ಚಿಂಚೋಳಿ ಆಡಳಿತ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ

ಚಿಂಚೋಳಿ ಆಡಳಿತ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ

ಚಿಂಚೋಳಿ ಆಡಳಿತ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ 

ಅಧಿಕಾರಿಗಳು ಗಡಿನಾಡಿನಲ್ಲಿ ಕನ್ನಡ ಕಂಪು ಪಸರಿಸುವ ಕೆಲಸ ಮಾಡಬೇಕು : ಶಾಸಕ ಡಾ. ಅವಿನಾಶ ಜಾಧವ್ 

ಚಿಂಚೋಳಿ : ತೆಲಂಗಾಣ ಗಡಿನಾಡಿನಲ್ಲಿ ತೆಲಗು ಭಾಷೆ ತೊಲಗಿಸಿ ಆಡಳಿತ ಭಾಷೆ ಕನ್ನಡ ಭಾಷೆ ಬೆಳೆಸುವ ಕೆಲಸ ಆಡಳಿತದ ಅಧಿಕಾರಿಗಳು ಮಾಡಬೇಕಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಅವರು ಹೇಳಿದರು.

ಇಲ್ಲಿನ ಪ್ರಜಾಸೌಧ ಆವರಣದಲ್ಲಿ ತಾಲೂಕ ಆಡಳಿತ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತಿಹಾಸ ಹೊಂದಿರುವ ಭಾಷೆ ಕನ್ನಡ ಭಾಷೆ. ಭಾಷೆ ಬೆಳೆಯಲು ಮತ್ತು ಉಳಿಸಲು ಅನೇಕ ಸಾಹಿತ್ಯ ಇತಿಹಾಸಕಾರರು ಪ್ರಾಣ, ತ್ಯಾಗ, ಬಲಿದಾನದಿಂದ ಬೆಳೆದು ನಿಂತಿದೆ. ನಮ್ಮ ನಾಡು ನಮ್ಮ ದೇಶ ಎಂದು ತಿಳಿಯುವ ಅಭಿಮಾನ ಎಲ್ಲರಲ್ಲಿ ಇರಬೇಕು. ಭಾಷೆ ಮೇಲೆ ರಾಜಕೀಯ ಬದಿಗಿಟ್ಟು ಕನ್ನಡ ಭಾಷೆಯ ಮೇಲೆ ಅಭಿಮಾನ ಇರಿಸಿಕೊಂಡು ಬೆಳಸಬೇಕು. ಸರಕಾರದ ಪ್ರತಿಯೊಂದು ಆಡಳಿತಾತ್ಮಕ ವ್ಯವಹಾರ ಗಳು ಕನ್ನಡ ಭಾಷೆಯಲ್ಲಿಯೇ ನಡಸಬೇಕೆಂದು ಸುತ್ತೋಲೆಗಳು ಹೊರಬಂದಿವೆ. ಅದರಂತೆ ಅಧಿಕಾರಿಗಳು ಕನ್ನಡ ಭಾಷೆಗೆ ಒತ್ತು ನೀಡಿ, ಗಡಿನಾಡಲ್ಲಿ ಕನ್ನಡ ಕಂಪು ಪಸರಿಸುವಂತೆ ಮಾಡಬೇಕೆಂದರು. 

ಪ್ರೊ. ಮಲ್ಲಿಕಾರ್ಜುನ್ ಪಾಲಾಮೂರ್ ಮಾತನಾಡಿ, ಓದುವುದನ್ನು ಬರೆಯಲಿಕೆ. ಬರೆದಿದನ್ನು ಓದುವುದಕ್ಕೆ ಬರುವ ಸ್ಪಷ್ಟ ಭಾಷೆ ಕನ್ನಡ ಭಾಷೆ ಆಗಿದೆ. ಕನ್ನಡ ಭಾಷೆಗೆ ವಿಶ್ವ ಶಿಲ್ಪಿಗಳ ರಾಣಿ ಎಂದು ಕರೆಯಲಾಗುತ್ತದೆ. ಹೀಗಾಗಿ ಕನ್ನಡ ಭಾಷೆ ಶ್ರೀಮಂತ ಭಾಷೆ ಗೆ ಹೆಸರುವಾಸಿ ಪಡೆದಿದೆ.ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳು ಸ್ವತಂತ್ರ ಲಿಪಿ ಹೊಂದಿಲ್ಲ. ಸ್ವತಂತ್ರ ಲಿಪಿ ಕನ್ನಡ ಭಾಷೆ ಹೊಂದಿದ್ದು, ಭಾಷಗೆ ೮ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ ಎಂದರು. 

ಪ್ರಶಸ್ತಿ ಪತ್ರ 

ಪ್ರಶಸ್ತಿ ಪ್ರದಾನ ಗೊಂದಲ : ತಹಸೀಲ್ದಾರ್ ಗೆ ತರಾಟೆ

ತಾಲೂಕ ಆಡಳಿತವು ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಂತೆ ಪ್ರಶಸ್ತಿ ಪ್ರದಾನ ಕಾರ್ಯ ನಡೆಸದೆ ಬದಲಾಯಿಸಿ ನೀಡಲಾಗಿದೆ ಎಂಬ ಕಾರಣಕ್ಕೆ ತಹಸೀಲ್ದಾರ್ ಗೆ ಕಾಂಗ್ರೆಸ್ ಮುಖಂಡ ಆರ್ ಗಣಪತರಾವ ತರಾಟೆಗೆ ತೆಗೆದುಕೊಂಡಿರುವುದು ಜರುಗಿತು. ಇದನ್ನು ಚಿತ್ರಿಕರಿಸಲು ಹೋದ ಹಿರಿಯ ಪತ್ರಕರ್ತರಿಗೆ ತಹಸೀಲ್ದಾರ್ ಅವರಿಂದ ಪತ್ರಕರ್ತನ ವೃತ್ತಿಗೆ ಅಡಪಡಿಸುವ ಅವಾಜ್ ಹಾಕಿರುವ ಘಟನೆ ನಡೆಯಿತು.

ಪ್ರತಿ ವರ್ಷ ರಾಜ್ಯೋತ್ಸವದ ಕಾರ್ಯಕ್ರಮಗಳ ಆಮಂತ್ರಣ ಪಟ್ಟಿಗಳಲ್ಲಿ ಮತ್ತು ಪ್ರಶಸ್ತಿ ಪತ್ರಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ್ತು ಉಪನ್ಯಾಸಕರ ಹೆಸರು ಮುದ್ರಿಸಲಾಗುತ್ತಿತ್ತು.

 ಈಗಿನ ತಾಲೂಕ ಆಡಳಿತ ಮುದ್ರಿಸದೆ ಕಸಪವನ್ನು ಕಡೆಗಣಿಸಲಾಗುತ್ತಿದೆ ಎಂದು ವೇದಿಕೆ ಮೇಲೆ ಆಡಳಿತ ವಿರುದ್ದ ಆಕ್ರೋಶ ಹೊರಹಾಕಿದರು. 

 -ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಬಸವರಾಜ ಮಲಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ, ಅಶೋಕ ಹೂವಿನಭಾವಿ, ವೀರಣ್ಣ ಸುಗಂಧಿ, ಮುಖಂಡ ಗೋಪಾಲರಾವ ಕಟ್ಟಿಮನಿ, ವಕೀಲ ಶ್ರೀಮಂತ ಕಟ್ಟಿಮನಿ, ಕೃಷ್ಣ. ಎಂ. ಬಾರಿ, ಹಣಮಂತ ಪೂಜಾರಿ ಅವರು ಉಪಸ್ಥಿತರಿದ್ದರು.