ಗೋ ಶಾಲೆಯಿಂದ 130 ಗೋ ರಕ್ಷಕ ಸೇವಕರಿಗೆ ಸನ್ಮಾನ
ಪಟ್ಟಣದ ರೇಣುಕಾ ಗೋಶಾಲೆಯಲ್ಲಿ ಗೋಪಾಷ್ಟಮಿ ಆಚರಣೆ : ಗೋ ಶಾಲೆಯಿಂದ 130 ಗೋ ರಕ್ಷಕ ಸೇವಕರಿಗೆ ಸನ್ಮಾನ
ಗೋ ರಕ್ಷಣೆಯ ಸೇವೆಗಾಗಿ ಜನ್ಮ ತಾಳಿದ ಶ್ರೀಕೃಷ್ಣ
ಚಿಂಚೋಳಿ: ಭಗವಂತ ಮಹಾ ವಿಷ್ಣು ತ್ರೇತಾಯುಗದಲ್ಲಿ ರಾಮನ ಅವತಾರ ಹೊತ್ತು ಭೂಮಿಗೆ ಬಂದ. ದ್ವಾಪಾರ ಯುಗದಲ್ಲಿ ಗೋ ರಕ್ಷಣೆ ಸೇವೆಗಾಗಿ ಶ್ರೀ ಕೃಷ್ಣ ರೂಪದಲ್ಲಿ ಜನ್ಮ ತಾಳಿದನ್ನು ಎಂದು ಕಲಬುರಗಿ ಮಾಧವ ಗೋ ಶಾಲೆಯ ಸಂಸ್ಥಾಪಕ ಮಹೇಶ ಬೀದರಕರ್ ಹೇಳಿದರು.
ಅವರು ವಿಶ್ವ ಹಿಂದು ಪರಿಷತ್ ಸಂಘದ ಶಟಾಬ್ದಿ ಹಾಗೂ ಗೋಪಾಷ್ಟಮಿ ಪ್ರಯುಕ್ತ ಪಟ್ಟಣದ ರೇಣುಕಾ ಗೋ ಶಾಲೆಯಲ್ಲಿ 130 ಗೋ ಸೇವಕರಿಗೆ ಹಾಗೂ ಗೋ ಆಧಾರಿತ ಕೃಷಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭೂಲೋಕಕ್ಕೆ ಪರಮಾತ್ಮನು ಶ್ರೀಕೃಷ್ಣ ರೂಪದಲ್ಲಿ ಬಂದ ದಿನವನ್ನು ಹಬ್ಬದಂತೆ ಆಚರಣೆ ಮಾಡುವುದೇ ಗೋಪಾಷ್ಟಮಿ ಆಗಿದೆ. ಕೃಷಿ ಭೂಮಿಗೆ ಒಳ್ಳೆಯ ಇಳ್ಳುವರಿಗೆ ಗೊಬ್ಬರ ನೀಡುತಿದ್ದ ಗೋವುಗಳನ್ನು ಮನೆಯಿಂದ, ಮನಸ್ಸಿನಿಂದ, ಹೃದಯದಿಂದ ಇಂದು ದೂರ ಮಾಡುತ್ತಿದ್ದೇವೆ. ರೈತರಿಂದ ಗೋವುಗಳು ದೂರವಾಗಬೇಕೆಂದು ಮತ್ತು ಭಾರತದ ರೈತರು ಅಭಿವೃದ್ಧಿ ಆಗಬಾರದು, ರಾಷ್ಟ್ರ ಅಭಿವೃದ್ಧಿ ಹೊಂದಬಾರದು ಎಂದು ವಿಶ್ವದ ಅಮೇರಿಕಾ, ಫ್ರಾನ್ಸ್ ರಾಷ್ಟ್ರಗಳು ಪ್ರಯತ್ನ, ಷಡೇಂತ್ರಗಳಿಂದ ಗೋವುಗಳು ದೂರವಾಗುತ್ತಿವೆ.ಹೀಗಾಗಿ ರೈತರು ಗೋವುಗಳನ್ನು ಮನೆಯ ಸದಸ್ಯರಂತೆ ಸಂರಕ್ಷಣೆ ಮಾಡಬೇಕು. ಗೋವುಗಳು ಮಾನವನ ಉತ್ತಮ ಆರೋಗ್ಯಕ್ಕೆ ಔಷಧಿ ಆಗಿದ್ದು, ಗೋವುಗಳು ಉಳಿದರೆ ನಾವು ಉಳಿಯಲು ಸಾಧ್ ಎಂದರು.
ವಕೀಲ ಸಾವನ್ ಕಲಬುರಗಿ ಮಾತನಾಡಿ, ಗೋಮಾತೆ ಗರ್ಭದಲ್ಲಿ 36 ಕೋಟಿ ದೇವತೆಗಳು ವಾಸ ಮಾಡುತ್ತಾರೆ. ಹೀಗಾಗಿ ಗೋ ಮಾತೆಯನ್ನು ತಾಯಿಯ ರೂಪದಲ್ಲಿ ನೋಡುತ್ತೇವೆ. ಪ್ರತಿಯೊಂದು ಶುಭ ಕಾರ್ಯಕ್ರಮಗಳು ಗೋ ಪೂಜೆಯಿಂದ ಪ್ರಾರಂಭ ಮಾಡಲಾಗುತ್ತದೆ. ಗೋ ಸಂರಕ್ಷಣೆ ಮಾಡಿ ಉಳಿಸುವುದು ಪ್ರತಿಯೊಬ್ಬ ಹಿಂದುವಿನ ಜವಾಬ್ದಾರಿ ಆಗಿದೆ ಎಂದರು.
ಸುಲೇಪೇಟ ಕಟಂಗೇಶ್ವರ ಮಠದ ಪ.ಪೂಜ್ಯ ಪ್ರಭು ದೇವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ರೇಣುಕಾ ಗೋಶಾಲೆಯ ಸಂಸ್ಥಾಪಕ ನರಸಿಂಗರಾವ್ ದರವೇಶ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶರಣು ನಾಟಿಕಾರ, ಆರ್ ಆರ್ ಪಾಟೀಲ್, ರೇವಣಸಿದ್ಧ ಮೋಘ, ವೀರೇಂದ್ರ ಮುರುಡ, ಶ್ರೀಕಾಂತ ನಾಗಶೆಟ್ಟಿ, ಚೆನ್ನರೆಡ್ಡಿ, ತುಳಸಿರಾಮ ಪೋಳ, ನಾಗೇಶ ಪಿತ್ತಲ್, ಮಲ್ಲಿಕಾರ್ಜುನ ಉಡುಪಿ, ಶಿವಕುಮಾರ ಹಿರೇಮಠ ಅವರು ಉಪಸ್ಥಿತರಿದ್ದರು.
