸುತ್ತೇವೆ ಎಂದು ಖಾರವಾಗಿ ನುಡಿದರು.